ಬಾಲಿವುಡ್ ನಟಿ ಕಂಗನಾ ರಣಾವತ್ ಒಂದಲ್ಲ ಒಂದು ಕಾರಣಕ್ಕೆ ತಕರಾರು ತೆಗೆಯುತ್ತಲೆ ಇರುತ್ತಾರೆ. ಸಿನಿಮಾ ರಂಗದಲ್ಲಿದ್ದ ವೇಳೆ ಎಲ್ಲರ ವಿರುದ್ಧ ಗುಡುಗುತ್ತಿದ್ದ ನಟಿ ಇದೀಗ ರಾಜಕೀಯಕ್ಕೆ ಎಂಟ್ರಿಕೊಟ್ಟ ಬಳಿಕವೂ ಅದನ್ನೇ ಮುಂದುವರೆಸಿದ್ದಾರೆ. ಅಲ್ಲದೆ ತಮ್ಮ ಪಕ್ಷದವರ ಮೇಲೂ ನಟಿ ಕೂಗಾಡುತ್ತಿದ್ದಾರೆ.
ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಅವರು ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿ ಮಾಡಿದ್ದಾರೆ. ಈಗ ಅವರಿಂದ ದೊಡ್ಡ ಅಚಾತುರ್ಯ ನಡೆದು ಹೋಗಿದೆ. ತಮ್ಮದೇ ಪಕ್ಷದ ಸಂಸದ (ಬೆಂಗಳೂರು ದಕ್ಷಿಣ) ತೇಜಸ್ವಿ ಸೂರ್ಯ ವಿರುದ್ಧ ಕಂಗನಾ ರಣಾವತ್ ಅವರು ಕೂಗಾಡಿದ್ದಾರೆ. ಅಸಲಿಗೆ ಅವರು ತೆಗೆದುಕೊಳ್ಳಬೇಕಿದ್ದಿದ್ದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಹೆಸರು.
ಮಂಡಿ ಕ್ಷೇತ್ರದಲ್ಲಿ ಕಂಗನಾ ಅವರು ಪ್ರಚಾರ ರ್ಯಾಲಿಯಲ್ಲಿ ಭಾಗಿ ಆಗಿದ್ದರು. ಈ ವೇಳೆ ಮಾತನಾಡಿದ ಅವರು, ‘ಒಂದು ಪಕ್ಷ ಇದೆ. ಅಲ್ಲಿದ್ದವರಿಗೆ ತಮಗೆ ಎಲ್ಲಿ ಹೋಗಬೇಕು ಎನ್ನುವುದೇ ಗೊತ್ತಿಲ್ಲ. ರಾಹುಲ್ ಗಾಂಧಿ ಅವರು ಚಂದ್ರನ ಮೇಲೆ ಆಲೂಗಡ್ಡೆ ಬೆಳೆಸಲು ಬಯಸಿದ್ದಾರೆ. ತೇಜಸ್ವಿ ಸೂರ್ಯ, ರೌಡಿಸಂ ಮಾಡುತ್ತಾರೆ ಮತ್ತು ಮೀನು ತಿನ್ನುತ್ತಾರೆ’ ಎಂದು ಕಂಗನಾ ಹೇಳಿದ್ದಾರೆ.
ಇದಕ್ಕೆ ತೇಜಸ್ವಿ ಯಾದವ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿಯಲ್ಲಿದ್ದುಕೊಂಡು ಬಿಜೆಪಿ ಪಕ್ಷದವರನ್ನೇ ತೆಗಳಿದ್ದಕ್ಕೆ ಕಂಗನಾ ಅವರನ್ನು ಟೀಕೆ ಮಾಡಿದ್ದಾರೆ. ‘ಯಾರು ಈ ಮೇಡಂ’ ಎಂದು ತೇಜಸ್ವಿ ಯಾದವ್ ಟೀಕಿಸಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಕಂಗನಾ ಹೇಳಿಕೆ ಸಖತ್ ವೈರಲ್ ಆಗಿದೆ.