ಸ್ಯಾಂಡಲ್ವುಡ್ನ ನವ ಜೋಡಿ ತರುಣ್ ಮತ್ತು ಸೋನಲ್ ತಿಂಗಳು ಕಳೆಯೋದ್ರಲ್ಲಿ ಎರಡನೇ ಸಲ ಮದುವೆ ಆಗಿದ್ದಾರೆ. ಈ ಮೊದಲು ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದ ಜೋಡಿ ಇದೀಗ ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ ಆಗಿದ್ದಾರೆ.
ಸೋನಲ್ ಮತ್ತು ತರುಣ್ ಮತ್ತೊಮ್ಮೆ ಮದುವೆ ಆಗಿದ್ದಾರೆ. ಮಂಗಳೂರಿನ ಚರ್ಚ್ ನಲ್ಲಿ ವಿವಾಹ ಆಗಿದ್ದಾರೆ. ಎರಡನೇ ಸಲ ಮದುವೆ ಆದ ಸಿನಿರಂಗದ ಎರಡನೇ ಜೋಡಿ ಇದಾಗಿದೆ. ಈ ಹಿಂದೆ ಚಿರಂಜೀವಿ ಮತ್ತು ಮೇಘನಾ ಎರಡು ಸಲ ಮದುವೆ ಆಗಿದ್ರು.
ತರುಣ್ ಸುಧೀರ್ ಮತ್ತು ಸೋನಲ್ ಕಳೆದ ಆಗಸ್ಟ್ ತಿಂಗಳ 10 ಮತ್ತು 11 ರಂದು ಬೆಂಗಳೂರಿನಲ್ಲಿ ಸಾಕಷ್ಟು ಅದ್ದೂರಿಯಾಗಿ ಹಿಂದೂ ಸಂಪ್ರದಾಯದಂತೆ ಮದುವೆ ಆಗಿದ್ದರು. ಇದೀಗ ಮಂಗಳೂರಿನ ಚರ್ಚ್ ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಉಂಗುರು ಬದಲಾಯಿಸಿಕೊಂಡಿದ್ದಾರೆ.
ತರುಣ್ ಸುಧೀರ್ ವೈಟ್ ಆ್ಯಂಡ್ ಬ್ಲ್ಯಾಕ್ ಕಾಂಬಿನೇಷನ್ ಬ್ಲೆಜರ್ ತೊಟ್ಟಿದ್ದಾರೆ. ಸೋನಲ್ ಬಿಳಿ ಬಣ್ಣದ ಗೌನ್ ತೊಟ್ಟಿದ್ದಾರೆ. ಕ್ರಿಶ್ಚಿಯನ್ ಸಂಪ್ರದಾಯದಂತೇನೂ ಈ ಜೋಡಿ ಇದೀತ ಸತಿ-ಪತಿ ಆಗಿದ್ದಾರೆ.
ತರುಣ್ ಮತ್ತು ಸೋನಲ್ ಮದುವೆಗೆ ನಟ ನೆನಪಿರಲಿ ಪ್ರೇಮ್, ತರುಣ್ ಅಮ್ಮ ಮಾಲತಿ ಸುಧೀರ್ ಸೇರಿದಂತೆ ಇನ್ನು ಅನೇಕರು ಸಾಕ್ಷಿ ಆಗಿದ್ದಾರೆ.
ತರುಣ್ ಸುಧೀರ್ ಮತ್ತು ಸೋನಲ್ ಹನಿಮೂನ್ ಪ್ಲಾನ್ ಕೂಡ ಮಾಡಿದ್ದಾರೆ. ಮಾಲ್ಡೀವ್ಸ್ಗೆ ಈ ಜೋಡಿ ಹನಿಮೂನ್ಗೆ ಹೋಗ್ಬೇಕು ಅಂತ ಪ್ಲಾನ್ ಮಾಡಿದ್ದಾರೆ. ಆದರೆ, ಯಾವಾಗ ಅನ್ನೋದು ಮಾತ್ರ ಇನ್ನು ಹೇಳಿಕೊಂಡಿಲ್ಲ.