ಅದೊಂದು ಸುಂದರವಾದ ಕುಟುಂಬ,ಇಡಿ ಊರಿಗೆ ಊರೆ ಇವರನ್ನ ಕಂಡ್ರೆ ಕೈ ಮುಗಿತಾ ಇದ್ರು, ನಾಲ್ಕು ಜನ ಮುದ್ದಾದ ಹೆಣ್ಣು ಮಕ್ಕಳು ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ದಂಪತಿಗೆ ದೇವರು ವರ ಕರುಣಿಸಿದ್ದ.ಇನ್ನೇನು ಕೆಲವೇ ದಿನಗಳಲ್ಲಿ ಮಗುವಿಗೆ ಜನ್ಮ ನೀಡಿ ಬಾಣಂತಿಯಾಗಬೇಕಿದ್ದ ಗರ್ಭಿಣಿ ಮಹಿಳೆ ದುರಂತ ಸಾವು ಕಂಡಿದ್ದು ಯಾಕೆ..ತುಂಬು ಗರ್ಭಿಣಿಯನ್ನ ಅಷ್ಟೊಂದು ಭೀಕರವಾಗಿ ಹತ್ಯೆ ಮಾಡಿದ್ದರ ಹಿನ್ನೆಲೆ ಏನು ಅಂತ ಗೊತ್ತಾಗಬೇಕಾದ್ರೆ ಈ ಸ್ಟೋರಿ ನೋಡಿ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮದ ತೋಟದ ಮನೆಯಲ್ಲಿ ಗರ್ಭಿಣಿ ಮಹಿಳೆಯ ಸಾವಿನ ಹಿಂದಿದೆ ಭಯಾನಕ ಸತ್ಯ ಇದು ಕೀಚಕ ಭಾವನ ನೀಚ ಕೃತ್ಯ ಹೌದು. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮದಲ್ಲಿ ಡಿಸೆಂಬರ್ 20 ರಂದು ನಡೆದ ತುಂಬು ಗರ್ಭಿಣಿ ಸುವರ್ಣ ಮಠಪತಿ ಭೀಕರ ಕೊಲೆಗೆ ಅವತ್ತು ಇಡಿ ಗ್ರಾಮವೇ ಬೆಚ್ಚಿ ಬಿದ್ದಿತ್ತು.
ಮಟ ಮಟ ಮದ್ಯಾಹ್ನ ತುಂಬು ಗರ್ಭಿಣಿಗೆ ಹರಿತವಾದ ಆಯುಧದಿಂದ ಹಲ್ಲೆ ಮಾಡಿದ್ದ ದುಷ್ಕರ್ಮಿ ಅಲ್ಲಿಂದ ಪರಾರಿಯಾಗಿದ್ದ. ಮನೆಗೆ ಬಂದ ಪತಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿಯನ್ನ ಸ್ಥಳೀಯರ ಸಹಾಯದಿಂದ ಹಾರೋಗೇರಿಯ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದ…..ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ತುಂಬು ಗರ್ಭಿಣಿ ಸುವರ್ಣ ಮಠಪತಿ ಉಸಿರು ಚೆಲ್ಲಿದ್ದು ಹೊಟ್ಟೆಯಲ್ಲಿದ್ದ ಜಗತ್ತನ್ನೇ ಕಾಣದ ಮುಗ್ದ ಕಂದಮ್ಮ ಕೂಡ ಅಮ್ಮನ ಜೊತೆಗೆ ಬಾರದ ಲೋಕಕ್ಕೆ ತೆರಳಿತ್ತು.
ಈ ಘಟನೆ ಸಂಬಂಧ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ಧಾಖಲಾಗಿದ್ದು, ನಂತರ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಆರೋಪಿಯ ಜಾಡು ಹಿಡಿದು ಪತ್ತೆಹಚ್ಚಲಾಗಿ, ಕೊಲೆಗಡುಕ ಮೃತ ಸುವರ್ಣ ಳ ಸ್ವಂತ ಅಕ್ಕನ ಗಂಡ ಅಂದ್ರೆ ಭಾವನೆ ಇಂತಹ ಪೈಶಾಚಿಕ ಕೃತ್ಯ ಎಸಗಿರೋದು ಬಹಿರಂಗವಾಗಿದೆ. ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದ ನಿವಾಸಿ ಅಪ್ಪಯ್ಯ ರಾಚಯ್ಯ ಮಟಪತಿಯನ್ನು ಪೋಲಿಸರು ತಮ್ಮದೇ ಭಾಷೆಯಲ್ಲಿ ವಿಚಾರಿಸಿದಾಗ ತಾನೇ ಸುವರ್ಣ ಮಠಪತಿಯ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಪೊಲೀಸರ ಲಾಠಿ ರುಚಿಗೆ ಬಾಯ್ಬಿಟ್ಟ ಆರೋಪಿ ಕೆಲವು ಸತ್ಯ ಸಂಗತಿಗಳನ್ನ ಬಿಚ್ಚಿಟ್ಟಿದ್ದು ಕೆಲಸವಿಲ್ಲದೆ, ಕುಡಿತದ ದಾಸನಾಗಿದ್ದ ಕೊಲೆ ಆರೋಪಿ ಅಪ್ಪಯ್ಯ ಸುಮಾರು 7 ವರೆ ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ, ಆಗಾಗ ಮೃತ ಸುವರ್ಣ ಬಳಿಯೂ ಸ್ವಲ್ಪ ಸ್ಪಲ್ಪವಾಗಿ ಸುಮಾರು ಐವತ್ತು ಸಾವಿರದಷ್ಟು ಹಣ ಪಡೆದಿದ್ದ, ಹಣ ನೀಡುವಂತೆ ಕೇಳುತ್ತಿದ್ದ ಸುವರ್ಣಗೆ, ನನಗೆ ಸಾಲ ತುಂಬಾ ಆಗಿದೆ ಈಗ ಸದ್ಯಕ್ಕೆ ಕೊಡಲು ಅಗಲ್ಲ ಎಂದು ಸತಾಯಿಸುತ್ತಿದ್ದನಂತೆ.
ಇನ್ನೂ ಕೊಲೆ ನಡಿಯೋ ಎರಡು ದಿನಗಳ ಹಿಂದೆ ಸುಮಾರು 20 ನಿಮಿಷ ಗಳ ಕಾಲ ಕೊಲೆ ಆರೋಪಿ ಅಪ್ಪಯ್ಯ, ಜೊತೆ ಸುವರ್ಣ ನನ್ನ ಡೆಲಿವರಿ ಸಮಯ ಹತ್ರ ಬಂದಿದೆ ನನಗೆ ಹಣ ಕೊಡು ಎಂದು ಫೋನ್ ನಲ್ಲಿ ಗದರಿದ್ದಾಳೆ ಇದರಿಂದ.ಸಿಟ್ಟಿಗೆದ್ದ ಅಪ್ಪಯ್ಯ ಆಕೆಯನ್ನ ಮುಗಿಸಿ ಬಿಡುವ ಸಂಚು ಹಾಕಿ ಡಿಸೆಂಬರ್ 20 ರಂದು ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಅವರ ತೋಟದ ಮನೆಗೆ ಬಂದು ಗರ್ಭಿಣಿ ಸುವರ್ಣ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಅದರ ಮೈಮೇಲ್ಲಿದ್ದ ಓಲೆ, ಹಾಗೂ ಸಣ್ಣ ಪುಟ್ಟ ಚಿನ್ನ ತೆಗೆದುಕೊಂಡು ಪರಾರಿಯಾಗಿದ್ದಾನೆ.
ಮಾಡಿಕೊಂಡಿದ್ದ ಸಾಲದ ಹಣಕ್ಕಾಗಿ ತುಂಬು ಗರ್ಭಿಣಿ ಅಂತಾನೂ ಲೆಕ್ಕಿಸದೆ ನೀಚ ಕೃತ್ಯ ಎಸಗಿದ ಪಾಪಿ ಭಾವನನ್ನ ಸದ್ಯ ಹೆಡೆಮುರಿ ಕಟ್ಟಿದ ಅಥಣಿ ಪೊಲೀಸರು ಜೈಲಿಗೆ ಅಟ್ಟಿದ್ದಾರೆ, ಇತ್ತ ತಾಯಿ ಹಾಗೂ ಮಗುವನ್ನ ಕಳೆದುಕೊಂಡ ಕುಟುಂಬ ಮಾತ್ರ ದುಖಃದ ಮಡುವಿನಲ್ಲಿ ಮುಳುಗಿದೆ
ಜಗತ್ತಿನಲ್ಲಿ ಅದೆಷ್ಟೋ ಕೊಲರಗಳು ಹೆಣ್ಣು,ಹೊನ್ನು,ಮಣ್ಣಿಗಾಗಿ ನಡೆಯುತ್ತೆ ಆದರೆ ಸದ್ಯ ಸಾಲ ಕೊಟ್ಟೋನು ಕೋಡಂಗಿ ಇಸಗೊಂಡವನು ಈರಭದ್ರ ಅನ್ನುವ ಸ್ಥಿತಿ ಇದ್ದು ಸಾಲದ ಹಣಕ್ಕಾಗಿ ಜೀವವನ್ನೆ ಬಲಿತರಗೆದುಕೊಂಡ ಅಪ್ಪಯ್ಯ ಮಠಪತಿಗೆ ಕೊಲೆಯಾದ ಸುವರ್ಣಾ ಮಠಪತಿ ಕುಟುಂಬ ಹಿಡಿಶಾಪ ಹಾಕುತ್ತಿದೆ.