ಮಾಯಿ ಮತ್ತು ದಿವಾನ್ನಂತಹ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ನಿರ್ಮಾಪಕ ಸೂರ್ಯ ಪ್ರಕಾಶ್ ಹೃದಯಾಘಾತದಿಂದ ನಿಧನರಾದರು. ಈ ಬಗ್ಗೆ ನಟ ಹಾಗೂ ರಾಜಕಾರಣಿ ಆರ್ ಶರತ್ ಕುಮಾರ್ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದು, ನಿನ್ನೆಯಷ್ಟೇ ದಿವಾನ್ ನಿರ್ದೇಶಕರ ಜೊತೆ ಮಾತಿಗಿಳಿದಿದ್ದು, ಅವರ ನಿಧನ ತಮಗೆ ತೀವ್ರ ದುಃಖ ತಂದಿದ್ದಾರೆ.
“ಅವರ ನಷ್ಟದಿಂದ ದುಃಖಿತರಾಗಿರುವ ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಆಳವಾದ ಸಂತಾಪ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದಿದ್ದಾರೆ. ಶರತ್ ಕುಮಾರ್ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.
56ನೇ ವಯಸ್ಸಿಗೆ ಸೂರ್ಯ ಪ್ರಕಾಶ್ ಸಾವಿನ ಸುದ್ದಿ ಕೇಳಿ ಸುದ್ದಿ ಕೇಳಿ ಕುಟುಂಬಸ್ಥರು, ಅಭಿಮಾನಿಗಳಿಗೆ ಆಘಾತವಾಗಿದೆ. ಅಂತಿಮ ವಿಧಿವಿದಾನಗಳ ಬಗ್ಗೆ ಇನ್ನಷ್ಟೇ ಹೆಚ್ಚಿನ ವಿವರ ಸಿಗಬೇಕಿದೆ. ಅಂದಹಾಗೆ, ಮಾಯಿ, ಮಣಿಕ್ಕಂ, ದಿವಾನ್, ಭರತಸಿಂಹ ರೆಡ್ಡಿ ಸಿನಿಮಾಗಳನ್ನು ನಿರ್ದೇಶಿಸುವ ಮೂಲಕ ಸೂರ್ಯ ಪ್ರಕಾಶ್ ಖ್ಯಾತಿ ಘಳಿಸಿದ್ದರು.