ಚಿಕ್ಕಬಳ್ಳಾಪುರ: ಬಿಜೆಪಿ ಪ್ರಣಾಳಿಕೆ (BJP Manifesto) ಗಳ ಬಗ್ಗೆ ಕಾಂಗ್ರೆಸ್ (Congress) ನಾಯಕರ ಟೀಕೆ ವಿಚಾರವಾಗಿ ಚಿಕ್ಕಬಳ್ಳಾಪುರದಲ್ಲಿ ಸಚಿವ ಸುಧಾಕರ್ (Sudhakar) ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ನ ಗ್ಯಾರಂಟಿಗಳನ್ನ ಮೆಹಂದಿಗೆ ಹೋಲಿಸಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳನ್ನ ಜನ ನಂಬಲು ತಯಾರಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜನರಿಗಾಗಿ ಏನೂ ಮಾಡಲಿಲ್ಲ. ಕೃಷಿ ಸಮ್ಮಾನ್, ಆಯುಷ್ಮಾನ್, ವಿದ್ಯಾನಿಧಿ ಯೋಜನೆ ಜಾರಿ ಮಾಡಿದ್ದು ಯಾರು? ಬಿಜೆಪಿ ಮೇಲೆ ಭರವಸೆ ಇದೆ. ನರೇಂದ್ರ ಮೋದಿ (Narendra Modi) ಯೇ ಜನರಿಗೆ ಭರವಸೆ. ಡಿಕೆಶಿ (DK Shivakumar), ಸಿದ್ದರಾಮಯ್ಯ (Siddaramaiah), ರಾಹುಲ್ ಗಾಂಧಿ (Rahul Gandhi) ಮಾತು ಜನ ಕೇಳೋಕೆ ತಯಾರಿಲ್ಲ ಎಂದರು.
ಈ ವೇಳೆ ನರೇಂದ್ರ ಮೋದಿ ನಾಲಾಯಕ್ ಎಂಬ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಈ ಮಾತು ಪ್ರಿಯಾಂಕ್ ಖರ್ಗೆಯವರಿಗೆ ಸೂಕ್ತ ಎಂದರು ಇನ್ನು ಬಿಜೆಪಿಗೆ ಕೇವಲ 40 ಸೀಟು ಮಾತ್ರ ಕೊಡಿ ರಾಹುಲ್ ಗಾಂಧಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಪಾಪ 2019 ರಲ್ಲಿ ಇಡೀ ದೇಶ ಸಂಚಾರ ಮಾಡಿ 44 ಸೀಟು ತಂದ ರೆಕಾರ್ಡ್ ಅವರದ್ದು. ಅವರ ರೆಕಾರ್ಡ್ ಬಗ್ಗೆ ಈಗ ಅವರೇ ಮಾತಾಡ್ತಿದ್ದಾರೆ ಅಂತ ವ್ಯಂಗ್ಯವಾಡಿದರು. ನೆಹರು ಕುಟುಂಬದ 4ನೇ ಕುಡಿ 400 ಸೀಟಿಂದ 44 ಸೀಟಿಗೆ ತಂದವರು ರಾಹುಲ್ ಗಾಂಧಿ. 100 ಸೀಟಿಂದ 330ಕ್ಕೆ ತಗೊಂಡು ಹೋದವರು ನರೇಂದ್ರ ಮೋದಿ. ಪಾಪ ರಾಹುಲ್ ಗಾಂಧಿಗೆ ಸಲಹೆಗಾರರು ಸರಿ ಇಲ್ಲ. ಸಲಹೆಗಾರರಾಗಿ ನನ್ನಂತವನನ್ನ ಇಟ್ಕೊಳೋಕೆ ಹೇಳಿ. ವಾಸ್ತವಕ್ಕೆ ಹತ್ತಿರ ಮಾತಾಡಬೇಕು ಎಂದರು.