ರಷ್ಯಾದ ಮಾಸ್ಕೊದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 150 ಕ್ಕೆ ಏರಿಕೆಯಾಗಿದ್ದು, ನಾಲ್ವರು ಬಂದೂಕುಧಾರಿಗಳು ಸೇರಿದಂತೆ ಒಟ್ಟು 11 ಮಂದಿಯನ್ನು ಬಂಧಿಸಲಾಗಿದೆ.
ಘಟನೆ ನಡೆದು ಸಾಕಷ್ಟು ಸಮಯ ಕಳೆದಿದ್ದರು ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ದಾಳಿಯ ಬಗ್ಗೆ ಇನ್ನೂ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿಲ್ಲ.ಕಳೆದ 20 ವರ್ಷಗಳಲ್ಲಿ ರಷ್ಯಾದಲ್ಲಿ ನಡೆದ ಅತ್ಯಂತ ಭೀಕರ ದಾಳಿಯ ಹೊಣೆಯನ್ನು ಉಗ್ರ ಸಂಘಟನೆ ದಾಯೆಶ್ ಹೊತ್ತುಕೊಂಡಿದೆ.
ಆದರೆ ಉಕ್ರೇನ್ ಅಧ್ಯಕ್ಷೀಯ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್ ಅವರ ಹೇಳಿಕೆಯ ಹೊರತಾಗಿಯೂ, ರಷ್ಯಾ ಉಕ್ರೇನಿಯನ್ ಸಂಪರ್ಕವನ್ನು ಅನುಸರಿಸುತ್ತಿದೆ ಎಂಬ ಸೂಚನೆಗಳಿವೆ.
ಉಕ್ರೇನ್ ಗಡಿಗೆ ಹೋಗುವಾಗ “ಎಲ್ಲಾ ನಾಲ್ವರು ಭಯೋತ್ಪಾದಕರನ್ನು” ಬಂಧಿಸಲಾಗಿದೆ ಮತ್ತು ಅವರು ಉಕ್ರೇನ್ನಲ್ಲಿ ಸಂಪರ್ಕಗಳನ್ನು ಹೊಂದಿದ್ದಾರೆ ಎಂದು ಎಫ್ಎಸ್ಬಿ ಭದ್ರತಾ ಸೇವೆ ತಿಳಿಸಿದೆ. ಪ್ರಮುಖ ಅಪರಾಧಗಳ ತನಿಖೆ ನಡೆಸುತ್ತಿರುವ ರಷ್ಯಾದ ತನಿಖಾ ಸಮಿತಿ, ರಕ್ಷಣಾ ಕಾರ್ಯಕರ್ತರು ಕಟ್ಟಡದಿಂದ ಶವಗಳನ್ನು ಹೊರತೆಗೆಯುತ್ತಿದ್ದು ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಸಂಗೀತ ಕಚೇರಿ ಆಯೋಜನೆ ಮಾಡಲು ಸಿದ್ಧತೆ ನಡೆಸಿದ್ದ ಕ್ರೋಕಸ್ ಸಿಟಿ ಹಾಲ್ಗೆ ಕೆಲವು ಅಪರಿಚಿತ ದುಷ್ಕರ್ಮಿಗಳು ಏಕಾಏಕಿ ಪ್ರವೇಶಿಸಿದರು. ಸಂಗೀತ ಕಾರ್ಯಕ್ರಮ ಪ್ರಾರಂಭವಾಗುವ ಮೊದಲು ಗುಂಡು ಹಾರಿಸಿದರು. ಗುಂಡಿನ ಸದ್ದು ಮೊಳಗುತ್ತಿದ್ದಂತೆಯೇ ಅಲ್ಲಿ ನೆರೆದಿದ್ದ ಸುಮಾರು 7 ಸಾವಿರ ಜನ ಓಡಿ ಹೋಗಲು ಯತ್ನಿಸಿದ್ದು, ಅದಕ್ಕೂ ಅವಕಾಶ ನೀಡದಂತೆ ಉಗ್ರರು ಪ್ರವೇಶದ್ವಾರವನ್ನು ಬಂದ್ ಮಾಡಿ ದಾಳಿ ನಡೆಸಿದ್ದಾರೆ. ಬುಲೆಟ್ಗಳಿಂದ ತಪ್ಪಿಸಿಕೊಳ್ಳಲು ಜನರು ತಾವು ಕುಳಿತಿದ್ದ ಆಸನಗಳ ಹಿಂದೆ, ನೆಲಮಾಳಿಗೆ ಅವಿತಿದ್ದರೂ ಅವರನ್ನೂ ಬಿಡಗೆ ಗುಂಡು ಹಾರಿಸಿ ಕೊಲ್ಲಲಾಗಿದೆ. ಸಭಾಂಗಣದಲ್ಲಿ ಗುಂಡು ಹಾರಿಸಿದ ನಂತರ, ಗ್ರೆನೇಡ್ ದಾಳಿ ಕೂಡ ನಡೆಸಲಾಗಿದೆ.
ರಷ್ಯಾದ ಪ್ರಸಿದ್ಧ ರಾಕ್ ಬ್ಯಾಂಡ್ ‘ಪಿಕ್ನಿಕ್’ ಸಂಗೀತ ಕಚೇರಿಯಲ್ಲಿ ಪಾಲ್ಗೊಳ್ಳಲು ಕ್ರೋಕಸ್ ಸಿಟಿ ಹಾಲ್ನಲ್ಲಿ ಜನಸಂದಣಿ ಸೇರಿದ್ದಾಗ ಈ ದಾಳಿ ನಡೆದಿದೆ. ಈ ಸಭಾಂಗಣದಲ್ಲಿ 6,000 ಕ್ಕೂ ಹೆಚ್ಚು ಜನರು ಕುಳಿತುಕೊಳ್ಳುವ ಸಾಮರ್ಥ್ಯ ಇದೆ. ಸಂಗೀತ ಕಾರ್ಯಕ್ರಮದ ಟಿಕೆಟ್ಗಳು ಮೊದಲೇ ಎಲ್ಲಾ ಸೇಲ್ ಆಗಿತ್ತು. ಅಂದಾಜಿನ ಪ್ರಕಾರ ಘಟನೆ ನಡೆದ ವೇಳೆ ಸಭಾಂಗಣದಲ್ಲಿ 6200 ಜನರು ಇದ್ದರು ಎಂದು ಹೇಳಲಾಗಿದೆ. ದುಷ್ಕರ್ಮಿಗಳು ಮೊದಲೇ ಪ್ಲಾನ್ ಹಾಕಿ ಈ ದಾಳಿ ನಡೆಸಿದ್ದಾರೆ ಎಂದು ಶಂಕಿಸಲಾಗಿದೆ.