ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಿದ್ದ ಪ್ರಜಾಸತ್ತಾತ್ಮಕ ನೌಕರರ ವೇದಿಕೆಯಿಂದ ಮುಖ್ಯಮಂತ್ರಿ ಭೇಟಿ: ನೌಕರರ ಸಮಸ್ಯೆಗಳ ಕುರಿತು ಚರ್ಚೆ
ಬೆಂಗಳೂರು, ಜ, 3; ಇತ್ತೀಚೆಗೆ ನಡೆದ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಿದ್ದ ಪ್ರಜಾಸತ್ತಾತ್ಮಕ ನೌಕರರ ವೇದಿಕೆಯ ತಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು.
ಖಜಾಂಚಿ ಹುದ್ದೆಗೆ ಸ್ಪರ್ಧಿಸಿದ್ದ ವಿ.ವಿ. ಶಿವರುದ್ರಯ್ಯ ನೇತೃತ್ವದ ತಂಡ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಹೊಸ ವರ್ಷದ ಹಿನ್ನೆಲೆಯಲ್ಲಿ ಶುಭಾಶಯ ಕೋರಿತು.
ಇದೇ ಸಂದರ್ಭದಲ್ಲಿ ನೌಕರರ ಹಲವಾರು ಸಮಸ್ಯೆಗಳ ಬಗ್ಗೆ ಚರ್ಚಿಸಿತು.
ನೌಕರರ ಬೇಡಿಕೆಗಳನ್ನು ಈಡೇರಿಸಲು ಒತ್ತು ನೀಡುವಂತೆ ಮನವಿ ಮಾಡಿತು.
ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿ.ವಿ. ಶಿವರುದ್ರಯ್ಯ, ನೌಕರರ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಮುಕ್ತವಾಗಿ ಚರ್ಚಿಸಿದ್ದೇವೆ.
ನಮ್ಮ ಸಂಘಟನೆ ನೌಕರರ ಹಿತ ಬಯಸುತ್ತಿದ್ದು, ನಮ್ಮ ಬದ್ಧತೆಯ ಕಾರಣಕ್ಕಾಗಿ ನೌಕರರ ಪ್ರೀತಿ, ಬಾಂಧವ್ಯ, ವಿಶ್ವಾಸ ವೃದ್ಧಿಸುತ್ತಿದೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಸರ್ಕಾರಿ ನೌಕರರು ಏಕ ಪಕ್ಷಿಯವಾಗಿ ಯಾರನ್ನು ಚುನಾಯಿಸಿಲ್ಲ. ಎರಡು ತಂಡಕ್ಕೂ ಸಮಾನವಾಗಿ ಗೆಲುವನ್ನು ಕೊಟ್ಟಿದ್ದಾರೆ.
ಹೀಗಾಗಿ ಪ್ರಜಾಸತ್ತಾತ್ಮಕ ತಂಡ ನೌಕರರ ಪರವಾಗಿ ಕೆಲಸ ಮಾಡಲು ಅಮಿತೋತ್ಸಾಹದಿಂದ ಕಾರ್ಯನಿರ್ವಹಿಸುತ್ತಿದೆ ಎಂದರು.