ಟೆಕ್ಸಾಸ್ ನಲ್ಲಿ ಸಂಭವಿಸಿದ ಕಾಡ್ಗಿಚ್ಚಿನಿಂದ ಸುಮಾರು ಒಂದು ಮಿಲಿಯನ್ ಎಕರೆಗಳಷ್ಟು ಕಾಡು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಇದು ಟೆಕ್ಸಾಸ್ ಸ್ಮೋಕ್ಹೌಸ್ ಕ್ರೀಕ್ ಫೈರ್ 2006 ರ ಪೂರ್ವ ಅಮರಿಲ್ಲೊ ಕಾಂಪ್ಲೆಕ್ಸ್ ಬೆಂಕಿಯನ್ನು ಮೀರಿಸಿದ್ದು, ಇದುವರೆಗೆ ದಾಖಲಾದ ರಾಜ್ಯದ ಅತಿದೊಡ್ಡ ಕಾಡ್ಗಿಚ್ಚು ಇದಾಗಿದೆ.
ಅಗ್ನಿಶಾಮಕ ದಳದ ಅಧಿಕಾರಿಯಗಳು ಶತಪ್ರಯತ್ನ ನಡೆಸಿದರು ಕೇವಲ 3% ಬೆಂಕಿಯನ್ನು ಮಾತ್ರವೇ ನಿಯಂತ್ರಿಸಲು ಸಾಧ್ಯವಾಯಿತು ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ಹಚಿನ್ಸನ್ ಕೌಂಟಿಯ ಬೆಂಕಿಯು 83 ವರ್ಷದ ಜಾಯ್ಸ್ ಬ್ಲಾಂಕೆನ್ಶಿಪ್ನ ಜೀವವನ್ನು ಬಲಿ ತೆಗೆದುಕೊಂಡಿತು, ಬೆಂಕಿಯು ಆಕೆಯ ಮನೆಯನ್ನು ಸಂಪೂರ್ಣವಾಗಿ ನಾಶಪಡಿಸಿದೆ ಎಂದು ಅವರ ಸಂಬಂಧಿಕರು ಬಹಿರಂಗಪಡಿಸಿದ್ದಾರೆ. ಬೆಂಕಿಯು ಉತ್ತರ ಟೆಕ್ಸಾಸ್ನಾದ್ಯಂತ ವ್ಯಾಪಕ ನಾಶವನ್ನು ಉಂಟುಮಾಡಿತು.
ಈ ಮಾರಣಾಂತಿಕ ಘಟನೆಯು ಟೆಕ್ಸಾಸ್ ಪ್ಯಾನ್ಹ್ಯಾಂಡಲ್ನಲ್ಲಿ ಉಲ್ಬಣಗೊಳ್ಳುತ್ತಿರುವ ಐದು ಮಾರಣಾಂತಿಕ ಕಾಡ್ಗಿಚ್ಚುಗಳಲ್ಲಿ ಒಂದಾಗಿದೆ, ಇದು ಹಲವಾರು ಮನೆಗಳು, ಜಾನುವಾರುಗಳು ಮತ್ತು ಜೀವನೋಪಾಯಕ್ಕೆ ಗಂಭೀರ ಅಪಾಯವನ್ನು ಉಂಟು ಮಾಡುತ್ತದೆ.