ಮುಂಬೈ: ಇದೇ ಜುಲೈ 27ರಿಂದ ಶ್ರೀಲಂಕಾ ವಿರುದ್ಧ ನಡೆಯಲಿರುವ ದ್ವಿಪಕ್ಷೀಯ ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಿದೆ. ಈ ಪ್ರವಾಸವು ಮೂರು ಪಂದ್ಯಗಳ ಅಂತಾರಾಷ್ಟ್ರೀಯ ಟಿ20 ಸರಣಿ, ಮೂರು ಪಂದ್ಯಗಳ ಏಕದಿನ ಸರಣಿಯೂ ಆಯೋಜನೆಗೊಂಡಿದೆ.
ಟಿ20 ತಂಡಕ್ಕೆ ಸೂರ್ಯಕುಮಾರ್ ಯಾದವ್, ಏಕದಿನ ಪಂದ್ಯಕ್ಕೆ ರೋಹಿತ್ ಶರ್ಮಾ ನಾಯಕನಾಗಿ ಮುಂದುವರಿಸಿದ್ದಾರೆ. ಟಿ20 ವಿಶ್ವಕಪ್ ವಿಜೇತ ತಂಡದಲ್ಲಿ ಉಪನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ ಅವರ ಬದಲಿಗೆ ಸೂರ್ಯಕುಮಾರ್ ಯಾದವ್ಗೆ ಬಿಸಿಸಿಐ ಪಟ್ಟಕಟ್ಟಿದೆ.
ಏಕದಿನ ಸರಣಿಗೆ ಟೀಮ್ ಇಂಡಿಯಾ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಕೆ.ಎಲ್ ರಾಹುಲ್ (WK), ರಿಷಭ್ ಪಂತ್ (WK), ಶ್ರೇಯಸ್ ಅಯ್ಯರ್, ರಿಯಾನ್ ಪರಾಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಖಲೀಲ್ ಅಹ್ಮದ್, ಮೊಹಮ್ಮದ್ ಸಿರಾಜ್, ಆರ್ಷ್ದೀಪ್ ಸಿಂಗ್, ಹರ್ಷಿತ್ ರಾಣಾ
ಜುಲೈ 27ರಿಂದ ಆರಂಭವಾಗಲಿರೋ ಟಿ20 ಸರಣಿಗೂ ತಂಡವನ್ನ ಆಯ್ಕೆ ಮಾಡಲಾಗಿದೆ. 2026ರ ಟಿ20 ವಿಶ್ವಕಪ್ ಟೂರ್ನಿಯನ್ನ ಟಾರ್ಗೆಟ್ ಮಾಡಿರುವ ನಯಾ ಕೋಚ್ ಗಂಭೀರ್ ಹಾಗೂ ಸೆಲೆಕ್ಷನ್ ಕಮಿಟಿ ಚೇರ್ಮನ್ ಅಜಿತ್ ಅಗರ್ಕರ್ ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದಾರೆ. ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ 15 ಯುವ ಆಟಗಾರರ ತಂಡವನ್ನ ಚುಟುಕು ಫಾರ್ಮೆಟ್ಗೆ ಸೆಲೆಕ್ಟ್ ಮಾಡಲಾಗಿದೆ.
T20 ಸರಣಿಗೆ ಟೀಮ್ ಇಂಡಿಯಾ: ಸೂರ್ಯಕುಮಾರ್ (ನಾಯಕ), ಶುಭ್ಮನ್ ಗಿಲ್ (ಉಪ ನಾಯಕ), ಯಶಸ್ವಿ ಜೈಸ್ವಾಲ್, ರಿಂಕು ಸಿಂಗ್, ರಿಯಾನ್ ಪರಾಗ್, ರಿಷಭ್ ಪಂತ್ (WK), ಸಂಜು ಸ್ಯಾಮ್ಸನ್ (WK), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ನೋಯ್, ಆರ್ಷ್ದೀಪ್ ಸಿಂಗ್, ಖಲೀಲ್ ಅಹ್ಮದ್, ಮೊಹಮ್ಮದ್ ಸಿರಾಜ್
ಶುಬ್ಮನ್ ಗಿಲ್, ರಿಷಬ್ ಪಂತ್, ರಿಯಾನ್ ಪರಾಗ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಸರ್ ಪಟೇಲ್, ಖಲೀಲ್ ಅಹ್ಮದ್, ಮೊಹ್ಮದ್ ಸಿರಾಜ್, ಆರ್ಷ್ದೀಪ್ ಸಿಂಗ್ ಸೇರಿ ಒಟ್ಟು 9 ಆಟಗಾರರು ಏಕದಿನ ಸರಣಿ ಹಾಗೂ ಟಿ-20 ಸರಣಿಗಳಲ್ಲಿ ಆಡಲಿದ್ದಾರೆ. ಒಟ್ಟಿನಲ್ಲಿ ಸಿಂಹಳೀಯರನ್ನ ಬೇಟೆಗೆ ಸಾಕಷ್ಟು ಲೆಕ್ಕಾಚಾರ ಹಾಕಿ ಸೆಲೆಕ್ಷನ್ ಕಮಿಟಿ ಬಲಿಷ್ಠ ತಂಡವನ್ನೆ ಸೆಲೆಕ್ಟ್ ಮಾಡಿದೆ.