ಬೆಂಗಳೂರು ;- ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಕಾಗೆ ಹಾರಿಸುವ ಬಜೆಟ್ ಆಗಿದೆ ಎಂದು ಸಚಿವ ಸುನೀಲ್ ಕುಮಾರ್ ಟೀಕಿಸಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದು ಕಾಗೆ ಹಾರಿಸುವ ಬಜೆಟ್ ಆಗಿದೆ. ಕಾಂಗ್ರೆಸ್ ಕಚೇರಿಯಲ್ಲಿ ಹೇಳುವ ಭಾಷಣವನ್ನು ಬಜೆಟ್ನಲ್ಲಿ ಹೇಳಿದ್ದಾರೆ. ಕನಸು ಇಲ್ಲ ದಾರಿಯೂ ಇಲ್ಲ ಎಂಬ ಬಜೆಟ್ ಇದಾಗಿದೆ. ಎನ್ಇಪಿಯನ್ನು ಕೈ ಬಿಡುತ್ತೇವೆ ಎಂದಿದ್ದಾರೆ. ಇಡೀ ಶಿಕ್ಷಣ ವ್ಯವಸ್ಥೆಯನ್ನು ಅಲುಗಾಡಿಸುವ ಕೆಲಸ ಮಾಡುತ್ತಿದ್ದಾರೆ. ಯಾವ ಭಾಗಕ್ಕೂ ನ್ಯಾಯ ಒದಗಿಸದ ವಿಚಿತ್ರ ಬಜೆಟ್ ಇದಾಗಿದೆ. ಬಜೆಟ್ ಮೇಲಿನ ಚರ್ಚೆ ವೇಳೆ ಇದೆಲ್ಲವನ್ನೂ ಪ್ರಸ್ತಾಪಿಸುತ್ತೇವೆ. ಹಿಂದಿನ ಸರ್ಕಾರದ ಯೋಜನೆಗಳಿಗೆ ಮರು ನೇಮಕ ಮಾಡುವ ಕೆಲಸ ಆಗಿದೆ. ಕಾಂಗ್ರೆಸ್ ಯಾವತ್ತೂ ಅಲ್ಪಸಂಖ್ಯಾತರಿಗೆ ಒತ್ತು ನೀಡುವ ಕೆಲಸ ಮಾಡುತ್ತಾರೆ ಎಂದು ಕಿಡಿಕಾರಿದರು.
128 ಪುಟದ ಈ ಬಜೆಟ್ನ್ನು ಒಂದು ಲೈನ್ ನಲ್ಲಿ ಹೇಳುವುದಾದರೆ. ಕೇಂದ್ರ ಸರ್ಕಾರವು ಏನೂ ಕೊಡಲಿಲ್ಲ. ರಾಜ್ಯ ಸರ್ಕಾರ ಏನೂ ಮಾಡಿಲ್ಲ. ಮುಂದೆ ನಾನೂ ಏನೂ ಮಾಡಲು ಆಗುವುದಿಲ್ಲ ಎಂಬಂತಿದೆ. ಬಜೆಟ್ ಎಂದರೆ ಆರ್ಥಿಕ ಮುನ್ನೋಟ ಆಗಿದೆ. ಇದರಲ್ಲಿ ರಾಜಕೀಯದ ಹಿನ್ನೋಟ ಇದೆ ಎಂದು ಟೀಕಿಸಿದರು.