ಸಿಕ್ಕಿಂ:- ಕಾರುಗಳಿಗೆ ಹಾಲಿನ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ 3 ಮಂದಿ ಸಾವನ್ನಪ್ಪಿದ್ದು, 20 ಜನರಿಗೆ ಗಾಯವಾದ ಘಟನೆ ಸಿಕ್ಕಿಂನ ರಾಣಿಪೂಲ್ನಲ್ಲಿ ಜರುಗಿದೆ.
ಡಿಕ್ಕಿಯ ರಭಸಕ್ಕೆ ಆ ಪ್ರದೇಶದಲ್ಲಿದ್ದ ಜನರು ವಾಹನಗಳಡಿ ಸಿಲುಕಿ ನುಜ್ಜುಗುಜ್ಜಾಗಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಟ್ಯಾಂಕರ್ ಒಂದು ಕಾರುಗಳಿಗೆ ಡಿಕ್ಕಿ ಹೊಡೆದ ತಕ್ಷಣವು ಆ ವಾಹನಗಳು ಜಾತ್ರೆ ನಡೆಯುತ್ತಿದ್ದ ಮೈದಾನದೊಳಗೆ ನುಗ್ಗಿತ್ತು. ಘಟನೆಯಲ್ಲಿ ಜನರು ವಾಹನದಡಿ ಸಿಲುಕಿಕೊಂಡ ಜನರನ್ನು ಹೊರತೆಗೆಯಲು ಹರಸಾಹಸ ಪಟ್ಟಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ ಹಾಲಿನ ಟ್ಯಾಂಕರ್ ಬ್ರೇಕ್ ಫೇಲ್ ಆಗಿದ್ದರಿಂದ, ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಗಾಯಾಳುಗಳನ್ನು ಸೆಂಟ್ರಲ್ ರೆಫರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಅಪಘಾತದ ವೇಳೆ ಮೇಳದ ಮೈದಾನದಲ್ಲಿ ‘ತಾಂಬೋಲ’ ಆಟ ನಡೆಯುತ್ತಿದ್ದರಿಂದ ಜನರಿಂದ ತುಂಬಿ ತುಳುಕುತ್ತಿತ್ತು. ಹಾಲಿನ ಟ್ಯಾಂಕರ್ ಅದರ ಬದಿಯಲ್ಲಿ ಸಿಕ್ಕಿಂ ಹಾಲು ಒಕ್ಕೂಟದ ಲೇಬಲ್ ಅನ್ನು ಹೊಂದಿತ್ತು. ಆಘಾತಕಾರಿ ಸಿಸಿಟಿವಿ ದೃಶ್ಯಾವಳಿಗಳು ಪ್ರಭಾವದ ಕ್ಷಣವನ್ನು ಸೆರೆಹಿಡಿಯಲಾಗಿದೆ.