ಲಕ್ನೋ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಗೈದು ಕೊಲೆ ಮಾಡಿದ್ದ ಪ್ರಕರಣದ (Rape And Murder) ಅಪರಾಧಿಗೆ ವಿಶೇಷ ನ್ಯಾಯಾಲಯ (Court) ಮರಣದಂಡನೆ (Death Sentence) ವಿಧಿಸಿದೆ. ವ್ಯಕ್ತಿಯು 9 ವರ್ಷದ ಬಾಲಕಿಯ (Minor Girl) ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು.
ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ ವ್ಯಕ್ತಿಗೆ ಮರಣದಂಡನೆ ವಿಧಿಸಿದೆ.
ಗಾಜಿಯಾಬಾದ್ ಪೋಕ್ಸೋ ನ್ಯಾಯಾಲಯವು ( Ghaziabad POCSO Court) ಶಿಕ್ಷೆಯನ್ನು ಪ್ರಕಟಿಸಿದೆ. ಘಟನೆ ನಡೆದ ಸುಮಾರು 6 ತಿಂಗಳ ನಂತರ ನ್ಯಾಯಾಲಯವು ಆರೋಪಿಗಳಿಗೆ ಐಪಿಸಿ ಸೆಕ್ಷನ್ 302 (ಮರಣದಂಡನೆ), 363 (ಅಪಹರಣ) ಮತ್ತು 376 (ಅತ್ಯಾಚಾರ) ರ ಅಡಿಯಲ್ಲಿ ಶಿಕ್ಷೆ ವಿಧಿಸಿದೆ ಎಂದು ಗಾಜಿಯಾಬಾದ್ ಗ್ರಾಮಂತರದ ಡಿಸಿಪಿ ರವಿ ಕುಮಾರ್ ಹೇಳಿದ್ದಾರೆ. 2022ರ ಆ. 18ರಂದು ಮೋದಿನಗರ ಪ್ರದೇಶದ ಹಳ್ಳಿಯೊಂದರಲ್ಲಿ ಅಪ್ರಾಪ್ತ ಬಾಲಕಿಯು ಶವವಾಗಿ ಪತ್ತೆಯಾಗಿದ್ದಳು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೊಂಡ ಪೊಲೀಸರು ಅದೇ ಗ್ರಾಮದ ವ್ಯಕ್ತಿಯನ್ನು ಬಂಧಿಸಿದ್ದರು.