ಬೆಂಗಳೂರು: ಲಿವಿಂಗ್ ಟುಗೆದರ್ನಲ್ಲಿದ್ದ (Living together) ಜೋಡಿ ಮಾಲೀಕರ ಮನೆಯನ್ನೇ ದೋಚಿರುವ ಘಟನೆ ನಗರದ ಸುಬ್ರಮಣ್ಯಪುರ ಪೊಲೀಸ್ (Police) ಠಾಣಾ ವ್ಯಾಪ್ತಿಯ ಎಜಿಎಸ್ ಲೇಔಟ್ನಲ್ಲಿ ನಡೆದಿದೆ. ಸದ್ಯ ಖತರ್ನಾಕ್ ಜೋಡಿಯನ್ನು (Couple) ಸುಬ್ರಮಣ್ಯವಪುರ ಪೊಲೀಸರು ಬಂಧಿಸಿದ್ದಾರೆ. ಲಿಖಿತ ಹಾಗೂ ಸುಮಂತಾ ಬಂಧಿತ ಆರೋಪಿಗಳು.
ನಗರದ ಸುಬ್ರಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಎಜಿಎಸ್ ಲೇಔಟ್ನ ಪ್ರೇಮಲತ ಎಂಬುವವರ ಮನೆಯಲ್ಲಿ ಲಿಖಿತ ಹಾಗೂ ಸುಮಂತ್ ಬಾಡಿಗೆಗೆ ಇದ್ದರು. ಜೋಡಿ ಕಳ್ಳತನ ಮಾಡಲು ನಾಲ್ಕು ತಿಂಗಳು ಮನೆ ಬಾಡಿಗೆಗೆ ಪಡೆದಿತ್ತು. ಈ ಇಬ್ಬರು ನಾಲ್ಕು ತಿಂಗಳು ಮನೆ ಮಾಲೀಕರ ಚಲನ-ವಲನ ಗಮನಿಸಿದ್ದರು.
ಜೋಡಿ ಇತ್ತೀಚೆಗೆ ಮನೆ ಖಾಲಿ ಮಾಡಿದೆ. ಮನೆ ಖಾಲಿ ಮಾಡಿದ ಕೆಲವೇ ದಿನಗಳಲ್ಲಿ ಮಾಲೀಕರ ಮನೆಯಲ್ಲಿ ಕಳ್ಳತನ ಮಾಡಿದೆ. ಆರೋಪಿಗಳು ಮನೆಯಲ್ಲಿದ್ದ 4 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದಿದ್ದಾರೆ. ಆರೋಪಿಗಳ ಕಳ್ಳತನ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿತ್ತು.
ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು, ಇಬ್ಬರಿಗಾಗಿ ಬಲೆ ಬೀಸಿದ್ದರು. ಆರೋಪಿಗಳು ಕದ್ದ ಚಿನ್ನದ ಒಡವೆಗಳನ್ನು ಮಾರಿ ಶಿವಮೊಗ್ಗದಲ್ಲಿ ಸೆಟಲ್ ಆಗಿದ್ದಾರೆ. ಎಂಬ ಮಾಹಿತಿ ತಿಳಿದ ಕೂಡಲೆ ಸುಬ್ರಮಣ್ಯಪುರ ಠಾಣಾ ಪೊಲೀಸರು ಖದೀಮರನ್ನು ಬಂಧಿಸಿ ಕರೆತಂದಿದ್ದಾರೆ.