ಟೆಲ್ ಅವಿವ್: ಇಸ್ರೇಲ್ ಹಮಾಸ್ ಯುದ್ಧದಲ್ಲಿ (Israel Hamas war) ಈವರೆಗೆ ಸುಮಾರು 5 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ 3,800 ಪ್ಯಾಲೆಸ್ತೀನಿಯರು (Palestinians) ಹಾಗೂ 1,400 ಇಸ್ರೇಲಿಯನ್ನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇಸ್ರೇಲ್-ಹಮಾಸ್ ಕದನ ಪಶ್ಚಿಮ ಏಷ್ಯಾದ ಶಾಂತಿ ಕದಡುವಂತೆ ಕಾಣ್ತಿದೆ. ಇಸ್ರೇಲ್ ಬೆಂಬಲಕ್ಕೆ ನಿಂತ ಅಮೆರಿಕ ವಿರುದ್ಧ ಅರಬ್ ದೇಶಗಳು ಸಿಡಿದೇಳುತ್ತಿವೆ. ಇರಾಕ್ನ ಬಾಗ್ದಾದ್ನಲ್ಲಿರುವ ಅಮೆರಿಕ ಸೇನಾ ಶಿಬಿರದ ಮೇಲೆ ರಾಕೆಟ್ಗಳು ಹಾರಿವೆ.
ಸಿರಿಯಾದ ಆಲ್-ತನ್ಫ್ ಸೇನಾ ನೆಲೆ ಮೇಲೆಯೂ ಡ್ರೋನ್ ದಾಳಿ ನಡೆದಿದೆ. ಯೆಮೆನ್ ತೀರದಿಂದ ಇರಾನ್ ಬೆಂಬಲಿತ ಹುತಿ ಉಗ್ರರು ಇಸ್ರೇಲ್ ಮೇಲೆ ಪ್ರಯೋಗಿಸಿದ ಕ್ಷಿಪಣಿಗಳು ಯುಎಸ್ ಕಾರ್ನಿ ಹೆಸರಿನ ಅಮೆರಿಕ ಯುದ್ಧ ನೌಕೆಯನ್ನು ನಾಶ ಮಾಡಿದೆ. ನಾವು ಎಂತಹದೇ ಸನ್ನಿವೇಶವನ್ನು ಎದುರಿಸಲು ಸಜ್ಜಾಗಿದ್ದೇವೆ ಎಂದು ಅಮೆರಿಕ ಎಚ್ಚರಿಕೆ ನೀಡಿದೆ.
ಈ ಮಧ್ಯೆ, ಬಾಯ್ಕಾಟ್ ಇಸ್ರೇಲ್ ಕ್ಯಾಂಪೇನ್ ಎನ್ನುವ ಪೋಸ್ಟರ್ ಬೆಂಗಳೂರಿನ ಎಲೆಕ್ಟಾçನಿಕ್ ಸಿಟಿಯ ಮಸೀದಿಯೊಂದರ ಗೋಡೆ ಮೇಲೆ ಕಾಣಿಸಿಕೊಂಡಿದೆ. ಆಕ್ರೋಶ ವ್ಯಕ್ತವಾಗುತ್ತಲೇ ಪೋಸ್ಟರ್ ತೆರವು ಮಾಡಲಾಗಿದೆ. ಇನ್ನೂ ಹೈದ್ರಾಬಾದ್ನ ಮಸೀದಿಯೊಂದರ ಆವರಣದಲ್ಲಿ ಇಸ್ರೇಲ್-ಅಮೆರಿಕ ಧ್ವಜವನ್ನು ಬರೆದು ಅದರ ಮೇಲೆ ಓಡಾಡುವ ಮೂಲಕ ಮುಸ್ಲಿಮರು ಆಕ್ರೋಶ ಹೊರಹಾಕ್ತಿದ್ದಾರೆ.