ಚೆನ್ನೈ: 2024ರ ಕೇಂದ್ರ ಬಜೆಟ್ನಲ್ಲಿ ರಾಜ್ಯವನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಶನಿವಾರ ತಮಿಳುನಾಡಿನಾದ್ಯಂತ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿತು. ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯ 9 ನೇ NITI ಆಯೋಗದ ಆಡಳಿತ ಮಂಡಳಿ ಸಭೆ ಆರಂಭಕ್ಕೂ ಮುನ್ನ ಪ್ರತಿಭಟನೆ ನಡೆಯಿತು.
ಇದಕ್ಕೂ ಮುನ್ನಾ ಮಾತನಾಡಿದ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಕೇಂದ್ರ ಬಜೆಟ್ ಕುರಿತು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿಯನ್ನು ಬಹಿಷ್ಕರಿಸಿದ ರಾಜ್ಯಗಳು ಮತ್ತು ಜನರ ವಿರುದ್ಧ “ಸೇಡಿನ ಕ್ರಮ” ದಂತೆ ಬಜೆಟ್ ತೋರುತ್ತಿದೆ ಎಂದರು.
‘ನೀತಿ ಆಯೋಗ ಸಭೆಯಲ್ಲಿ ಭಾಗವಹಿಸಬೇಕಾಗಿತ್ತು. ಆದರೆ, ತಮಿಳಿನ ಬಗೆಗಿನ ತಾರತಮ್ಯ ಧೋರಣೆಯಿಂದಾಗಿ ನ್ಯಾಯವನ್ನು ಕೋರಿ ಜನರ ಮುಂದೆ ಬಂದಿದ್ದೇನೆ. “ತಮಿಳುನಾಡಿನ ಸರ್ಕಾರವು ಕಳೆದ ಮೂರು ವರ್ಷಗಳಿಂದ ಜಾರಿಗೆ ತಂದಿರುವ ಯೋಜನೆಗಳ ಪ್ರಯೋಜನಗಳು ನೇರವಾಗಿ ಪ್ರತಿ ಕುಟುಂಬಕ್ಕೂ-ಪ್ರತಿ ನಾಗರಿಕರಿಗೂ ತಲುಪುತ್ತಿದೆ. ಇದು ನಮ್ಮ ಸರ್ಕಾರದ ಧ್ಯೇಯವಾಕ್ಯವಾಗಿದೆ, ಆದರೆ ಕೇಂದ್ರ ಸರ್ಕಾರವು ನಮ್ಮ ಪ್ರಗತಿಪರ ಚಿಂತನೆಗಳಿಗೆ ವಿರುದ್ಧವಾದ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ತಮಿಳುನಾಡನ್ನು ಕಡೆಗಣಿಸುವುದನ್ನು ಮುಂದುವರೆಸಿದೆ.ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿದ 2024–25ರ ಕೇಂದ್ರ ಬಜೆಟ್ ನಲ್ಲಿ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಮೂಲಸೌಕರ್ಯದಲ್ಲಿ ಉತ್ತೇಜನ ಸೇರಿದಂತೆ ಪ್ರಮುಖ ಘೋಷಣೆಗಳನ್ನು ಮಾಡಿದರು. ನೀತಿ ಆಯೋಗದ ಸಭೆಯನ್ನು ಬಹಿಷ್ಕರಿಸುವುದಾಗಿ ಘೋಷಿಸಿದರು ಸಿಎಂ ಸ್ಟಾಲಿನ್ ಗುರುವಾರ ಹೇಳಿದ್ದರು. ಇದರ ಬೆನ್ನಲ್ಲೇ ಹಿಮಾಚಲ ಪ್ರದೇಶದ ಸುಖವಿಂದರ್ ಸಿಂಗ್ ಸುಖು, ಕರ್ನಾಟಕದ ಸಿದ್ದರಾಮಯ್ಯ ಮತ್ತು ತೆಲಂಗಾಣದ ರೇವಂತ್ ರೆಡ್ಡಿ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಕೂಡ ಸಭೆಯಿಂದ ಹೊರಗುಳಿಯಲಿದ್ದಾರೆ.