ಡ್ರೈವರ್, ಎಲೆಕ್ಟ್ರಿಷನ್ ಕೆಲಸ ಮಾಡ್ತಿದ್ದವರು ಒಂದೇ ಏಟಿಗೆ ಶ್ರೀಮಂತರಾಗೋ ಕನಸು ಕಂಡಿದ್ರು.. ಅದಕ್ಕೆ ಅಂತಾ ಕೇರಳದಿಂದಲೇ ದಾರಿಯೊಂದು ಹುಡುಕಿ ಬೆಂಗಳೂರಿಗೆ ಬಂದಿದ್ರು.. ಅಷ್ಟಕ್ಕೂ ದೊಡ್ಡ ಮೊತ್ತದ ಅಮೌಂಟ್ ಹೊಡ್ಯೋಕೆ ಅವ್ರು ಏನ್ ಮಾಡಿದ್ದು ಗೊತ್ತಾ ಹೇಳ್ತೀವಿ ನೋಡಿ.. ಹೊಡದ್ರೆ ಬೆಟ್ಟಾನೇ ಹೊಡೀಬೇಕು ಅನ್ನೋ ಹಂಗೆ ಕೋಟಿ ಕೋಟಿ ಒಟ್ಟಿಗೆ ಹಣ ಮಾಡಿ ಮಜಾ ಉಡಾಯಿಸಿದ್ರು ಅಂತಾ ಪ್ಲಾನ್ ಮಾಡಿ ಅಂಬರ್ ಗ್ರೀಸ್ ಮಾರಾಟ ಮಾಡಲು ಯತ್ನಿಸಿದ್ದ ಐದು ಜನರ ಗ್ಯಾಂಗ್ ವೊಂದನ ಕೆ.ಎಸ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ.. ಸಾಜೀರ್, ಸಲೀಂ, ಚಾಲ್ಸ್, ವಿಜು, ನೌಶದ್ ಬಂಧಿತರ ಆರೋಪಿಗಳು.. ಆರೋಪಿಗಳನ್ನ ರೆಡ್ ಹ್ಯಾಂಡ್ ಆಗಿ ಹಿಡಿದ್ದ ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿತರಿಂದ ಸುಮಾರು 15ಕೋಟಿ ಮೌಲ್ಯದ 49ಕೆ.ಜಿ ಅಂಬರ್ಗೀಸ್ ಅನ್ನ ವಶಪಡೆದಿದ್ದಾರೆ..
ಅಂದ್ಹಾಗೆ ಈ ಐದು ಜನ ಆರೋಪಿಗಳು ಕೇರಳದವ್ರು.. ಡ್ರೈವರ್ ಎಲೆಕ್ಟ್ರಿಷನ್ ಆಗಿ ಕೆಲಸ ಮಾಡ್ತಿದ್ದವರು ಒಂದೇ ಏಟಿಗೆ ಶ್ರೀಮಂತರಾಗೋ ಕನಸು ಕಂಡಿದ್ರು.. ಅದಕ್ಕೆ ಅಂತಾ ಇವ್ರು ಪ್ಲಾನ್ ಮಾಡಿದ್ದೇ ಅಂಬರ್ಗೀಸ್ ಸೇಲ್ ಮಾಡೋದು.. ತಮಗೆ ಕಾಂಟ್ಯಾಕ್ಟ್ ಇರೋರಿಂದ ಸುಮಾರು 49ಕೆ.ಜಿ ಅಂಬರ್ಗೀಸ್ ಕಲೆಕ್ಟ್ ಮಾಡಿಕೊಂಡಿದ್ದ ಆರೋಪಿಗಳು ಅದನ್ನ ಮಾರಿಸಿ ಕೊಡ್ತೀವಿ ನಮ್ಗೂ ಭಾಗ ಕೊಡಿ ಅಂತಾ ತಂದಿದ್ರು.. ಬೆಂಗಳೂರಲ್ಲಿ ಅಂಬರ್ಗೀಸ್ ಗೆ ತುಂಬಾ ಬೆಲೆ ಇದೆ ಅಂತಾ ಕೆ.ಎಸ್ ಲಿಮಿಟ್ಸ್ ಅಲ್ಲಿ ಬಂದು ಅದನ್ನ ಕೊಂಡುಕೊಳ್ಳೋರನ್ನ ಹುಡುಕಾಡ್ತಿದ್ರು.. ಈ ಬಗ್ಗೆ ಪಕ್ಕಾ ಮಾಹಿತಿ ಪಡೆದಿದ್ದ ಕೆ.ಎಸ್ ಲೇಔಟ್ ಪೊಲೀಸರು ಅಂಬರ್ಗೀಸ್ ಖರೀದಿ ಮಾಡುವವರಂತೆ ಆರೋಪಿಗಳನ್ನ ಕಾಂಟ್ಯಾಕ್ಟ್ ಮಾಡಿ ಹದಿನೈದು ಕೋಟಿ ಮೌಲ್ಯದ ಅಂಬರ್ಗೀಸ್ ಸಮೇತ ಐವರನ್ನೂ ಅರೆಸ್ಟ್ ಮಾಡಿದ್ದಾರೆ..
ಮಾರ್ಕೆಟ್ ನಲ್ಲಿ ಒಂದು ಕೆ.ಜಿ ಅಂಬರ್ಗೀಸ್ ಗೆ ಒಂದು ಕೋಟಿಗೂ ಅಧಿಕ ಬೆಲೆ ಇದೆ.. ಸದ್ಯ ಒಂದು ಕೆ.ಜಿಗೆ ಸುಮಾರು 50-50ಲಕ್ಷ ಬೆಂಗಳೂರಲ್ಲಿ ಬೈ ಆ್ಯಂಡ್ ಸೇಲಿಂಗ್ ನಡೀತಿದೆ.. ಈ ಬಗ್ಗೆ ಮಾಹಿತಿ ಪಡೆದಿದ್ದ ಆರೋಪಿಗಳು ಬೆಂಗಳೂರಿಗೆ ಬಂದು ಅಂಬರ್ಗೀಸ್ ಮಾರಾಟ ಮಾಡಲು ಯತ್ನಿಸಿ ಸಿಕ್ಕಿಬಿದ್ದಿದ್ದಾರೆ.. ಇನ್ನು ಆರೋಪಿಗಳನ್ನ ಬಂಧಿಸಿರೋ ಪೊಲೀಸರು ಹೆಚ್ಚಿನ ತನಿಖೆ ನಡೆಸ್ತಿದ್ದಾರೆ.. ಆರೋಪಿಗಳು ವಿಚಾರಣೆ ವೇಳೆ ತ್ರೀಶೂರ್ ನ ಸಮುದ್ರದಿಂದ ತಂದಿರೋದಾಗಿ ಬಾಯ್ಬಿಟ್ಟಿದ್ದಾರೆ.. ಡ್ರೈವರ್, ಎಲೆಕ್ಟ್ರಿಷನ್ ಕೆಲಸ ಮಾಡ್ಕೊಂಡು ಇವ್ರಿಗೆ ಇಷ್ಟು ದೊಡ್ಡ ಮಟ್ಟದ ಅಂಬರ್ಗೀಸ್ ಹೇಗೆ ಸಿಕ್ತು ಅನ್ನೋದು ಸದ್ಯ ಪೊಲೀಸರ ಸಂಶಯ.. ಈ ಬಗ್ಗೆ ಕೆ.ಎಸ್ ಲೇಔಟ್ ಪೊಲೀಸರು ಹೆಚ್ಚಿನ ತನಿಖೆ ನಡೆಸ್ತಿದ್ದು ಇವ್ರಿಂದೆ ಯಾರಿದ್ದಾರೆ ಅನ್ನೋದನ್ನ ಕೆದಕುತ್ತಿದ್ದಾರೆ..