ಬೆಂಗಳೂರು: ಕಾಫಿ ಬೆಳೆಗಾರರ (Coffee Growers) ಜಮೀನು ಅತಂತ್ರ ಪರಿಸ್ಥಿತಿಯಲ್ಲಿತ್ತು. ಕಂದಾಯ ಇಲಾಖೆಯ (Revenue Department) ಕಾಫಿ ಜಮೀನುಗಳಿಗೆ ದರ ನಿಗದಿ ಮಾಡಿದ್ದೇವೆ. 30 ವರ್ಷಗಳ ಕಾಲ ರೈತರಿಗೆ ಲೀಸ್ ಕೊಡುವ ತೀರ್ಮಾನವನ್ನು ಸದನದಲ್ಲಿ ಮಾಡಿದ್ದೇವು. ಅದರಂತೆ ದರ ನಿಗದಿಯನ್ನು ಸರ್ಕಾರದಿಂದಲೇ ಮಾಡಿದ್ದೇವೆ ಎಂದು ಕಂದಾಯ ಸಚಿವ ಆರ್ ಅಶೋಕ (R Ashok) ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಕಾಫಿ ಬೆಳೆಗಾರರ ಬೇಡಿಕೆಗೆ ತಕ್ಕಂತೆ ದರ ನಿಗದಿ ನಿರ್ಧಾರ ಮಾಡಿದ್ದೇವೆ. ಕಾಫಿ ಬೆಳೆಗಾರರ ಬೇಡಿಕೆ ವಿಷಯದಲ್ಲಿ ನಾವು ನುಡಿದಂತೆ ನಡೆದಿದ್ದೇವೆ ಎಂದರು.
ಕಾಫಿ ಬೆಳೆಯುವ ರೈತರಿಗೆ ಜಮೀನಿನ ದರ ನಿಗದಿ
- 1 ರಿಂದ 5 ಎಕರೆವರೆಗೆ ಪ್ರತಿ ವರ್ಷ 1000 ರೂ. 2. 5 ರಿಂದ 10 ಎಕರೆವರೆಗೆ 1500 ರೂ. 3. 10 ರಿಂದ 15 ಎಕವರೆಗೆ 2000 ರೂ. 4. 15 ರಿಂದ 20 ಎಕವರೆಗೆ 2500 ರೂ. 5. 20 ರಿಂದ 25 ಎಕವರೆಗೆ 3000 ರೂ. ನಿಗದಿ ಮಾಡಿದ್ದೇವೆ.
52 ಸಾವಿರ ಗೊಲ್ಲರ ಹಟ್ಟಿ, ಕುರುಬರ ಹಟ್ಟಿಗೆ ಹಕ್ಕು ಪತ್ರ ನೀಡಲಾಗಿದೆ. ಈಗ ಕುರುಬರ ಹಟ್ಟಿ, ಗೊಲ್ಲರಹಟ್ಟಿಗೆ ಗ್ರಾಮ ಅಂತ ನಮೂದು ಮಾಡಲಾಗಿದೆ. 60 ಸಾವಿರ ಹಕ್ಕು ಪತ್ರ ನೀಡಲು ನಿರ್ಧಾರ ಮಾಡಲಾಗಿದೆ. 40 ಸಾವಿರ ಹಕ್ಕು ಪತ್ರ ನೀಡಲಾಗಿದೆ. ಉಳಿದದ್ದು ಡಿಸಿಗಳಿಗೆ ಸೂಚಿಸಿ ಕೊಡಲಾಗುವುದು. ಗ್ರಾಮ ವಾಸ್ತವ್ಯದಲ್ಲಿ ನನಗೆ ಮನವಿ ಪತ್ರ ನೀಡಿದ್ದನ್ನು ಈಡೇರಿಸುವ ಕೆಲಸ ಮಾಡಿದ್ದೇನೆ ಎಂದರು.
ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲಿ 30 ವರ್ಷದಿಂದ ಕಾಫಿ ಬೆಳೆಗಾರರ ರೀತಿ, ಕುಮ್ಕಿ ಬೆಳೆಗಾರರು ಅಲೆದಾಡುತ್ತಿದ್ದರು. ಬೇಸಾಯಕ್ಕೆ ಅಲ್ಲದೆ ಸೊಪ್ಪು, ಹುಲ್ಲುಬಣಿ, ಸೌದೆಗೆ ಈ ಪ್ರದೇಶ ಬಳಸುತ್ತಿದ್ದರು. ನನ್ನ ನೇತೃತ್ವದ ಕ್ಯಾಬಿನೆಟ್ ಸಬ್ ಕಮಿಟಿ ಮಾಡಲಾಗಿತ್ತು. 5 ಎಕರೆ ಮೀರದಂತೆ, 30 ವರ್ಷ ಲೀಸ್ ಕೊಡಲು ನಿರ್ಧಾ ಮಾಡಲಾಗಿದೆ. 1964 ಕಾಯ್ದೆ ತಿದ್ದುಪಡಿ ಮಾಡಲು ಸಿಎಂ ಬೊಮ್ಮಾಯಿಯವರಿಗೆ ಶಿಫಾರಸ್ಸು ಮಾಡಿದ್ದೇನೆ. ಕುಮ್ಕಿ ಜಮೀನು ಬಳಸುವ ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದೇವೆ. ಕಂದಾಯ ಸಚಿವನಾಗಿ ಕಾಫಿ ಬೆಳೆಗಾರರ ರೀತಿ, ಕುಮ್ಕಿ ಜಮೀನಿಗೂ ನ್ಯಾಯ ಒದಗಿಸಿದ್ದೇನೆ. ದರ ನಿಗದಿಯಾಗಿಲ್ಲ, ಕಡಿಮೆ ದರದಲ್ಲಿ ಮಾಡಲಾಗುವುದು. ಮಂಗಳೂರಿನಲ್ಲಿ ಅತಿ ಹೆಚ್ಚು ಗೇರು ಪ್ಲಾಂಟ್ ಮಾಡಿದ್ದು, ಈಗ ಆದಾಯ ಬರುವಂತೆ ಮರ ಬೆಳೆದಿದೆ ಎಂದು ತಿಳಿಸಿದರು.