ಹದಿಹರೆಯದ ವಯಸ್ಸಿನ ಹುಡುಗಿಯರಿಗೆ ಈ ಪೌಷ್ಟಿಕಾಂಶಯುಕ್ತ ಆಹಾರವನ್ನ ತಪ್ಪದೇ ನೀಡಬೇಕು. ಇದರಿಂದ ನಮ್ಮ ದೇಹದ ಬೆಳವಣಿಗೆ ಉತ್ತಮವಾಗಿ ಆರೋಗ್ಯ ಸಮಸ್ಯೆ ದೂರವಾಗುತ್ತದೆ. ಹಾಗಾಗಿ 10-20 ವರ್ಷ ವಯಸ್ಸಿನ ಹುಡುಗಿಯರಿಗೆ ಈ ಪೌಷ್ಟಿಕಾಂಶಯುಕ್ತ ಆಹಾರ ನೀಡಿ.
*ಪ್ರೌಢಾವಸ್ಥೆಯಲ್ಲಿ ಹುಡುಗಿಯರ ದೇಹದಲ್ಲಿ ಅನೇಕ ಬದಲಾವಣೆಗಳಾಗುತ್ತದೆ.
ಆ ಸಮಯದಲ್ಲಿ ಅವರಿಗೆ ಅವಧಿ ಶುರುವಾಗುತ್ತದೆ. ಹಾಗಾಗಿ ಅವರಿಗೆ ಕಬ್ಬಿಣಾಂಶ ಹೆಚ್ಚಾಗಿ ಬೇಕಾಗುತ್ತದೆ. ಆದ ಕಾರಣ ಹಸಿರು ಸೊಪ್ಪುಗಳು, ಎಲೆಕೋಸು, ಮೆಂತ್ಯ, ಕೋಸುಗಡ್ಡೆ ಮುಂತಾದವುಗಳನ್ನು ನೀಡಿ.
* ವೃದ್ದಾಪ್ಯದಲ್ಲಿ ಮೂಳೆಗಳ ಸಮಸ್ಯೆ ಬರಬಾರದಂತಿದ್ದರೆ ಹುಡುಗಿಯರಿಗೆ ಕ್ಯಾಲ್ಸಿಯಂ, ರಂಜಕ ಹೆಚ್ಚಾಗಿ ನೀಡುವುದು ಅವಶ್ಯಕ. ಅದಕ್ಕಾಗಿ ಡೈರಿ ಉತ್ಪನ್ನಗಳನ್ನು ಹೆಚ್ಚಾಗಿ ನೀಡಿ.
*ಹದಿಹರೆಯದ ವಯಸ್ಸಿನಲ್ಲಿ ಪ್ರೋಟೀನ್ ಅತ್ಯವಶ್ಯಕ. ಹಾಗಾಗಿ ಮೀನು, ಮೊಟ್ಟೆ, ಮಾಂಸಗಳನ್ನು ಹೆಚ್ಚಾಗಿ ಸೇವಿಸಿ. ಇದರಿಂದ ಕೂದಲು ಹಾಗೂ ಚರ್ಮದ ಸಮಸ್ಯೆ ಕಾಡುವುದಿಲ್ಲ.