ತೇರದಾಳ: ಕರ್ನಾಟಕದ ವಿಧಾನಸಭೆಯ ಚುನಾವಣಾ ದಿನಾಂಕ ನಿಗದಿ ಆಗ್ತಾ ಇದ್ದಂಗೆ ರಾಜ್ಯಾದ್ಯಂತ ಎಲ್ಲಾ ಪಕ್ಷಗಳಲ್ಲಿ ಟಿಕೇಟ್ ಪಡೆಯಲು ಪೈಪೋಟಿ ಹೆಚ್ಚಾಗಿದೆ. ಅದೆ ರೀತಿ ಬಾಗಲಕೋಟೆ ಜಿಲ್ಲೆಯ ತೇರದಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪಡೆಯಲು ಅನೇಕರು ಪೈಪೋಟಿ ನಡೆಸಿದ್ದಾರೆ. ಆದರೆ ಈ ಕ್ಷೇತ್ರದಲ್ಲಿ ಸ್ಥಳೀಯರಿಗೆ ಬಿಜೆಪಿ ಟಿಕೆಟ್ ನೀಡಬೇಕೆಂಬ ಕೂಗು ಕೇಳಿ ಬರುತ್ತಿದೆ.
ಸ್ಥಳಿಯ ಬಿಜೆಪಿ ಯುವ ನಾಯಕರಾದ ಕಿರಣ ಕುಮಾರ್ ದೇವಲ ದೇಸಾಯಿವರಿಗೆ ಬಿಜೆಪಿ ಹೈಕಮಾಂಡ ಟಿಕೆಟ್ ನೀಡಬೇಕೆಂದು ಸ್ಥಳಿಯರು ಒತ್ತಾಯ ಮಾಡಿದ್ದಾರೆ. ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವ ಕಿರಣಕುಮಾರ ದೇವಲ ದೇಸಾಯಿ ಈಗಾಗಲೆ ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಬಡವರಿಗೆ ಸಹಾಯ ಮಾಡುವುದರ ಜೊತೆಗೆ ಅನೇಕ ಸಮಾಜಮುಖಿ ಕಾರ್ಯಗಳನ್ನ ಮಾಡಿದ್ದಾರೆ. ಚುನಾವಣೆಗೆ ಸ್ಪರ್ಧಿಸಿದ್ರೆ ಜ್ಯಾತ್ಯಾತಿತವಾಗಿ ಅವರನ್ನು ಆಯ್ಕೆ ಮಾಡಿ ಕಳಿಸುವ ಜವಾಬ್ದಾರಿ ನಮ್ಮದು ಅಂತ ತೇರದಾಳ ವಿಧಾನಸಭಾ ಕ್ಷೇತ್ರದ ಜನರು ತಿಳಿಸಿದ್ದಾರೆ.
ಈ ಕ್ಷೇತ್ರದ ಮತದಾರರು ಹೊರಗಿನವರಿಗೆ ಟಿಕೆಟ್ ನೀಡಬಾರದು ಸ್ಥಳೀಯರಿಗೆ ಟಿಕೆಟ್ ನೀಡಲೇಬೇಕು ಮತ್ತು ಅದರಲ್ಲಿ ಬಡವರ ಬಂಧು ಯುವ ನಾಯಕರಾಗಿರುವ ಕಿರಣ ಕುಮಾರ ದೇವಲ ದೇಸಾಯಿವರಿಗೆ ಬಿಜೆಪಿ ಟಿಕೆಟ್ ನೀಡಿ ಅಂತ ವತ್ತಾಯ ಮಾಡಿದ್ದಾರೆ. ತೇರದಾಳ ವಿಧಾನಸಭಾ ಕ್ಷೇತ್ರದಲ್ಲಿ 34 ಸಮುದಾಯಗಳ ಜೊತೆ ದೇಸಾಯಿ ಕುಟುಂಬ ಉತ್ತಮ ಬಾಂಧವ್ಯ ಹೊಂದಿದೆ. ಅಷ್ಟೇ ಅಲ್ಲ ಅವರು ತಮ್ಮ ಕೈಯಲ್ಲಿ ಆದಷ್ಟು ಬಡವರಿಗೆ ಸಹಾಯವನ್ನು ಮಾಡಿ ಈ ಕ್ಷೇತ್ರದ ಮತದಾರರ ಮನಸ್ಸನ್ನು ಗೆದ್ದಿರುವ ಯುವ ನಾಯಕರು ಆಗಿದ್ದಾರೆ.
ಬಿಜೆಪಿ ನಿಷ್ಠಾವಂತ ಯುವ ನಾಯಕ ಕಿರಣಕುಮಾರ ದೇವಲ ದೇಸಾಯಿರವರು ತಮ್ಮಗೆ ಬೆಂಬಲ ಪಡೆಯುವುದಕ್ಕಾಗಿ ಈಗಾಗಲೇ ಮತಕ್ಷೇತ್ರದ ಪ್ರತಿಯೊಂದು ಗ್ರಾಮ ಹಾಗೂ ನಗರಗಳಲ್ಲಿ ಸಂಚಾರ ನಡೆಸಿ. ಅಲ್ಲಿಯ ಜನತೆಗೆ ಭೇಟಿಯಾಗಿ ಗ್ರಾಮದ ಮುಂದಾಳುಗಳ ಹಿರಿತನದಲ್ಲಿ ಸಭೆಗಳನ್ನು ಏರ್ಪಡಿಸಿ ಅಲ್ಲಿನ ಕುಂದು ಕೊರತೆಗಳನ್ನ ಅವಲೋಕಿಸಿದ್ದಾರೆ.
ಕಿರಣಕುಮಾರ ದೇವಲ ದೇಸಾಯಿಯವರ ಬಗ್ಗೆ ಮತದಾರರ ಅಭಿಪ್ರಾಯ
ಕಿರಣಕುಮಾರ ದೇಸಾಯಿ ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದೇ ಆದಲ್ಲಿ ಪಕ್ಷಾತೀತವಾಗಿ ಎಲ್ಲಾ ಸಮುದಾಯದ ಮತದಾರರು ಮತವನ್ನು ನೀಡಿ ಪ್ರಚಂಡ ಬಹುಮತದಿಂದ ಆಯ್ಕೆ ಮಾಡಿ ವಿಧಾನಸೌಧಕ್ಕೆ ಕಳಿಸುವ ಜವಾಬ್ದಾರಿ ನಮ್ಮದು ಎಂದು ಮತದಾರರು ಹೇಳಿದರು.
ದೇಸಾಯಿ ಅವರು ಈಗಾಗಲೇ ಪಕ್ಷದ ಹಿರಿಯ ನಾಯಕರಿಗೆ ಭೇಟಿಯಾಗಿ ಈ ಬಾರಿ ಗ್ರಾಮಾಂತರ ಪ್ರದೇಶಕ್ಕೆ ಮಾನ್ಯತೆ ನೀಡುವುದಕ್ಕಾಗಿ ನನಗೆ ಪಕ್ಷದ ಟಿಕೆಟ್ ನೀಡಿ ಆಶೀರ್ವದಿಸಿದರೆ ಮತ ಕ್ಷೇತ್ರದಲ್ಲಿ ಮತದಾರರು ಭಾರಿ ಬೆಂಬಲದೊಂದಿಗೆ ಬಿಜೆಪಿ ಆಯ್ಕೆ ಆಗುವುದರಲ್ಲಿ ಸಂದೇಹವೇ ಇಲ್ಲ. ಕಿರಣಕುಮಾರ ದೇಸಾಯಿ ಅವರು ಹಾಗೂ ಅವರ ತಂದೆಯವರಾದ ದೇವಲ ಸರ್ಕಾರ ದೇಸಾಯಿ ಅವರು ಮತ ಮತಕ್ಷೇತ್ರದ ಎಲ್ಲ ವರ್ಗದ ಜನರಿಗೆ ಸ್ಪಂದಿಸಿ ಅವರಿಗೆ ತಮ್ಮ ಕೈಲಾದಷ್ಟು ಮಟ್ಟಿಗೆ ಸಹಾಯ ಹಸ್ತ ನೀಡುತ್ತಾ ಎಲ್ಲ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ ಮತ್ತು ದೇಸಾಯಿ ಕುಟುಂಬವು ಸುಮಾರು 40 ವರ್ಷಗಳಿಂದ ನಿರಂತರ ಸಕ್ರಿಯ ರಾಜಕಾರಣದಲ್ಲಿ ಇದ್ದಾರೆ.
ತೇರದಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಕಿರಣಕುಮಾರ ದೇವಲ ದೇಸಾಯಿ ರವರಿಗೆ ಬಿಜೆಪಿ ವರಿಷ್ಠರು ಅವಕಾಶ ನೀಡಬೇಕೆಂದು ಮತದಾರರ ಅಭಿಪ್ರಾಯವಾಗಿದೆ.