ಚೀನಾ: ಸದ್ಯ ಯಾರ ಕೈಯಲ್ಲಿ ನೋಡಿದರು ಮೊಬೈಲ್ ಗಳದ್ದೇ ಹಾವಳಿ. ಚಿಕ್ಕ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮದುಕರು ಕೂಡ ಮೊಬೈಲ್ ಇಲ್ಲದೆ ಒಂದು ಕ್ಷಣವೂ ಇರದ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಈ ಮೊಬೈಲ್ ಹುಚ್ಚಿನಿಂದ ಬಾಲಕಿಯೊಬ್ಬಳು 52 ಲಕ್ಷ ಕಳೆದುಕೊಂಡಿರುವ ಘಟನೆ ದಕ್ಷಿಣ ಚೀನಾದಲ್ಲಿ ನಡೆದಿದೆ.
ಇತ್ತೀಚೆಗೆ 13 ವರ್ಷದ ಬಾಲಕಿಯೊಬ್ಬಳು ಆನ್ಲೈನ್ ಗೇಮಿಂಗ್ ಬಲೆಗೆ ಬಿದ್ದು 52,19,809 ರೂಪಾಯಿ ಕಳೆದುಕೊಂಡಿದ್ದಾಳೆ. ಹುಡುಗಿ ತನ್ನ ತಾಯಿಯ ಮೊಬೈಲ್ ತೆಗೆದುಕೊಂಡು ಆಟ ಆಡುತ್ತ ಮೊಬೈಲ್ ಲ್ಲಿದ್ದ ಇಡೀ ಬ್ಯಾಂಕ್ ಬ್ಯಾಲೆನ್ಸ್ ಖಾಲಿ ಮಾಡಿದ್ದಾಳೆ. ತಾಯಿ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಕೇವಲ 5 ರೂ. ಇರುವುದು ಗೊತ್ತಾಗಿದೆ. ಹುಡುಗಿ ತನ್ನ ತಾಯಿ ತನ್ನ ಡೆಬಿಟ್ ಕಾರ್ಡ್ ಅನ್ನು ಆನ್ಲೈನ್ ಆಟಗಳನ್ನು ಆಡಲು ಬಳಸುತ್ತಿದ್ದಳು ಎಂಬ ಆಘಾತಕಾರಿ ವಿಚಾರ ಬಹಿರಂಗವಾಗಿದೆ.
ಬಾಲಕಿ ಆನ್ಲೈನ್ ಗೇಮಿಂಗ್ಗೆ ಅಡಿಕ್ಟ್ ಆಗಿದ್ದಾಳೆ ಎಂದು ಬಾಲಕಿಯ ಶಾಲಾ ಶಿಕ್ಷಕಿ ಅನುಮಾನ ವ್ಯಕ್ತಪಡಿಸಿದ್ದಾರೆ. ಆ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ. ಆಕೆಯ ಮೊಬೈಲ್ ಸ್ಕ್ರೀನ್ ಟೈಮ್ ತುಂಬಾ ಹೆಚ್ಚಿರುವುದನ್ನು ಶಿಕ್ಷಕಿ ಗಮನಿಸಿದ್ದಾರೆ. ಶಾಲಾ ಸಮಯದಲ್ಲೂ ಬಾಲಕಿ ಫೋನಿನಲ್ಲಿ ಗೇಮ್ ಆಡುತ್ತಿರುವುದನ್ನು ಕಂಡು ಶಿಕ್ಷಕಿ ಹುಡುಗಿಯ ತಾಯಿಗೆ ವಿಚಾರ ತಿಳಿಸಿದ್ದಾರೆ. ಆಗ ತಾಯಿ ಮೊಬೈಲ್ ತೆಗೆದುಕೊಂಡು ಪರಿಶೀಲಿಸಿದಾಗ ಈ ಶಾಕಿಂಗ್ ವಿಷಯ ತಿಳಿದಿದೆ.
ಹಣ ಏನಾಯಿತು ಎಂದು ತಂದೆ ಹುಡುಗಿಯನ್ನು ಕೇಳಿದಾಗ, ಹಣವನ್ನು ಆನ್ಲೈನ್ ಆಟಗಳಿಗೆ ಮತ್ತು ಆಟದಲ್ಲಿ ಏನನ್ನೋ ಖರೀದಿಗಳಿಗೆ ಖರ್ಚು ಮಾಡಲಾಗಿದೆ ಎಂದು ಹೇಳಿದ್ದಾಳೆ. ಅಲ್ಲದೇ, ತನ್ನ ಸ್ನೇಹಿತರಿಗಾಗಿ 11,61,590 ರೂ ಮೌಲ್ಯದ ಗೇಮ್ಗಳನ್ನು ಖರೀದಿಸಿರುವುದಾಗಿ ಬಾಲಕಿ ಹೇಳಿದ್ದಾಳೆ. ಮನೆಯಲ್ಲಿ ಡೆಬಿಟ್ ಕಾರ್ಡ್ ಸಿಕ್ಕಿದ್ದು, ಅದನ್ನು ತನ್ನ ಸ್ಮಾರ್ಟ್ಫೋನ್ಗೆ ಲಿಂಕ್ ಮಾಡಿರುವುದಾಗಿ ಬಾಲಕಿ ಒಪ್ಪಿಕೊಂಡಿದ್ದಾಳೆ. ಬಾಲಕಿಯ ತಾಯಿ ತನ್ನ ಡೆಬಿಟ್ ಕಾರ್ಡ್ ಪಾಸ್ವರ್ಡ್ ಅನ್ನು ಬಾಲಕಿಗೆ ಮೊದಲೇ ತಿಳಿಸಿದ್ದಾಳೆ. ಇದರಿಂದ ಬಾಲಕಿ ಡೆಬಿಟ್ ಕಾರ್ಡ್ ದುರ್ಬಳಕೆ ಮಾಡಿಕೊಂಡು ಆನ್ ಲೈನ್ ಗೇಮಿಂಗ್ ಗಾಗಿ 52 ಲಕ್ಷ ರೂ. ಬಳಸಿದ್ದಾಳೆ.