ಬೆಂಗಳೂರು : ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಅಭಿವೃದ್ದಿ ಸಾಧನೆಗಳ ಮತ್ತು ಮೋದಿ ಮತ್ತೊಮ್ಮೆ ಎಂಬ ಗೋಡೆ ಬರಹ ಬರೆಯುವ ಮೂಲಕ ರಾಜ್ಯ ಬಿಜೆಪಿ ಯುವ ಮುಖಂಡರಾದ ಡಾ||ಅರುಣ್ ಸೋಮಣ್ಣರವರು ಚಾಲನೆ ನೀಡಿದರು. ಈ ಒಂದು ಚಾಲನೆ ಯಲ್ಲಿ ಗೋವಿಂದರಾಜನಗರ ಮಂಡಲ ಬಿಜೆಪಿ ಅಧ್ಯಕ್ಷರಾದ ವಿಶ್ವನಾಥಗೌಡ, ಬಿಬಿಎಂಪಿ ಮಾಜಿ ಸದಸ್ಯರುಗಳಾದ ಮೋಹನ್ ಕುಮಾರ್, ದಾಸೇಗೌಡರವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಡಾ||ಅರುಣ್ ಸೋಮಣ್ಣರವರು ಮಾತನಾಡಿ ಮಾಜಿ ಸಚಿವರಾದ ವಿ.ಸೋಮಣ್ಣರವರ ನೇತೃತ್ವದಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಅಭಿವೃದ್ದಿ ಸಾಧನೆಗಳು ಮತ್ತು ಮೋದಿ ಮತ್ತೊಮ್ಮೆ ಎಂಬ ಗೋಡೆ ಬರಹಕ್ಕೆ ಚಾಲನೆ ನೀಡಲಾಗಿದೆ.
ಕಳೆದ 10ವರ್ಷಗಳಲ್ಲಿ ಕೇಂದ್ರದಲ್ಲಿ ಪ್ರಧಾನಿ ನರೇಂದ್ರಮೋದಿರವರ ನೇತೃತ್ವದಲ್ಲಿ ಪಾರದರ್ಶಕ ಆಡಳಿತ ನೀಡಿದೆ.ದೇಶದ ಐಕ್ಯತೆ ಮತ್ತು ಸಮಗ್ರತೆ ಅಭಿವೃದ್ದಿಗೆ ನರೇಂದ್ರಮೋದಿ ಸಂಕೇತವಾಗಿದ್ದಾರೆ.
ಕೇಂದ್ರ ಸರ್ಕಾರ ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದವರು ಸಮಾಜದ ಮುಖ್ಯವಾಹಿನಿ ಬರಬೇಕು ಎಂದು ಹಲವು ಮಹತ್ವಪೂರ್ಣ ಯೋಜನೆಗಳು ದೇಶದ ಜನರಿಗೆ ಕೊಡುಗೆಯಾಗಿ ನೀಡಿದ್ದಾರೆ.
ಮುದ್ರ ಯೋಜನೆ 40ಕೋಟಿ ಜನರು ಇದರ ಫಲಾನುಭವಿಗಳು ಇದ್ದಾರೆ, ಉಜ್ವಲ ಯೋಜನೆ, ವಿಶ್ವಕರ್ಮ ಯೋಜನೆ ಪ್ರತಿ ಕುಟುಂಬಗಳಿಗೆ ಕೇಂದ್ರ ಸರ್ಕಾರದ ಯೋಜನೆಗಳನ್ನು ತಲುಪಿಸಲಾಗಿದೆ. ಅಯೋಧ್ಯೆ ಭವ್ಯ ಶ್ರೀರಾಮಮಂದಿರ ಪ್ರಧಾನಿ ನರೇೇಂದ್ರ ಮೋದಿರವರ ಸಾರಥ್ಯದಲ್ಲಿ ಲೋಕರ್ಪಣೆಯಾಗಿದೆ,
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ಅಭಿವೃದ್ದಿ ಯೋಜನೆಗಳು ಮತ್ತು ಮಾಜಿ ಸಚಿವರಾದ ವಿ.ಸೋಮಣ್ಣರವರ ಅಭಿವೃದ್ದಿ ಕಾರ್ಯಗಳನ್ನು ಮನೆ, ಮನೆಗಳಿಗೆ ತಲುಪಿಸಲಾಗುತ್ತಿದೆ. ಮುಂದಿನ ಲೋಕಸಭಾ ಚುನವಾಣೆಯಲ್ಲಿ ಬಿಜೆಪಿ ಪಕ್ಷ 400ಕ್ಕೂ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಮತ್ತೊಮ್ಮೆ ಪ್ರಧಾನಿಯಾಗಿ ನರೇಂದ್ರಮೋದಿರವರು ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ ಎಂದು ಹೇಳಿದರು.
ಇನ್ನು ಕಾರ್ಯಕ್ರಮದಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರುಗಳು, ಕಾರ್ಯಕರ್ತರುಗಳು ಪಾಲ್ಗೊಂಡಿದ್ದರು