ಗದಗ : ಕಳೆದ 7 ವರ್ಷದಿಂದ ಮದುವೆಯಾಗೋದಕ್ಕೆ ಹುಡುಗಿ ಸಿಗದೇ ಬೇಸರಗೊಂಡು ಯುವಕನೊಬ್ಬ ಗ್ರಾಮ ಪಂಚಾಯತಿ ಪಿಡಿಒಗೆ ಮೊರೆ ಹೋದ ಘಟನೆಯೊಂದು ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ನಡೆಸಿದೆ. ನೀರಿನ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಚರಂಡಿ ಸಮಸ್ಯೆ, ಮೂಲಭೂತ ಸೌಕರ್ಯ ಕೊಡಿ ʻಎಂದು ಹೆಚ್ಚಿನ ಜನರು ಮನವಿ ಮಾಡೋದನ್ನು ನೀವು ಕೇಳಿರಬಹುದು.
ಅದ್ರೆ ಇಲೊಬ್ಬ ಸಿದ್ದರಾಮಯ್ಯ ಸರ್ಕಾರ ಸಂದರ್ಭದಲ್ಲೇ ” ಕನ್ಯೆಯನ್ನು ಹುಡುಕಿಕೊಡಿ ʼ ಎಂದು ಗ್ರಾಮ ಪಂಚಾಯತ್ ಪಿಡಿಒಗೆ ಮುತ್ತು ಹೂಗಾರ (28) ಎಂಬಾತ ಮನವಿ ಮಾಡಿದ್ದಾನೆ. ಈತ ಮುತ್ತು ಹೂಗಾರ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 50 ಸಾವಿರ ರೂಪಾಯಿ ಆದಾಯ ಗಳಿಸುತ್ತಿದ್ದಾನೆ ಆದರೂ ಹುಡುಗಿ ಸಿಗದೇ ಜೀವನದಲ್ಲಿ ಜಿಗುಪ್ಸೆಗೊಂಡಿದ್ದೇನೆ ಎಂದು ಪತ್ರದಲ್ಲಿ ಬರೆದಿದ್ದಾರೆ.