ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಇರುವ ಕಾರ್ ಕ್ರೇಜ್ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ. ನಟ ದರ್ಶನ್ ಬಳಿ ಲ್ಯಾಂಬೋರ್ಘಿನಿ, ಜಾಗ್ವಾರ್, ಫೋರ್ಡ್ ಮಸ್ಟಾಂಗ್, ಪೋರ್ಷೆ ಮುಂತಾದ ಐಷಾರಾಮಿ ಕಾರುಗಳಿವೆ. ದರ್ಶನ್ ಪತ್ನಿ ವಿಜಯಲಕ್ಷ್ಮೀ ಕೂಡ ಆಡಿ ಹಾಗೂ ಬಿಎಂಡಬ್ಲ್ಯೂ ಕಾರುಗಳಿಗೆ ಒಡತಿ. ಇದೀಗ ವಿಜಯಲಕ್ಷ್ಮೀ ಹೊಸ ಕಾರು ಖರೀದಿಸಿದ್ದಾರೆ. ಐಷಾರಾಮಿ ಕಾರಿಗೆ ವಿಜಯಲಕ್ಷ್ಮೀ ಮಾಲೀಕರಾಗಿದ್ದಾರೆ.
ಹೌದು.. ವಿಜಯಲಕ್ಷ್ಮೀ ಈಗ ಹೊಸ ಕಾರು ಕೊಂಡುಕೊಂಡಿದ್ದಾರೆ. ಹೊಸ ರೇಂಜ್ ರೋವರ್ ಇವೊಕ್ ಕಾರನ್ನ ಖರೀದಿ ಮಾಡಿದ್ದಾರೆ. ಹೊಸ ಕಾರಿಗೆ ಓನರ್ ಆಗಿರುವ ವಿಜಯಲಕ್ಷ್ಮೀ ಅವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಜಯಲಕ್ಷ್ಮೀ ಅವರಿಗೆ ಅಭಿಮಾನಿಗಳು ಕಂಗ್ರ್ಯಾಟ್ಸ್ ಎನ್ನುತ್ತಿದ್ದಾರೆ. ಈ ಹೊಚ್ಚ ಹೊಸ ರೇಂಜ್ ರೋವರ್ ಇವೊಕ್ ಬೆಲೆಯ ಬಗ್ಗೆ ಎಂಜಿನ್ ಮಾಹಿತಿ ಇಲ್ಲಿದೆ.
ವಿನ್ಯಾಸ: JLR ನ ಟೆರೈನ್ ರೆಸ್ಪಾನ್ಸ್ ಸಿಸ್ಟಂನೊಂದಿಗೆ ಆಲ್ – ವೀಲ್ ಡ್ರೈವ್ ಸ್ಟ್ಯಾಂಡರ್ಡ್ ಆಗಿದೆ. ಬಾಹ್ಯ ನವೀಕರಣಗಳು ತೀರಾ ಕಡಿಮೆಯಿದ್ದು – ದೊಡ್ಡ ರೇಂಜ್ ರೋವರ್ಗಳಂತೆಯೇ ವಿವರವಾಗಿ ಮರುವಿನ್ಯಾಸಗೊಳಿಸಲಾದ ಗ್ರಿಲ್, ಮರುವಿನ್ಯಾಸಗೊಳಿಸಲಾದ LED ರನ್ನಿಂಗ್ ಲ್ಯಾಂಪ್ ಸಿಗ್ನೇಚರ್ಗಳೊಂದಿಗೆ ಹೊಸ ಸೂಪರ್ – ಸ್ಲಿಮ್ LED ಹೆಡ್ಲ್ಯಾಂಪ್ಗಳು, ಹೊಸ ರೆಡ್ ಬ್ರೇಕ್ ಕ್ಯಾಲಿಪರ್ಗಳು ಮತ್ತು ಅಲಾಯ್ ವೀಲ್ಗಳಿಗೆ ಹೊಸ ಟ್ವಿನ್ 10 ಸ್ಪೋಕ್ ವಿನ್ಯಾಸವಿದೆ.
ಇಂಟೀರಿಯರ್: ರೇಂಜ್ ರೋವರ್ ಇವೊಕ್ ಇಂಟೀರಿಯರ್ನಲ್ಲಿ ವಿಂಡ್ಸರ್ ಲೆದರ್ ಸೀಟುಗಳು, ಮರುವಿನ್ಯಾಸಗೊಳಿಸಲಾದ ಸೆಂಟರ್ ಕನ್ಸೋಲ್, ಹೀಟೆಡ್ ಮತ್ತು ಕೂಲ್ಡ್ ಫ್ರಂಟ್ ಸೀಟ್ಗಳು, ಕಸ್ಟಮೈಸ್ ಕ್ಯಾಬಿನ್ ಲೈಟಿಂಗ್ ಮತ್ತು ವಿಸ್ತರಿತ ಆಂತರಿಕ ಸ್ಥಳವನ್ನು ಹೊಂದಿದೆ. ಐದು ಸೀಟುಗಳ ಎಸ್ಯುವಿಯು ಹೊಸ ಫ್ಲೋಟಿಂಗ್ 11.4 – ಇಂಚಿನ ಕರ್ವ್ಡ್ ಗ್ಲಾಸ್ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಡಿಸ್ಪ್ಲೇಯನ್ನು ಇತ್ತೀಚಿನ ಪಿವಿ ಪ್ರೊ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಲಾಗಿದೆ.
ಇನ್ನು ಡ್ಯುಯಲ್ – ಝೋನ್ ಕ್ಲೈಮೇಟ್ ಕಂಟ್ರೋಲ್, ಪನಾರಮಿಕ್ ಸನ್ರೂಫ್, 360 – ಡಿಗ್ರಿ ಸರೌಂಡ್ ವ್ಯೂ ಕ್ಯಾಮೆರಾ, ವೈರ್ಲೆಸ್ Apple CarPlay ಮತ್ತು Android Auto, OTA ಸಾಫ್ಟ್ವೇರ್ ಅಪ್ಡೇಟ್ಗಳು ಮತ್ತು ಹೊಸ PM2.5 ಏರ್ ಪ್ಯೂರಿಫಿಕೇಶನ್ ಸಿಸ್ಟಮ್, ಸುಧಾರಿತ ಸುರಕ್ಷತೆಗಾಗಿ ಕ್ಲಿಯರ್ಸೈಟ್ ಗ್ರೌಂಡ್ ವ್ಯೂ ತಂತ್ರಜ್ಞಾನವನ್ನು ಸಹ ಅನ್ನು ಹೊಂದಿದೆ.
ಎಂಜಿನ್: ಈ ರೇಂಜ್ ರೋವರ್ ಇವೊಕ್ ಎಸ್ಯುವಿಯ ಬಗ್ಗೆ ಹೇಳುವುದಾದರೆ. ಈ ಐಷಾರಾಮಿ ಎಸ್ಯುವಿ ಲೋಡ್ ಡೈನಾಮಿಕ್ SE ಟ್ರಿಮ್ನಲ್ಲಿ ಮಾತ್ರ ಬರುತ್ತಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳನ್ನು ಒಳಗೊಂಡಿದೆ. 2.0-ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಘಟಕವು 247hp ಪವರ್ ಮತ್ತು 365Nm ಟಾರ್ಕ್ ಅನ್ನು ಉತ್ಪಾದಿಸುಸುವ ಸಾಮರ್ಥ್ಯವನ್ನು ಹೊಂದಿದೆ.
ಇನ್ನೊಂದು ಆಯ್ಕೆಯಲ್ಲಿ 2.0 – ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ 201hp ಪವರ್ ಮತ್ತು 430Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎರಡೂ ಎಂಜಿನ್ಗಳು 48V ಮೈಲ್ಡ್ – ಹೈಬ್ರಿಡ್ ವ್ಯವಸ್ಥೆಯನ್ನು ಬೆಲ್ಟ್ ಇಂಟಿಗ್ರೇಟೆಡ್ ಸ್ಟಾರ್ಟರ್ ಜನರೇಟರ್ನೊಂದಿಗೆ ಪಡೆಯುತ್ತವೆ. ಇದನ್ನು 9 – ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ಗೆ ಜೋಡಿಸಲಾಗಿದೆ. ಈ ಎಸ್ಯುವಿಯ ಆರಂಭಿಕ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.67 ಲಕ್ಷವಾಗಿದೆ.