ಮುಂಬೈ: ಬಿಗ್ ಬಾಸ್ನ ಮಾಜಿ ಸ್ಪರ್ಧಿ, ಬಾಲಿವುಡ್ ನಟ ಅಜಾಜ್ ಖಾನ್ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ವರಸೋವಾ ಕ್ಷೇತ್ರದಿಂದ ಕಣಕ್ಕಿಳಿದು ಹೀನಾಯವಾಗಿ ಸೋಲು ಕಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸುಮಾರು 50 ಲಕ್ಷ ಹಿಂಬಾಲಕರನ್ನು ಹೊಂದಿರುವ ನಟ ಚುನಾವಣೆಯಲ್ಲಿ ಗಳಿಸಿರುವುದು ಕೇವಲ 131 ಮತ.
ವರ್ಸೋವಾ ಕ್ಷೇತ್ರದಲ್ಲಿ ಶೇ.42ರಷ್ಟು ಮತದಾನವಾಗಿದ್ದು ಶಿವಸೇನೆಯ ಯುಬಿಟಿ ಬಣದ ಹರೂನ್ ಖಾನ್ ಜಯಗಳಿಸಿದ್ದಾರೆ. ಅಜಾಜ್ 131 ಮತ ಪಡೆದರೆ, ನೋಟಾಗೆ 1022 ಮತ ಬಂದಿವೆ. ಇದು ಅಜಾಜ್ಗೆ ಸಿಕ್ಕ ಮತಕ್ಕಿಂತ 6 ಪಟ್ಟು ಅಧಿಕ.
ಏಜಾಜ್ ಖಾನ್ 2003 ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದು, ಹಿಂದಿ ಮತ್ತು ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಬಹುತೇಕ ವಿಲನ್ ಪಾತ್ರಗಳಲ್ಲಿಯೇ ಏಜಾಜ್ ಖಾನ್ ಹೆಚ್ಚಾಗಿ ನಟಿಸಿದ್ದಾರೆ. ‘ರಕ್ತ ಚರಿತ್ರ’, ಜೂ ಎನ್ಟಿಆರ್ ನಟನೆಯ ‘ಬಾದ್ಶಾ’, ‘ಟೆಂಪರ್’, ರಾಮ್ ಚರಣ್ ನಟನೆಯ ‘ವಿನಯ ವಿಧೇಯ ರಾಮ’ ಕನ್ನಡದಲ್ಲೂ ಬಿಡುಗಡೆ ಆಗಿದ್ದ ‘ರೋಗ್’ ಇನ್ನೂ ಹಲವು ಸಿನಿಮಾಗಳಲ್ಲಿ ವಿಲನ್ ಆಗಿ ನಟಿಸಿದ್ದಾರೆ. 2018 ರಲ್ಲಿ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೂ ಒಳಗಾಗಿದ್ದ ಏಜಾಜ್ ಖಾನ್ 26 ತಿಂಗಳ ಕಾಲ ಜೈಲು ವಾಸ ಸಹ ಅನುಭವಿಸಿದ್ದಾರೆ.
ಸಾಮಾಜಿಕ ಜಾಲತಾಣಗಳು ಹೆಚ್ಚು ಜನಪ್ರಿಯವಾಗುವ ವೇಳೆಗೆ ತಮ್ಮ ವಿಡಿಯೋ, ಭಾಷಣ, ವಿವಾದಗಳ ವಿಡಿಯೋಗಳನ್ನು ಹಂಚಿಕೊಂಡು ಭಾರಿ ಸಂಖ್ಯೆಯ ಫಾಲೋವರ್ಗಳನ್ನು ಏಜಾಜ್ ಖಾನ್ ಪಡೆದುಕೊಂಡಿದ್ದಾರೆ. 56 ಲಕ್ಷ ಜನ ಏಜಾಜ್ ಖಾನ್ ಅವರನ್ನು ಫಾಲೋ ಮಾಡುತ್ತಾರೆ. ಆದರೆ ಚುನಾವಣೆಯಲ್ಲಿ ಅವರಿಗೆ ಕೇವಲ 155 ಮತಗಳು ಮಾತ್ರ ಸಿಕ್ಕಿವೆ. ಅದೇ ಕ್ಷೇತ್ರದಲ್ಲಿ ನೋಟಾಗೆ ಅವರಿಗಿಂತಲೂ ಹತ್ತು ಪಟ್ಟು ಹೆಚ್ಚು ಮತಗಳು ದೊರೆತಿವೆ. ನೋಟಾಗೆ 1298 ಮತಗಳು ಬಂದಿವೆ. ವಿಶೇಷವೆಂದರೆ ಈ ಕ್ಷೇತ್ರದಲ್ಲಿ ಏಜಾಜ್ ಖಾನ್ಗಿಂತಲೂ ಕಡಿಮೆ ಮತ ಪಡೆದ ಐದು ಅಭ್ಯರ್ಥಿಗಳಿದ್ದಾರೆ. ಒಟ್ಟು 19 ಅಭ್ಯರ್ಥಿಗಳು ಈ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ಶಿವಸೇನೆಯ ಹರೂನ್ ಖಾನ್ ಈ ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ.