ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟದ ಆರೋಪಿಗಳು ಕಾಂಗ್ರೆಸ್ ಸಿಸ್ಟರ್ ಮಮತಾ ಬ್ಯಾನರ್ಜಿ ರಾಜ್ಯದಲ್ಲಿ ಸಿಕ್ಕಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು. ಇಂತಹ ಕೃತ್ಯ ಎಸಗಿದ ಆರೋಪಿಗಳು ಏಕೆ ಕಾಂಗ್ರೆಸ್ ಅಥವಾ ಅವರ ಸ್ನೇಹಿತರು ಅಧಿಕಾರದಲ್ಲಿರುವ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ದೇಶದ ಭದ್ರತೆಗೆ ಒಂದು ರೀತಿಯ ಅಪಾಯ. ರಾಮೇಶ್ವರಂ ಘಟನೆ ರಾಜ್ಯವನ್ನು ತಲ್ಲಣಗೊಳಿದೆ. ಕಾಂಗ್ರೆಸ್ ಅವಧಿಯಲ್ಲಿ ಪದೇ ಪದೇ ಇಂತಹ ಘಟನೆ ನಡೆಯುತ್ತಿದೆ. ಎನ್ ಐ ಎ ಇವರನ್ನು ಬಂಧಿಸುವ ಮೂಲಕ ಭವಿಷ್ಯದ ಅಪಾಯ ತಪ್ಪಿಸಿದೆ ಎಂದರು.
ರಾಮೇಶ್ವರಂ ಕೆಫೆ ಸ್ಫೋಟದ ಆರೋಪಿಗಳ ಬಂಧನದಿಂದ ನಾಡಿನ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.ಘಟನೆಯ ಸ್ಥಳಕ್ಕೆ ಹೋಗಿದ್ದ ಡಿಕೆಶಿ ತಿರುಚುವ ಪ್ರಯತ್ನ ಮಾಡಿದ್ದರು. ಅಲ್ಪಸಂಖ್ಯಾತರ ವಿರುದ್ಧ ಆರೋಪ ಬಂದರೆ ಓಟ್ ಬ್ಯಾಂಕ್ ಖಾಲಿ ಆಗುತ್ತದೆ ಎಂಬ ಆತಂಕ ಕಾಂಗ್ರೆಸ್ ನಾಯಕರದ್ದು ಎಂದರು.
ಅದಕ್ಕಾಗಿ ಪ್ರಕರಣ ತಿರುಚುವ ಪ್ರಯತ್ಮ ನಡೆಸಿದ್ದಾರೆ. ವ್ಯಾಪಾರ ವ್ಯಾಜ್ಯ ಕಾರಣಕ್ಕಾಗಿ ಸ್ಫೋಟ ನಡೆದಿದೆ ಎಂದು ಹೇಳಿದ್ದರು. ಪೊಲೀಸರು ಅದೇ ಜಾಡಿನಲ್ಲಿ ತನಿಖೆ ನಡೆಸಿದ್ದರು. ಕುಕ್ಕರ್ ಬ್ಲ್ಯಾಸ್ಟ್ ಆದಾಗ ಬ್ರದರ್ಸ್ ಅಂದಿದ್ದರು. ಇಂತಹ ಘಟನೆ ಮುಚ್ವಿಹಾಕುವ ಪ್ರಯತ್ಮ ಸರ್ಕಾರ ನಡೆಸುತ್ತಿದೆ.
ರಾಜ್ಯ ಸರ್ಕಾರದ ಡೈರಕ್ಷನ್ ನಿಂದ ಪೊಲೀಸರಿಗೆ ಆರೋಪಿಗಳ ಜಾಡು ಸಿಕ್ಕಿಲ್ಲ. ಎನ್ ಐ ಎ ಬಂದಿದ್ದರಿಂದ ಆರೋಪಿಗಳ ಪತ್ತೆಯಾಗಿದೆ. ಇವಾಗ ಕಾಂಗ್ರೆಸ್ ಸಿಸ್ಟರ್ ಮಮತಾ ಬ್ಯಾನರ್ಜಿ ರಾಜ್ಯದಲ್ಲಿ ಆರೋಪಿಗಳ ಪತ್ತೆಯಾಗಿದ್ದಾರೆ. ಬೇರೆ ಬೇರೆ ರಾಜ್ಯಗಳಿಗೆ ಹೋಗಬಹುದಿತ್ತು. ಆದರೆ ಹೋಗಿಲ್ಲ. ತೊಂದರೆ ಆಗಲ್ಲ ಎಂದು ವೆಸ್ಟ್ ಬಂಗಾಳಕ್ಕೆ ಹೋಗಿದ್ದಾರೆ ಎಂದು ತಿರುಗೇಟು ನೀಡಿದರು.
ಬಿಜೆಪಿ ಕಾರ್ಯಕರ್ತ ಪ್ರಮುಖ ಸಾಕ್ಷಿಯಾಗಿದ್ದಾರೆ. ಅವರನ್ನು ಎನ್ ಐ ಎ ವಿಚಾರಣೆ ನಡೆಸಿದಾಗ ಕಾಂಗ್ರೆಸ್ ದೊಡ್ಡ ವಿವಾದ ಮಾಡಿತ್ತು. ಸಾಯಿ ಪ್ರಸಾದ್ ಗೆ ಪ್ರಾಣ ಭಯ ಇದೆ. ದೇಶದ ಬಗ್ಗೆ ಕಾಳಜಿ ಇದ್ದಿದ್ದರೆ ಅವರು ಸಾಯಿಪ್ರಸಾದ್ ಹೆಸರು ಬಹಿರಂಗಪಡಿಸಬಾರದಿತ್ತು ಎಂದರು.
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರನ್ನು ಬಂಧನ ಮಾಡಲು ಒಂದು ವಾರ ತೆಗೆದುಕೊಂಡರು. ಆದರೆ ಅವರು ಕೂಗೇ ಇಲ್ಲ ಎಂದು ಕಾಂಗ್ರೆಸ್ ಸಚಿವರು ವಾದ ಮಾಡಿದರು. ಆದರೆ ಇವಾಗ ಯಾರದ್ದು ಕಾಮಾಲೆ ಕಣ್ಣು? ಕಾಂಗ್ರೆಸ್ ನವರು ಇವಾಗ ಏನು ಹೇಳುತ್ತೀರಾ? ಎಂದು ಪ್ರಶ್ನಿಸಿದರು.
ಚುನಾವಣಾ ಸಂದರ್ಭದಲ್ಲಿ ವೈಯಕ್ತಿಕ ಆರೋಪ ಸರಿಯಲ್ಲ. ಆದರೆ ಪ್ರಧಾನಿ ಮೋದಿಯನ್ನು ಹಿಟ್ಲರ್ ಹಾಗೂ ಮುಸೊಲೊನಿ ಅವರಿಗೆ ಹೋಲಿಕೆ ಮಾಡುವುದು ಸರಿಯಲ್ಲ. ನೈಜ್ಯ ಹಿಟ್ಲರ್ ಮನಸ್ಥಿತಿ ಕಾಂಗ್ರೆಸ್ ನಾಯಕರದ್ದು ಎಂದರು.
ನರೇಂದ್ರ ಮೋದಿ ಬಂದ ಬಳಿಕ ಭಯೋತ್ಪಾದಕ ಕೃತ್ಯಗಳು ಶೇ 90 ಕಡಿಮೆಯಾಗಿದೆ. ಸಂವಿಧಾನದ ಬಗ್ಗೆ ಇಲ್ಲಸಲ್ಲದ ಆರೋಪ ಮಾಡ್ತಿದ್ದಾರೆ. ಆದರೆ ಸಂವಿಧಾನ ಭಗವದ್ಗೀತೆಗಿಂತ ದೊಡ್ಡದು ಎಂದಿದ್ದಾರೆ ಎಂದರು. ನಾವು ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಇಂದಿರಾಗಾಂಧಿ ಸಂವಿಧಾನವನ್ನು ಬುಡಮೇಲು ಮಾಡಿದ್ರಲ್ಲ, ಅವಾಗ ಏಕೆ ಕಾಂಗ್ರೆಸ್ ನವರು ಸುಮ್ಮನಿದ್ದರು? ಎಂದು ಪ್ರಶ್ನಿಸಿದರು.
ಈಶ್ವರಪ್ಪ ಪಕ್ಷದ ಶಿಸ್ತು ಉಲ್ಲಂಘನೆ ಮಾಡಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅವರ ಬಗ್ಗೆ ಕೇಂದ್ರದ ನಾಯಕರು ಕ್ರಮ ಕೈಗೊಳ್ಳುತ್ತಾರೆ ಎಂದರು. ಡಿಕೆಶಿ ಭ್ರಮೆಯಲ್ಲಿದ್ದಾರೆ. ಆದರೆ ಚುನಾವಣೆಯ ಬಳಿಕ ಕಾಂಗ್ರೆಸ್ ಮುಕ್ತ ಕರ್ನಾಟಕ ಆಗುತ್ತದೆ. ಕಾಂಗ್ರೆಸ್ ಪಕ್ಷ ಇಲ್ಲದ ಮೇಲೆ ಬೇರೆ ಎಲ್ಲಾದರೂ ನೋಡಬೇಕಲ್ವಾ? ಅಪರಾಧಿ ತರ ದೇವೇಗೌಡರ ಮನೆ ಮುಂದೆ ಸಿದ್ದರಾಮಯ್ಯ ಕೂತಿದ್ದರು. ಭಿಕ್ಷುಕರ ರೀತಿ ಭಿಕ್ಷೆ ಬೇಡಿದ್ದರು. ಅವಾಗ ಜೆಡಿ ಎಸ್ ಪರಮಾತ್ಮರು ಎಂದರು.