ಐಸ್ಕ್ರೀಂನಲ್ಲಿ ಮಾನವನ ಬೆರಳು ಪತ್ತೆ ಪ್ರಕರಣ, ಕಂಪನಿಯ ಪರವಾನಗಿ ರದ್ದು ಮಾಡಲಾಗಿದೆ. ಈ ಸಂಬಂಧ ಎಫ್ಎಸ್ಎಸ್ಎಐ ಆದೇಶ ಹೊರಡಿಸಿದೆ
ಪುಣೆಯ ಮಲಾಡ್ ವೆಸ್ಟ್ನಲ್ಲಿ 26 ವರ್ಷದ ವೈದ್ಯರೊಬ್ಬರು ಆನ್ಲೈನ್ನಲ್ಲಿ ಐಸ್ಕ್ರೀಂ ಕೋನ್ ಆರ್ಡರ್ ಮಾಡಿದ್ದರು, ಅದರ ಒಂದು ಕೋನ್ನಲ್ಲಿ ಮಾನವನ ಬೆರಳು ಪತ್ತೆಯಾಗಿತ್ತು.
ಎಫ್ಎಸ್ಎಸ್ಎಐ ಕಚೇರಿಯ ತಂಡವು ಕಂಪನಿಯ ಆವರಣವನ್ನು ಪರಿಶೀಲಿಸಿದೆ ಮತ್ತು ಪರವಾನಗಿ ರದ್ದುಗೊಳಿಸಿದೆ. ಆದರೆ, ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಇನ್ನಷ್ಟೇ ಬರಬೇಕಿದೆ. ಐಸ್ಕ್ರೀಂನಲ್ಲಿ ಮನುಷ್ಯನ ಬೆರಳು ಪತ್ತೆಯಾಗಿರುವ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ. ಮಲಾಡ್ ನಿವಾಸಿ ಡಾ.ಒರ್ಲಾಮ್ ಬ್ರಾಂಡನ್ ಸೆರಾವೊ ಅವರು ಆನ್ಲೈನ್ನಲ್ಲಿ ಐಸ್ ಕ್ರೀಮ್ ಆರ್ಡರ್ ಮಾಡಿದ್ದರು. ಅವರು ಬಹಳ ಆಸಕ್ತಿಯಿಂದ ಐಸ್ಕ್ರೀಂ ತೆಗೆದು ನೋಡಿ ದಿಗ್ಭ್ರಮೆಗೊಂಡಿದ್ದಾರೆ. ಆ ಐಸ್ಕ್ರೀಂನಲ್ಲಿ ಮಾನವನ ಬೆರಳು ಪತ್ತೆಯಾಗಿದ್ದು, ಈ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
ಮೊದಲು ವಾಲ್ನಟ್ ಎಂದುಕೊಂಡೆವು ಬಳಿಕ ಕೂಲಂಕುಷವಾಗಿ ಪರಿಶೀಲನೆ ನಡೆಸಿದಾಗ ಇದು ಬೆರಳು ಎಂಬುದು ಅರಿವಾಗಿದೆ ಎಂದಿದ್ದಾರೆ. ನಾನು ಮೂರು ಐಸ್ಕ್ರೀಂಗಳನ್ನು ಆರ್ಡರ್ ಮಾಡಿದ್ದೆ, ನಾನು ಬಟರ್ಸ್ಕಾಚ್ ಐಸ್ಕ್ರೀಂ ತಿನ್ನುತ್ತಿದ್ದೆ ಆಗ ಇದ್ದಕ್ಕಿದ್ದಂತೆ ಹಲ್ಲಿಗೇನೋ
ತಾಗಿದಂತಾಯಿತು ನಾನು ವಾಲ್ನಟ್ ಅಥವಾ ಚಾಕೊಲೇಟ್ ಇರಬೇಕು ಎಂದುಕೊಂಡೆ, ಬಳಿಕ ಉಗುಳಿದಾಗ ಅದು ವಾಲ್ನಟ್ ಆಗಿರಲಿಲ್ಲ, ಮನುಷ್ಯನ ಬೆರಳಾಗಿದ್ದು, ಅದನ್ನು ನೋಡಿ ಒಮ್ಮೆ ದಿಗ್ಭ್ರಮೆಗೊಂಡೆ
ನಾನು ವೈದ್ಯನಾಗಿರುವ ಕಾರಣ ಇದು ಹೆಬ್ಬರಳಿನ ಭಾಗ ಎಂಬುದು ನಾನು ಅರ್ಥಮಾಡಿಕೊಂಡೆ ಅದರಲ್ಲಿ ಉಗುರು ಕೂಡ ಇದೆ ಎಂದರು. ನಾನು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದೆ ಎಂದು ವೈದ್ಯ ಹೇಳಿದ್ದಾರೆ.