ಜೀರಿಗೆ ಸಾರ ಮಿಶ್ರಣ ಮಾಡಿದ ನೀರು ಇಂತಹ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ. ಬೇಕಾದಷ್ಟು ಜನರಿಗೆ ರಕ್ತದ ಒತ್ತಡ, ಮಧುಮೇಹ, ಹೃದಯದ ತೊಂದರೆ ಇತ್ಯಾದಿಗಳು ಸಹ ಅಚ್ಚುಕಟ್ಟಾಗಿ ಇದರಿಂದ ನಿರ್ವಹಣೆಯಾಗಿದೆ. ಹಾಗಿದ್ದ ಮೇಲೆ ನೀವೇಕೆ ಒಮ್ಮೆ ಟ್ರೈ ಮಾಡಬಾರದು. ಜೀರಾ ವಾಟರ್ ಅಥವಾ ಜೀರಿಗೆ ಪಾನೀಯ ಕುಡಿಯುವುದರ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಬಹುದು.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಜೀರಿಗೆಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ರಾತ್ರಿ ವೇಳೆ ಜೀರಿಗೆ ನೆನೆಹಾಕಿ, ಬೆಳಗ್ಗೆ ಅದೇ ನೀರಿನಲ್ಲಿ ಮತ್ತಷ್ಟು ನೀರು ಸೇರಿಸಿ ಕುದಿಸಿ ಟೀ ರೀತಿಯಲ್ಲಿ ಕುಡಿದರೆ, ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಜೀರಿಗೆ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಸೋಂಕನ್ನು ಉಂಟುಮಾಡುವ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಜೀರಿಗೆಯಲ್ಲಿ ಮೆಗ್ನೀಷಿಯಮ್, ಕ್ಯಾಲ್ಸಿಯಂ ಸೇರಿ ವಿವಿಧ ಖನಿಜಗಳಿಂದ ಕೂಡಿದೆ.
ಉರಿಯೂತ ಕಡಿಮೆ ಮಾಡುತ್ತದೆ: ನೀರಿನಲ್ಲಿ ಜೀರಿಗೆಯನ್ನು ಬೆರೆಸಿ ಕುದಿಸಿ ಕುಡಿಯುವುದರಿಂದ ಯಕೃತ್ತನ್ನು ಉರಿಯೂತದಿಂದ ರಕ್ಷಿಸುತ್ತದೆ ಮತ್ತು ಒಟ್ಟಾರೆ ಯಕೃತ್ತಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಈ ನೀರಿನ ಸೇವನೆಯಿಂದ ಹೊಟ್ಟೆಯ ಇತರೆ ಸಮಸ್ಯೆಗಳೂ ನಿವಾರಣೆ ಆಗುತ್ತದೆ. ಹೊಟ್ಟೆ ನೋವು, ಗ್ಯಾಸ್ಟ್ರಿಕ್, ಹೊಟ್ಟೆ ಮುರಿತ ಈ ಎಲ್ಲ ಸಮಸ್ಯೆಗಳೂ ನಿವಾರಣೆಗೊಳ್ಳಲಿದೆ.
ಮುಖದ ಸುಕ್ಕು ನಿವಾರಣೆ ಚರ್ಮದ ಕಾಂತಿ ಹೆಚ್ಚಳವಾಗಲು ಸಹಾಯ ಮಾಡುತ್ತದೆ. ಇದರಲ್ಲಿ ವಿಟಮಿನ್ ಇ ಅಂಶ ಇರುವುದರಿಂದ ಚರ್ಮಕ್ಕೆ ಆರೋಗ್ಯಕರ ಹೊಳಪು ನೀಡುತ್ತದೆ. ನಿತ್ಯ ತಪ್ಪದೆ ಕುದಿಸಿದ ಜೀರಿಗೆ ನೀರನ್ನು ಕುಡಿಯುತ್ತ ಬಂದರೆ ಮುಖದಲ್ಲಿನ ಸುಕ್ಕುಗಳು ನಿವಾರಣೆ ಆಗುತ್ತದೆ. ಜೀರಿಗೆ ನೀರಿನಲ್ಲಿ ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮ್ಯಾಂಗನೀಸ್ ಮತ್ತು ಸೆಲೆನಿಯಂನಂತಹ ಖನಿಜಗಳು ಸಮೃದ್ಧವಾಗಿವೆ.
ಮೊಡವೆಗಳೂ ಕಡಿಮೆಯಾಗಲಿವೆ ಮುಖದ ಮೇಲೆ ಮೊಡವೆಗಳನ್ನು ಉಂಟುಮಾಡುವ ಬ್ಯಾಕ್ಟೀರಿಯಾದ ವಿರುದ್ಧ ಜೀರಿಗೆಯು ಹೋರಾಡಲಿದೆ.
ಜೀರ್ಣ ಶಕ್ತಿಯನ್ನು ಹೆಚ್ಚಿಸುವ ಶಕ್ತಿ ಇದೆ ಯಾವುದೇ ರೀತಿಯ ಅಜೀರ್ಣದಿಂದ ಬಳಲುತ್ತಿದ್ದರೆ ಅಥವಾ ನೀವು ಆರೋಗ್ಯವಾಗಿದ್ದರೂ ನಿತ್ಯ ಜೀರಿಗೆ ನೀರು ಸೇವನೆಯಿಂದ ಉದರ ಸಂಬಂಧಿ ಸಮಸ್ಯೆಗಳು ಕಾಡುವುದಿಲ್ಲ. ಗ್ಲೂಕೋಸ್ ಮತ್ತು ಕೊಬ್ಬನ್ನು ಕರಗಿಸಲು ಸಹಾಯ ಮಾಡಲಿದೆ. ಇದು ಪಿತ್ತಜನಕಾಂಗದಲ್ಲಿ ಪಿತ್ತರಸ ಆಮ್ಲದ ಉತ್ಪಾದನೆ ಪ್ರಕ್ರಿಯೆಯನ್ನುಬಲ ಪಡಿಸುತ್ತದೆ.