ಹೆಬ್ಬಾವಿನ ಸುಳಿಯಿಂದ ಮೇಕೆ ರಕ್ಷಿಸಿದ ಶೂರರು

ಅಂತರಾಷ್ಟ್ರೀಯ

ಹೆಬ್ಬಾವಿನ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಮೇಕೆಯೊಂದನ್ನು ಮೂವರು ಪುಟಾಣಿಗಳು ಸೇರಿಕೊಂಡು ರಕ್ಷಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಕ್ಕಳ ಧೈರ್ಯ ಸಾಹಸವನ್ನುಎಲ್ಲರೂ ಶ್ಲಾಘಿಸುತ್ತಿದ್ದಾರೆ.

ಹಾವುಗಳಲ್ಲಿ ಹೆಬ್ಬಾವುಗಳು ಅತ್ಯಂತ ಅಪಾಯಕಾರಿಗಳು. ಹಾವು ಎಂದ ತಕ್ಷಣ ಮಕ್ಕಳು ಬಿಡಿ ದೊಡ್ಡವರು ಕೂಡ ಹೆದರಿ ಓಡುವುದೇ ಹೆಚ್ಚು. ಆದರೆ ಇಲ್ಲೊಂದು ಕಡೆ ಹೆಬ್ಬಾವಿನ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಮೇಕೆಯೊಂದನ್ನು ಮೂವರು ಪುಟಾಣಿಗಳು ಸೇರಿಕೊಂಡು ರಕ್ಷಿಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೆಬ್ಬಾವುಗಳು(Python) ತಮ್ಮ ಬೇಟೆಯ (prey) ಬಗ್ಗೆ ತುಸು ಹೆಚ್ಚೆ ಮುತುವರ್ಜಿ ವಹಿಸುತ್ತವೆ. ತನ್ನ ಬೇಟೆಯನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವವರೆಗೂ ಅನೇಕ ಪ್ರಾಣಿಗಳಿಗೆ ತಾವು ಹಾವಿನ ರಕ್ಕಸ ಸುಳಿಯಲ್ಲಿ ಸಿಲುಕಿದ್ದೇವೆ ಎಂಬುದು ತಿಳಿಯುವುದಿಲ್ಲ. ಅಲ್ಲದೇ ತಿಳಿಯುವ ವೇಳೆಗೆ ಏನು ಮಾಡಲಾಗದ ಸ್ಥಿತಿ ತಲುಪಿರುತ್ತವೆ.

ಹಾಗೆಯೇ ಇಲ್ಲೊಂದು ಕಡೆ ಮೇಕೆಯೊಂದು (Goat) ಹಾವಿನ ಹಿಡಿತಕ್ಕೆ ಸಿಲುಕಿ, ಒದ್ದಾಡುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆ ಆಗಿದೆ. ಹೊಲದಲ್ಲಿ ಮೇಯಲು ಬಿಟ್ಟಿದ್ದ ಮೇಕೆಯ ಮೇಲೆ ಹೆಬ್ಬಾವು ದಾಳಿ ನಡೆಸಿ ಸಂಪೂರ್ಣವಾಗಿ ಅದನ್ನು ತನ್ನ ಹಿಡಿತದಲ್ಲಿ ಇರಿಸಿಕೊಂಡಿದೆ. ಇತ್ತ ಮೇಕೆ ಹಾವಿನ ಹಿಡಿತದಿಂದ ಬಿಡಿಸಿಕೊಳ್ಳಲಾಗದೇ ಹೆಣಗಾಡುತ್ತಿದ್ದು, ಹಾವು ಹಿಡಿತ ಬಿಗಿಗೊಳಿಸುತ್ತಿದ್ದಂತೆ ನರಳಾಡುತ್ತಾ ಜೋರಾಗಿ ಬೊಬ್ಬೆ ಹೊಡೆಯಲು ಶುರು ಮಾಡಿದೆ. ಕೂಡಲೇ ಕೈಯಲ್ಲಿ ಕೋಲು ದೊಣ್ಣೆಗಳನ್ನು ಹಿಡಿದುಕೊಂಡು ಬಂದು ನಿಧಾನವಾಗಿ ಹಾವಿನ ಹಿಡಿತದಿಂದ ಮೇಕೆಯನ್ನು ಬಿಡಿಸಲು ಯತ್ನಿಸಿದ್ದಾರೆ. ಸ್ವಲ್ಪ ಬಿಡಿಸಿದಷ್ಟು ಮತ್ತೆ ಮತ್ತೆ ಹಿಡಿತ ಬಿಗಿಗೊಳಿಸುತ್ತಿದ್ದ ಹಾವಿನ (snake) ಹಿಡಿತದಿಂದ ಮೇಕೆಯನ್ನು ಬಹಳ ಹರ ಸಾಹಸಪಟ್ಟು ಮಕ್ಕಳು ರಕ್ಷಣೆ ಮಾಡಿದ್ದಾರೆ.

ಈ ವಿಡಿಯೋ ಈಗ ಸಾಕಷ್ಟು ವೈರಲ್ (Viral video) ಆಗಿದ್ದು, ಅನೇಕರು ಪುಟ್ಟ ಬಾಲಕರ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬ ಬಾಲಕ ಹಾವಿನ ಬಾಲವನ್ನು ಕೈಯಲ್ಲಿ ಹಿಡಿದು ಎಳೆದರೆ ಮತ್ತೊರ್ವ ತಲೆಯನ್ನು ಹಿಡಿದುಕೊಂಡಿದ್ದಾನೆ ಮತ್ತೊಬ್ಬ ಹಾವಿನ ಮಧ್ಯಭಾಗದಲ್ಲಿ ಹಿಡಿದು ಎಳೆದಿದ್ದು ಈ ವೇಳೆ ನಿಧನಕ್ಕೆ ಎದ್ದ ಮೇಕೆ ಬದುಕಿದೆನೋ ಬಡ ಜೀವ ಅಂತ ಸ್ಥಳದಿಂದ ಹೊರಟು ಹೋಗಿದೆ. ಹಾವಿನಿಂದ ಮೇಕೆಯನ್ನು ರಕ್ಷಿಸುವ ಬದಲು ವಿಡಿಯೋ ಮಾಡುತ್ತಿದ್ದ ನಿಂತಿದ್ದವ ಯಾರು ಎಂದು ನೋಡುಗರೊಬ್ಬರು ಪ್ರಶ್ನಿಸಿದ್ದಾರೆ.