ರಾತ್ರಿ ಕಂಠಪೂರ್ತಿ ಕುಡಿದು ಇಬ್ಬರು ಅಮೆರಿಕನ್ನರು ಐಫೆಲ್ ಟವರ್ ಏರಿ ಮಲಗಿರುವ ಘಟನೆ ಬೆಳಕಿಗೆ ಬಂದಿದೆ. ಐಫೆಲ್ ಟವರ್ಗೆ ಅಷ್ಟೊಂದು ಭದ್ರತೆ ಇದ್ದರೂ ಆ ಭದ್ರತಾ ಸಿಬ್ಬಂದಿಗಳಿಂದ ತಪ್ಪಿಸಿಕೊಂಡು ಐಫೆಲ್ ಟವರ್ ಏರಿದ್ದಾರೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಐಫೆಲ್ ಟವರ್ ಬಾಗಿಲು ತೆರೆಯುವ ಮುಂಚಿತವಾಗಿಯೇ ಇಬ್ಬರು ಟವರ್ ಮೇಲೆ ಓಡಾಡುತ್ತಿರುವುದು ಕಂಡುಬಂತು. ಅವರು ಮದ್ಯಪಾನ ಮಾಡಿದ್ದರಿಂದ ಕೆಳಗೆ ಇಳಿಯಲಾಗದೆ ಅಲ್ಲೇ ಉಳಿದಿದ್ದಾರೆ.
ಸಾಮಾನ್ಯವಾಗಿ ಐಫೆಲ್ ಟವರ್ನ ಎರಡನೇ ಮತ್ತು ಮೂರನೇ ಹಂತಗಳನ್ನು ಸಾರ್ವಜನಿಕರಿಗೆ ಮುಚ್ಚಲಾಗುತ್ತದೆ. ಆದರೆ ಕುಡಿದ ಅಮೇರಿಕನ್ನರು ಇಡೀ ರಾತ್ರಿ ಈ ಎರಡು ಗೋಪುರಗಳ ನಡುವೆ ನಕ್ಷತ್ರಗಳ ಕೆಳಗೆ ಕಳೆದಿದ್ದಾರೆ. ಆದರೆ ಯಾವುದೇ ರೀತಿ ಗಲಾಟೆಯನ್ನು ಅವರು ಮಾಡಲಿಲ್ಲ. ಇಬ್ಬರೂ ಪ್ರವಾಸಿಗರು ಕಳೆದ ಭಾನುವಾರ ರಾತ್ರಿ 10:40 ರ ಸುಮಾರಿಗೆ ಪ್ರವೇಶ ಟಿಕೆಟ್ಗಳನ್ನು ಖರೀದಿಸಿದ್ದರು ಎಂದು ಹೇಳಲಾಗಿದೆ. ಆದರೆ ಅವರು ಭದ್ರತಾ ಸಿಬ್ಬಂದಿಯನ್ನು ತಪ್ಪಿಸಿ ಟವರ್ ಏರಿದರು. ವರದಿಯ ಪ್ರಕಾರ, ಅಪಾಯಕಾರಿ ಎತ್ತರದಿಂದ ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿಯ ವಿಶೇಷ ತಂಡವನ್ನು ಕಳುಹಿಸಲಾಗಿದೆ.