ಮಿಲ್ಕಿ ಬ್ಯೂಟಿ ನಟಿ ತಮನ್ನಾ ಭಾಟಿಯಾ ಹಲವು ವರ್ಷಗಳಿಂದ ಟಾಲಿವುಡ್ ಚಿತ್ರರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ತಮ್ಮ ಅಭಿನಯ ಮತ್ತು ಸೌಂದರ್ಯದಿಂದ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ನಟಿ ತಮನ್ನಾ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಯಕ್ಟೀವ್ ಆಗಿದ್ದು, ಆಗಾಗ ಹೊಸ ಫೋಟೋಶೂಟ್ಗಳನ್ನು ಹಂಚಿಕೊಳ್ಳುತ್ತಾರೆ.
ಆದ್ರೆ ಬೆಂಗಳೂರಿನ ಹೆಬ್ಬಾಳದಲ್ಲಿರುವ ಸಿಂಧಿ ಶಾಲೆಯ ಪಠ್ಯವೊಂದರಲ್ಲಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಕುರಿತಾದ ಪಠ್ಯವೊಂದನ್ನು ಅಳವಡಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಹೌದು ಸಿಂಧ್ ವಿಭಜನೆಯ ನಂತರ ಭಾರತೀಯರ ಜನಜೀವನ ಎಂಬ ವಿಷಯದಡಿ ತಮನ್ನಾ ಭಾಟಿಯಾ ಅವರ ಪಠ್ಯವನ್ನು ಅಳವಡಿಸಲಾಗಿದೆ. ಶಾಲೆಯ 7ನೇ ತರಗತಿಯ ಪಠ್ಯದಲ್ಲಿ ತಮನ್ನಾ ಪಾಠವನ್ನು ಅಳವಡಿಸಲಾಗಿದ್ದು, ಅದನ್ನೇ ವಿದ್ಯಾರ್ಥಿಗಳಿಗೆ ಹೇಳಿಕೊಡಲಾಗಿದೆ. ಇದು ವಿವಾದಕ್ಕೆ ಕಾರಣವಾಗಿದೆ.
ತಮನ್ನಾ ಪಾಠದ ವಿಚಾರವಾಗಿ ತೀವ್ರ ವಿಷಾದ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳ ಪೋಷಕರು, ತಮನ್ನಾ ಅವರು ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸುತ್ತಾರೆ. ಅಂಥ ಸಿನಿಮಾಗಳಲ್ಲಿ ಅವರು ಪೋರ್ನ್ ರೀತಿಯ ದೃಶ್ಯಗಳಲ್ಲಿಯೂ ಕಾಣಿಸಿಕೊಳ್ಳುತ್ತಾರೆ. ಅಂಥವರು ಮಕ್ಕಳಿಗೆ ಆದರ್ಶವಾಗಬೇಕೇ. ಅವರಿಂದ ಮಕ್ಕಳು ಕಲಿಯುವುದಾದರೂ ಏನಿದೆ
ಎಂದು ಶಾಲೆಯ ಆಡಳಿತ ಮಂಡಳಿಯನ್ನು ಪ್ರಶ್ನಿಸಿದ್ದಾರೆ.
ಶಾಲೆಯ ಆಡಳಿತ ಮಂಡಳಿಯು ಪೋಷಕರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಿದೆ. ಇದು ಮುಖ್ಯ ಪಠ್ಯದಲ್ಲಿರುವ ಪಾಠವಲ್ಲ. ಇದು ಪಠ್ಯೇತರ ಪಠ್ಯಕ್ಕಾಗಿ ಒಂದಿಷ್ಟು ಪುಸ್ತಕಗಳನ್ನು ಸಿಲೆಬಸ್ ಅಡಿಯಲ್ಲಿ ಮುದ್ರಿಸಲಾಗಿದ್ದು, ಅದರಲ್ಲಿ ತಮನ್ನಾ ಪಾಠವನ್ನು ಅಳವಡಿಸಲಾಗಿದೆ. ಈ ಪಠ್ಯೇತರ ಪಠ್ಯವು ಸಿಂಧು ಕಣಿವೆಯ ವಿಭಜನೆಯ ನಂತರ ಸಿಂಧೂ ಜನಾಂಗದ ಜನಜೀವನ ಹೇಗಿದೆ ಎಂಬುದಾಗಿದೆ.
ತಮನ್ನಾ ಅವರು ಸಿಂಧಿ ಹಿಂದೂ ಸಮುದಾಯಕ್ಕೆ ಸೇರಿರುವುದರಿಂದ ಹಾಗೂ ಸಿನಿಮಾ ಜಗತ್ತಿನಲ್ಲಿ ಅವರೂ ಸಹ ಸಾಧನೆ ಮಾಡಿರುವುದರಿಂದ ಆ ನಿಟ್ಟಿನಲ್ಲಿ ಈ ಪಠ್ಯವನ್ನು ಸೇರಿಸಲಾಗಿದೆ ಎಂದು ಹೇಳಿದೆ. ಆದರೆ, ವಿದ್ಯಾರ್ಥಿಗಳ ಪೋಷಕರು ಈ ಪಾಠವನ್ನು ಮಕ್ಕಳಿಗೆ ಮಾಡದಂತೆ ತಾಕೀತು ಮಾಡಿದ್ದಾರೆಂದು ಹೇಳಲಾಗಿದೆ. ಅಂತರ್ಜಾಲದಲ್ಲಿ ಸಿಗುವ ಮಾಹಿತಿಯ ಪ್ರಕಾರ, ಬೆಂಗಳೂರಿನಲ್ಲಿ ಮೂರು ಸಿಂಧಿ ಶಾಲೆಗಳಿವೆ. ಹೆಬ್ಬಾಳದಲ್ಲಿರುವ ಶಾಲೆ ಇದರಲ್ಲೊಂದು. ಇನ್ನುಳಿದ ಶಾಲೆಗಳು, ಶೇಷಾದ್ರಿಪುರಂನಲ್ಲಿ ಹಾಗೂ ಗಾಂಧಿ ನಗರದಲ್ಲಿ ಇವೆ.