ಗದಗ ;- ಉಚಿತ ಬಸ್ ಪ್ರಯಾಣ ಹಿನ್ನೆಲೆ ಸಾರಿಗೆ ಬಸ್ ಗಳು ಮಹಿಳಾ ಮಣಿಗಳಿಂದ ತುಂಬಿ ತುಳುಕ್ಕುತ್ತಿವೆ. ಇದರಿಂದ ಬಾಲಕನೊಬ್ಬ ಬಸ್ ಏರಲು ನಿರಾಕರಣೆ ಮಾಡಿ ಕಣ್ಣೀರು ಹಾಕ್ತಾಯಿರುವ ದೃಶ್ಯ ಸೆರೆಯಾಗಿದೆ.
ಗದಗ ತಾಲೂಕಿನ ಮುಳಗುಂದ ಬಳಿಯ ದಾವಲ್ ಮಲ್ಲಿಕ್ ದರ್ಗಾ ಕ್ಕೆ ಬಂದ ಮಹಿಳೆಯೊಬ್ಬರು ಎಲ್ಲಾ ಬಸ್ ಗಳು ಭರ್ತಿಯಾಗಿ ಹೋಗುತ್ತಿರುವದನ್ನು ನೋಡಿ ಕಂಗಾಲಾಗಿದ್ದರು. ಈ ವೇಳೆ ನೂಕು ನುಗ್ಗಲಿನಲ್ಲಿ ನಾ ಬರಲು ಒಲ್ಲೆ ಎಂದು ಬಾಲಕ ಹಠ ಹಿಡಿದಿದ್ದಾನೆ.
ಈ ವೇಳೆ ಬಾಲಕನನ್ನು ಸಮಾಧಾನ ಮಾಡಲು ತಾಯಿ ಹರಸಾಹಸ ಪಟ್ಟಿದ್ದಾರೆ, ವೀಕೆಂಡ್ ಹಾಗೂ ಅಮವಾಸ್ಯೆ ಇರೋದರಿಂದ ಹೆಚ್ವಿನ ಸಂಖ್ಯೆಯಲ್ಲಿ ನಿನ್ನೆ ಮಹಿಳೆಯರು ಪ್ರಯಾಣ ಬೆಳೆಸಿದ್ದಾರೆ.