ಕಾರ್ಪೊರೇಟ್ ಕ್ಷೇತ್ರದ ಯುವತಿಯರ ಬ್ಲೇಜರ್ ಜಾಕೆಟ್ ಫ್ಯಾಷನ್ ಮಾನ್ಸೂನ್ ಸೀಸನ್ನಲ್ಲಿ ಮತ್ತೆ ಮರಳಿದೆ. ಹೌದು, ಈ ಬಾರಿಯ ಮಾನ್ಸೂನ್ನಲ್ಲಿ ಕಾರ್ಪೊರೇಟ್ ಕ್ಷೇತ್ರದ ಯುವತಿಯರ ಫ್ಯಾಷನ್ನಲ್ಲಿ ನಾನಾ ಬಗೆಯ ಬ್ಲೇಜರ್ ಜಾಕೆಟ್ಗಳು, ನಯಾ ಬಗೆಯಲ್ಲಿ ಕಾಣಿಸಿಕೊಂಡಿವೆ.
ಬ್ಲೇಜರ್ ಜಾಕೆಟ್ ಹೊಸ ಫ್ಯಾಷನ್ ಏನಲ್ಲ. ಆದರೆ, ಇದು ಇದುವರೆಗೂ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ, ಇದೀಗ ಕಾರ್ಪೊರೇಟ್ ಕ್ಷೇತ್ರದ ಯುವತಿಯರನ್ನು ಮಾತ್ರವಲ್ಲ, ಇನ್ನಿತರೆ ಹುಡುಗಿಯರನ್ನು ಸೆಳೆದಿವೆ. ಇದಕ್ಕೆ ಕಾರಣ ಇವನ್ನು ಹೊಸ ಸ್ಲೈಲಿಂಗ್ ಮೂಲಕ ಧರಿಸಲಾರಂಭಿಸಿರುವುದು.
ಮಳೆಗಾಲದಲ್ಲಿ ಬ್ಲೇಜರ್ ಜಾಕೆಟ್ಗಳು ಲೇಯರ್ ಲುಕ್ ನೀಡುತ್ತವೆ. ಅಲ್ಲದೇ, ಕಾರ್ಪೊರೇಟ್ ಕ್ಷೇತ್ರದ ಯುವತಿಯರಿಗೆ ದಿನನಿತ್ಯದ ಮೀಟಿಂಗ್ ಹಾಗೂ ವರ್ಕ್ಶಾಪ್ಗಳಿಗೆ ಮ್ಯಾಚ್ ಆಗುತ್ತವೆ. ಅಲ್ಲದೇ, ಸದಾ ಎಸಿಯಲ್ಲಿ ಕುಳಿತು ಕೆಲಸ ಮಾಡುವವರನ್ನು ಇವು ಬೆಚ್ಚಗಿಡುತ್ತವೆ ಕೂಡ. ಇನ್ನು, ಹೈ ಫ್ಯಾಷನ್ ಲಿಸ್ಟ್ನಲ್ಲಿರುವ, ಇವು ಹೈ ಕ್ಲಾಸ್ ಲುಕ್ ನೀಡುವುದರೊಂದಿಗೆ ಧರಿಸುವ ಯುವತಿಯರ ವ್ಯಕ್ತಿತ್ವವನ್ನು ಎತ್ತಿ ಹಿಡಿಯುತ್ತವೆ.
ವೂಲ್, ಚೆಕ್ಡ್ ಶೈಲಿಯ ಬ್ಲೇಜರ್ ಜಾಕೆಟ್ಗಳು ಈ ಜನರೇಷನ್ ಹುಡುಗಿಯರನ್ನು ಸೆಳೆದಿವೆ. ಅದರಲ್ಲೂ ಲೈಟ್ವೈಟ್ ಬ್ಲೇಜರ್ ಜಾಕೆಟ್ಗಳು ಅತಿ ಹೆಚ್ಚು ಮಾರಾಟವಾಗುತ್ತಿವೆ. ನೋಡಲು ವೆಸ್ಟರ್ನ್ ಲುಕ್ ನೀಡಿದರೂ ಆಕರ್ಷಕವಾಗಿ ಕಾಣಿಸುವ ಈ ಜಾಕೆಟ್ ಲುಕ್ನ ಬ್ಲೇಜರ್ಗಳು ಸದ್ಯ ಕಾರ್ಪೊರೇಟ್ ಕ್ಷೇತ್ರದ ಯುವತಿಯರ ಫ್ಯಾಷನ್ನ ಟಾಪ್ ಲಿಸ್ಟ್ನಲ್ಲಿವೆ. ಇದರ ಬೇಡಿಕೆ ಕೂಡ ಜಾಸ್ತಿಯಾಗಿದೆ.
ಫ್ಯಾಷನ್ಗೆ ಇಲ್ಲಿದೆ ವಿವಿಧ ಟಿಪ್ಸ್
*ಜೀನ್ಸ್ ಪ್ಯಾಂಟ್ ಮೇಲೆ ಕ್ಯಾಶುವಲ್ ಲುಕ್ಗಾಗಿ ಧರಿಸಬಹುದು.
*ಕೊಂಚ ಮಾಡರ್ನ್ ಲುಕ್ ಬೇಕಿದ್ದಲ್ಲಿ, ಕ್ರಾಪ್ ಟಾಪ್ ಅಥವಾ ಕ್ರಾಪ್ ಬ್ಲೌಸ್ಗೂ ಧರಿಸಬಹುದು.
*ಸ್ಕರ್ಟ್ ಜೊತೆಗೂ ಮ್ಯಾಚ್ ಮಾಡಬಹುದು.
*ಬ್ಲೇಜರ್ ಜಾಕೆಟ್ ಧರಿಸಿದಾಗ ಆದಷ್ಟೂ ಶೂಗಳನ್ನು ಧರಿಸಲೇಬೇಕು.
*ಆಕ್ಸೆಸರೀಸ್ ಮಿನಿಮಲ್ ಆಗಿರಬೇಕು.