ಸ್ಯಾಂಡಲ್ ವುಡ್ ಸ್ಟಾರ್ ಡೈರೆಕ್ಟರ್ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂಥೆರೋ ಮದುವೆಯಾಗಿ ಎರಡು ತಿಂಗಳು ಕಳೆದಿದೆ. ಇದೀಗ ಈ ಜೋಡಿ ಹನಿಮೂನ್ ಗೆ ಮಾಲ್ಡೀವ್ಸ್ ಗೆ ತೆರಳಿದ್ದಾರೆ. ಕಪಲ್ಸ್ ಗಳ ಫೇವರೆಟ್ ಸ್ಪಾಟ್ ಮಾಲ್ಡೀವ್ಸ್ ನಲ್ಲಿ ಸೋನಲ್ ಹಾಗೂ ತರುಣ್ ಕೈ ಕೈ ಹಿಡಿದು ಸುತ್ತಾಡಿದ್ದಾರೆ.
ಮಾಲ್ಡೀವ್ಸ್ ನಲ್ಲಿ ಪತಿಯೊಂದಿಗೆ ಎಂಜಾಯ್ ಮಾಡುತ್ತಿರುವ ಫೋಟೋವನ್ನು ಸೋನಲ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಂಚಿಕೊಂಡಿರುವ ಸೋನಲ್. ನನ್ನ ವ್ಯಕ್ತಿಯೊಂದಿಗೆ ಸ್ವರ್ಗವನ್ನು ಹುಡುಕುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ತರುಣ್ಸುಧೀರ್ ಹಾಗೂ ಸೋನಲ್ ಮೊಂಥೆರೋ ಆಗಸ್ಟ್ 11ರಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಬಳಿಕ ಮಂಗಳೂರಿನ ಚರ್ಚ್ ನಲ್ಲಿ ಕ್ರೈಸ್ತ ಸಂಪ್ರದಾಯದಂತೆ ಉಗುರು ಬದಲಾಯಿಸಿಕೊಂಡಿದ್ದರು. ಹಿರಿಯರ ಸಮ್ಮುಖದಲ್ಲಿ ನಡೆದ ಮದುವೆ ಸಮಾರಂಭಕ್ಕೆ ಅನೇಕ ಗಣ್ಯರು ಸಾಕ್ಷಿಯಾಗಿದ್ದರು.
ಸೋನಲ್ ಹಾಗೂ ತರುಣ್ ಹನಿಮೂನ್ ಗೆ ಎಲ್ಲಿಗೆ ಹೋಗ್ತಾರೆ ಎಂಬ ಪ್ರಶ್ನೆ ಫ್ಯಾನ್ಸ್ ಕಾಡಿತ್ತು. ಅದಕ್ಕೆ ಮಾಲ್ಡೀವ್ಸ್ ಎನ್ನುವ ಉತ್ತರ ಸಿಕ್ಕಿದ್ರೂ, ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡು ನಂತ್ರ ದುಬೈಗೆ ಹೋಗಿತ್ತು ಜೋಡಿ. ಮುದ್ದಾದ ಮಗುವಿನ ಜೊತೆ ಫೋಟೋಕ್ಕೆ ಫೋಸ್ ನೀಡಿದ್ದ ತರುಣ್ ಹಾಗೂ ಸೋನಾಲಿ, ಹನಿಮೂನ್ ಸ್ಥಳ ಬದಲಿಸಿದ್ರಾ ಎಂಬ ಪ್ರಶ್ನೆ ಕಾಡುವಂತೆ ಮಾಡಿದ್ರು. ಆದ್ರೀಗ ಮಾಲ್ಡೀವ್ಸ್ ನಲ್ಲಿರುವ ಅವರ ಫೋಟೋ ಹಾಗೂ ವಿಡಿಯೋ, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ತರುಣ್ ಸುಧೀರ್ ಕೂಡ ತಮ್ಮ ಇನ್ಸ್ಟಾ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಸಮುದ್ರದ ಅಲೆಗಳನ್ನು ನೀವು ನೋಡ್ಬಹುದು. ಇಬ್ಬರ ಹೊಟೇಲ್ ಸುತ್ತಾಟ, ಊಟ, ಸೈಕಲ್ ಜೊತೆ ಸುಂದರ ಪರಿಸರವನ್ನು ವಿಡಿಯೋದಲ್ಲಿ ಸೆರೆ ಹಿಡಿಯಲಾಗಿದೆ.