20 ವಿಶ್ವಕಪ್ ಚಾಂಪಿಯನ್ ಮತ್ತು ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ತನ್ನ ವಯಸ್ಸಿನ ವಿಚಾರದಲ್ಲಿ ಪಂತ್ ಬಿಸಿಸಿಐಗೆ ಮೋಸ ಮಾಡಿ ಸಿಕ್ಕಿಬಿದ್ದಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಸಿಸಿಐಗೆ ಮೋಸ ಮಾಡಿದ್ರಾ ಪಂತ್..?
ಹೌದು, ಬಿಸಿಸಿಐಗೆ ಪಂತ್ ಮೋಸ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಬಿಸಿಸಿಐ ಮುಂದೆ ಪಂತ್ ತನಗೆ ಕೇವಲ 26 ವರ್ಷ ಎಂದು ಹೇಳಿಕೊಂಡಿದ್ದಾರೆ. ಶಾಲೆಯಲ್ಲಿ ಪಂತ್ ನನಗಿಂತಲೂ 3 ವರ್ಷ ಸೀನಿಯರ್. ನನಗೆ 27 ವರ್ಷ, 30 ವರ್ಷ ಇರಬೇಕಾದ ಪಂತ್ಗೆ 26 ವಯಸ್ಸು ಆಗಿರಲು ಹೇಗೆ ಸಾಧ್ಯ? ಎಂದು ನೆಟ್ಟಿಗರು ಒಬ್ಬರು ಪ್ರಶ್ನಿಸಿದ್ದಾರೆ. ಇದಕ್ಕೆ ಪಂತ್ ಬಿಸಿಸಿಐಗೆ ಮೋಸ ಮಾಡಿದ್ದು, ಈ ವಿಚಾರ ತನಿಖೆ ಆಗಲೇಬೇಕು ಎಂದು ನೆಟ್ಟಿಗರು ಪಟ್ಟು ಹಿಡಿದಿದ್ದಾರೆ.
ಬರೋಬ್ಬರಿ 17 ವರ್ಷಗಳ ತಪಸ್ಸಿನ ಬಳಿಕ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿದೆ. ಈ ಬೆನ್ನಲ್ಲೇ ಟೀಮ್ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ವಿದಾಯ ಹೇಳಿದ್ದಾರೆ. ರಾಹುಲ್ ದ್ರಾವಿಡ್ ನಿರ್ಗಮನದ ಬಳಿಕ ಗೌತಮ್ ಗಂಭೀರ್ ಟೀಮ್ ಇಂಡಿಯಾ ಮುಖ್ಯ ಕೋಚ್ ಆಗಿ ಅನೌನ್ಸ್ ಆಗಿದ್ದಾರೆ.
ಇತ್ತೀಚೆಗಷ್ಟೇ ಜಿಂಬಾಬ್ವೆ ವಿರುದ್ಧದ ಟಿ20 ಸರಣಿ ಮುಗಿದಿದ್ದು, ಟೀಮ್ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ 3 ಟಿ20 ಪಂದ್ಯಗಳು ಮತ್ತು 3 ಏಕದಿನ ಪಂದ್ಯಗಳ ಸರಣಿ ಆಡಲಿದೆ. ಈ ಸರಣಿಗೆ ಪಂತ್ ಆಯ್ಕೆ ಆಗೋದು ಡೌಟ್ ಎನ್ನಲಾಗುತ್ತಿದೆ. ಇದಕ್ಕೆ ಕಾರಣ ಪಂತ್ ಟಿ20 ವಿಶ್ವಕಪ್ನಲ್ಲಿ ನೀಡಿದ ಕಳಪೆ ಪ್ರದರ್ಶನ.
2024ರ ಟಿ20 ವಿಶ್ವಕಪ್ನಲ್ಲಿ ಒಂದೆರಡು ಪಂದ್ಯ ಹೊರತುಪಡಿಸಿ ಪಂತ್ ಹೇಳಿಕೊಳ್ಳುವಷ್ಟು ಪ್ರದರ್ಶನವೇನು ನೀಡಿಲ್ಲ. ಅಷ್ಟೇ ಅಲ್ಲ ಇದುವರೆಗೂ ಪಂತ್ ಆಡಿರೋ 74 ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಕೇವಲ 1158 ರನ್ ಕಲೆ ಹಾಕಿದ್ದಾರೆ. ಆವರೇಜ್ ಕೇವಲ 22 ಇದ್ದು, ಸ್ಟ್ರೈಕ್ ರೇಟ್ ಕೂಡ 127 ಮಾತ್ರ ಇದೆ. ಹಾಗಾಗಿ ಪಂತ್ ಜಾಗಕ್ಕೆ ಸಂಜು ಸ್ಯಾಮ್ಸನ್ ಅವರನ್ನು ಗಂಭೀರ್ ತಂದು ಕೂರಿಸೋ ಸಾಧ್ಯತೆ ಇದೆ. ಇದರ ಮಧ್ಯೆ ಪಂತ್ ವಿರುದ್ಧ ಗಂಭೀರ ಆರೋಪ ಒಂದು ಕೇಳಿ ಬಂದಿದೆ.