ಮೈಸೂರು: ದಿವಂಗತ ಪಾರ್ವತಮ್ಮ ರಾಜ್ಕುಮಾರ್(Parvathamma Rajkumar) ಅವರ ತಮ್ಮನ ಮಗ, ಯುವ ನಟ ಸೂರಜ್ಗೆ ಅಪಘಾತವಾಗಿದೆ. ದುರ್ಘಟನೆ ಯಲ್ಲಿ ಸೂರಜ್ ಬಲಗಾಲಿಗೆ ಗಂಭೀರ ಪೆಟ್ಟು ಬಿದ್ದಿದೆ. ಮೈಸೂರು ನಂಜನಗೂಡು ರಸ್ತೆಯಯಲ್ಲಿ ದುರ್ಘಟನೆ ಸಂಭವಿಸಿದೆ. ಬೈಕ್ನಲ್ಲಿ ಹೋಗ್ತಿದ್ದಾಗ ಟಿಪ್ಪರ್ ಹರಿದು ಅನಾಹುತ ಸಂಭವಿಸಿದೆ.
ಸೂರಜ್ (Sooraj)ಬಲಗಾಲಿಗೆ ಗಂಭೀರವಾಗಿ ಗಾಯವಾದ ಹಿನ್ನೆಲೆಯಲ್ಲಿ ಮಂಡಿಯವರೆಗೆ ಕಾಲನ್ನು ವೈದ್ಯರು ಕತ್ತರಿಸಿ ತೆಗೆದಿದ್ದಾರೆ. ಸದ್ಯ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೂರಜ್ ನೋಡಲು ಶಿವರಾಜ್ ಕುಮಾರ್, ನಿರ್ಮಾಪಕ ಚಿನ್ನೇಗೌಡ ಮೈಸೂರಿಗೆ ಆಗಮಿಸಿದ್ದಾರೆ. ಭಗವಾನ್ ಶ್ರೀ ಕೃಷ್ಣ ಪರಮಾತ್ಮ ಚಿತ್ರದಲ್ಲಿ ಸೂರಜ್ ನಟಿಸಿದ್ದರು.