ಮುಳ್ಳಯ್ಯನಗಿರಿ ಮತ್ತು ಎತ್ತಿನಭುಜ ಚಾರಣಕ್ಕೆ ತಾತ್ಕಾಲಿಕವಾಗಿ ನಿಷೇಧ ಹಾಕಲಾಗಿದೆ.
ಪ್ರಕೃತಿಕ ಸಂದರ್ಯದಿಂದ ಸಮೃದ್ಧಿವಾಗಿರುವ ಕಾಫಿನಾಡಿಗೆ ಸೊಬಗಿಗೆ ಪ್ರವಾಸಿಗರು ಫಿದಾ ಆಗಿದ್ದು ದಿನದಿಂದ ದಿನಕ್ಕೆ ಸಂಖ್ಯೆ ಹೆವಚ್ಚುತ್ತಲೇ ಇದೆ.
ಸದ್ಯ ಚಿಕ್ಕಮಗಳೂರಿನಲ್ಲಿ ಜೋರು ಮಳೆ, ಗಾಳಿ ಪ್ರಾರಂಭವಾಗಿದೆ. ಈ ಸಮಯದಲ್ಲಿ ಚಾರಣಕ್ಕೆ ಹೋಗುವುದು ಅಪಾಯ. ಆದರೂ ಕೂಡ ಜನರು ಈ ಪ್ರದೇಶದಲ್ಲಿ ಚಾರಣಕ್ಕೆ ತೆರಳುತ್ತಿದ್ದು, ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಮೂಡಿಗೆರೆ ವಲಯ ಅರಣ್ಯ ಇಲಾಖೆ ತಾತ್ಕಾಲಿಕವಾಗಿ ಚಾರಣ ನಿಷೇಧಿಸಿದೆ
ರಾಜ್ಯದ ವಿವಿಧ ಚಾರಣ ಪಥಗಳಲ್ಲಿ ಆನ್ ಲೈನ್ ಟಿಕೆಟ್ ವ್ಯವಸ್ಥೆ ಮಾಡಿ, ಪ್ರವಾಸಿಗರ ಸಂಖ್ಯೆಯನ್ನು ಸೀಮಿತಗೊಳಿಸುವವರೆಗೆ ಎಲ್ಲ ಚಾರಣಪಥಗಳಲ್ಲಿ ತಾತ್ಕಾಲಿಕವಾಗಿ ಚಾರಣಿಗರ ಪ್ರವೇಶ ನಿರ್ಬಂಧಿಸಿತ್ತು. ಆದರೂ ಕೂಡ ಹಲವು ಚಾರಣಪಥಗಳಲ್ಲಿ