ಟಾಲಿವುಡ್ ನಟ ನರೇಶ್ ಹಾಗೂ ಸ್ಯಾಂಡಲ್ ವುಡ್ ನಟಿ ಪವಿತ್ರಾ ಲೋಕೇಶ್ ಮದುವೆಯಾಗುತ್ತಾರೆ ಎಂಬ ಸುದ್ದಿ ಮೊದಲಿನಿಂದಲೂ ಹರಿದಾಡುತ್ತಲೇ ಇತ್ತು. ಅದೀಗ ನಿಜವಾಗಿದೆ. ಸದ್ಯ ನರೇಶ್ ಹಾಗೂ ಪವಿತ್ರಾ ಲೋಕೇಶ್ ಮದುವೆ ವಿಡಿಯೋ ವೈರಲ್ ಆಗಿದೆ.
ಪವಿತ್ರಾ ಲೋಕೇಶ್ ಜೊತೆ ಸಪ್ತಪದಿ ತುಳಿದ ವಿಡಿಯೋನ ನರೇಶ್ ಅವರೇ ಸ್ವತಃ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಆಶೀರ್ವಾದ ಮಾಡುವಂತೆ ಅಭಿಮಾನಿಗಳಲ್ಲಿ ಕೋರಿದ್ದಾರೆ. ಈ ವಿಡಿಯೋಗೆ ಬಗೆಬಗೆಯಲ್ಲಿ ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ.
ಸಾಕಷ್ಟು ಸಮಯದಿಂದ ಪವಿತ್ರಾ ಲೋಕೇಶ್ ಹಾಗೂ ನರೇಶ್ ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೇ ವಿಚಾರವಾಗಿ ನರೇಶ್ ಹಾಗೂ ಅವರ ಪತ್ನಿ ರಮ್ಯಾ ಕಿತ್ತಾಡಿಕೊಂಡಿದ್ದರು. ಈ ವಿವಾದ ತಣ್ಣಗಾಯಿತು ಎನ್ನುವಾಗ ಪವಿತ್ರಾಗೆ ಮುತ್ತು ಕೊಡುತ್ತಿರುವ ವಿಡಿಯೋನ ಹೊಸ ವರ್ಷದ ಸಂದರ್ಭದಲ್ಲಿ ನರೇಶ್ ಶೇರ್ ಮಾಡಿಕೊಂಡಿದ್ದರು. ಇದೀಗ ನರೇಶ್ ತಮ್ಮ ಮದುವೆ ವಿಡಿಯೋ ಪೋಸ್ಟ್ ಮಾಡಿದ್ದು, ಅನೇಕರು ನವ ದಂಪತಿಗೆ ಶುಭಾಶಯ ಕೋರಿದ್ದಾರೆ.