ಬಿಗ್ಬಾಸ್ 10ರ ಸ್ಪರ್ಧಿ, ನಟಿ ತನಿಷಾ ಕುಪ್ಪಂಡ ಇದೀಗ ಹೊಸ ಉದ್ಯಮಕ್ಕೆ ಕೈ ಹಾಕಿದ್ದಾರೆ.
ನಟನೆಯ ಜೊತೆಗೆ ಯಶಸ್ವಿ ಉದ್ಯಮಿಯಾಗಿ ಸೈ ಎನಿಸಿಕೊಂಡಿರುವ ತನಿಷಾ ಹೋಟೆಲ್ ಬ್ಯುಸಿನೆಸ್ ಬಳಿಕ ಇದೀಗ ಮತ್ತೊಂದು ಬ್ಯುಸಿನೆಸ್ ಶುರುಮಾಡಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ‘ಅಪ್ಪುಸ್ 93 ಕಿಚನ್’ ಹೆಸರಿನ ಹೋಟೆಲ್ ಅನ್ನು ತನಿಷಾ ಕುಪ್ಪಂಡ ನಡೆಸುತ್ತಿದ್ದಾರೆ. ಈ ಹೋಟೆಲ್ನಲ್ಲಿ ರುಚಿಕರವಾದ ವೆನ್ ಹಾಗೂ ನಾನ್ವೆಜ್ ಖಾದ್ಯಗಳನ್ನು ಸರ್ವ್ ಮಾಡಲಾಗುತ್ತದೆ.
ಇದೀಗ ತನಿಷಾ ಕುಪ್ಪಂಡ ಮತ್ತೊಂದು ಹೊಸ ಬ್ಯುಸಿನೆಸ್ ಪ್ರಾರಂಭ ಮಾಡಿದ್ದಾರೆ. ತನಿಷಾ ಕುಪ್ಪಂಡ ತಮ್ಮ ಕುಟುಂಬದ ಹೆಸರಿನಲ್ಲಿ ಆಭರಣಗಳ ಮಳಿಗೆ ಪ್ರಾರಂಭಿಸಿದ್ದಾರೆ.
‘ಕುಪ್ಪಂಡ ಜ್ಯುವೆಲರೀಸ್’ ಹೆಸರಿನ ಆಭರಣ ಮಳಿಗೆಯನ್ನು ತನಿಷಾ ಕುಪ್ಪಂಡ ಪ್ರಾರಂಭ ಮಾಡಿದ್ದಾರೆ. ಇಲ್ಲಿ ಬೆಳ್ಳಿಯ ಆಭರಣಗಳು ಇತರೆ ಲೋಹಗಳಿಂದ ಮಾಡಿದ ಕಡಿಮೆ ಬೆಲೆಯ ಆಭರಣಗಳನ್ನು ಮಾರಾಟ ಮಾಡಲಾಗುತ್ತದೆ.
29ನೇ ತಾರೀಖಿನಂದ ಶಾಸಕ ಪ್ರಿಯಾ ಕೃಷ್ಣ, ನಟ ಲೂಸ್ ಮಾದ ಯೋಗಿ ‘ಕುಪ್ಪಂಡ ಜ್ಯುವೆಲರೀಸ್’ ಉದ್ಘಾಟಿಸಿದ್ದಾರೆ.
‘ಕುಪ್ಪಂಡ ಜ್ಯುವೆಲರೀಸ್’ಗೆ ತನಿಷಾ ಕುಪ್ಪಂಡರ ಗೆಳೆಯ ಕಾರ್ತಿಕ್ ಮಹೇಶ್ ಸಹ ಭೇಟಿ ಕೊಟ್ಟು ಗೆಳತಿಗೆ ಶುಭ ಹಾರೈಸಿದರು. ಬಿಗ್ಬಾಸ್ ಮನೆಯಲ್ಲಿದ್ದಾಗಲೇ ತನಿಷಾರ ಕನಸುಗಳನ್ನು ಕೇಳಿದ್ದೆ ಈಗ ನನಸಾಗುತ್ತಿರುವುದು ನೋಡುತ್ತಿದ್ದೇನೆ ಕಾರ್ತಿಕ್ ಪ್ರತಿಕ್ರಿಯಿಸಿದ್ದಾರೆ.