ಮದುವೆ (Marriage) ಅಂದ್ರೆ ಅದಕ್ಕೆ ಎಲ್ಲಾ ರೀತಿಯಲ್ಲೂ ಧಾಂ ಧೂಂ ಅಂತ ಸಿದ್ಧತೆ ನಡೆಯುತ್ತೆ. ಭರ್ಜರಿ ಡೆಕೊರೇಶನ್, ಡ್ರೆಸ್, ಡಿನ್ನರ್ಗೆ ಸಿದ್ಧತೆ ಮಾಡಲಾಗುತ್ತೆ. ಹಾಗೆಯೇ ಮದುವೆ ಅಂದ್ರೆ ಇನ್ವಿಟೇಷನ್ ಕಾರ್ಡ್ ಸೂಪರ್ ಆಗಿರ್ಬೇಕು ಅಂತ ಎಲ್ಲರೂ ಬಯಸ್ತಾರೆ. ಹೀಗಾಗಿ ಡಿಫರೆಂಟ್ ಆಗಿ ಮದ್ವೆ ಆಮಂತ್ರಣ ಪತ್ರಿಕೆಯನ್ನು (Invitation card) ಸಿದ್ಧಪಡಿಸುತ್ತಾರೆ. ಕಾಲ ಅದೆಷ್ಟು ಬದಲಾಗಿದ್ರೂ, ಟೆಕ್ನಾಲಜಿ ಸಾಕಷ್ಟು ಮುಂದುವರಿದಿದ್ರೂ ಜನರು ಇನ್ವಿಟೇಷನ್ ಕಾರ್ಡ್ ತಯಾರಿಸೋದನ್ನು ಬಿಡೋದಿಲ್ಲ. ವಾಟ್ಸಾಪ್, ಫೇಸ್ಬುಕ್ಗಳಲ್ಲಿ ಮದುವೆಗೆ ಆಮಂತ್ರಿಸಿದರೂ ಪುನಃ ಮದುವೆ ಕಾಗದವನ್ನು ಕೊಟ್ಟು ಮದ್ವೆಗೆ ಬರಲೇಬೇಕು ಅನ್ನೋದನ್ನು ಮರೆಯೋದಿಲ್ಲ. ಆದ್ರೆ ಇಲ್ಲೊಬ್ಬ ವ್ಯಕ್ತಿ ಬಾಯಲ್ಲೇನೂ ಮದ್ವೆಗೆ ಬರ್ಲೇಬೇಕು ಅಂತ ಕರೆದಿದ್ದಾನೆ. ಆದ್ರೆ ಮದುವೆ ಕಾರ್ಡ್ನಲ್ಲಿ ತಪ್ಪಾಗಿ ಇನ್ನೇನೋ ಪ್ರಿಂಟ್ ಆಗಿದೆ.
ಹೌದು, ಎಲ್ಲರೂ ಮದುವೆಗೆ ಬನ್ನಿ ಎಂದು ಮುದ್ರಿಸುವ ಬದಲು ವೆಡ್ಡಿಂಗ್ ಕಾರ್ಡ್ನಲ್ಲಿ ಮದ್ವೆಗೆ ಬರಲೇಬೇಡಿ ಎಂದು ಪ್ರಿಂಟ್ ಮಾಡಲಾಗಿದ್ದು, ಎಲ್ಲೆಡೆ ವೈರಲ್ ಆಗ್ತಿದೆ. ಮದುವೆ ಕಾಗದದಲ್ಲಿ ‘ಸ್ನೇಹಪೂರ್ವಕವಾಗಿ ನಮ್ಮ ಮದುವೆಗೆ ಬರಬೇಡಿ ಎಂದು ಹೇಳುತ್ತೇನೆ’ ಎಂದು ಮುದ್ರಿಸಲಾಗಿದೆ. ಮದುವೆ ಕಾರ್ಡ್ನ್ನು ಮುದ್ರಿಸುವ ಮುದ್ರಣಾಲಯದಿಂದ ತಪ್ಪಾಗಿದ್ದು ಈ ವೆಡ್ಡಿಂಗ್ ಕಾರ್ಡ್ ಸದ್ಯ ಎಲ್ಲೆಡೆ ವೈರಲ್ ಆಗ್ತಿದೆ. ಇದು ಹಲವರಲ್ಲಿ ತಪ್ಪು ಅಭಿಪ್ರಾಯಕ್ಕೆ ಕಾರಣವಾಯಿತು. ಹಲವರು ಮದುವೆಗೆ ಬರುವುದು ಬೇಡ ಎಂದದು ಹೇಳಿದ್ದಾರೆ ಎಂದೇ ತಪ್ಪಾಗಿ ಭಾವಿಸಿದರು.
ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಈ ವೆಡ್ಡಿಂಗ್ ಕಾರ್ಡ್ ಫುಲ್ ವೈರಲ್ ಆಗ್ತಿದೆ. ಇದಕ್ಕೆ ನೀಡಿರುವ ಶೀರ್ಷಿಕೆ ಇನ್ನೂ ನಗು ತರಿಸುವಂತಿದೆ. ‘ಮದುವೆ ಆಮಂತ್ರಣ ಪತ್ರಿಕೆಯೊಂದು ಬಂದಿದೆ. ಆದರೆ ಆಮಂತ್ರಣ ಪತ್ರಿಕೆಯಲ್ಲಿ ಬರೆದಿರೋದನ್ನು ನೋಡಿ ಮದುವೆಗೆ ಹೋಗಬೇಕೇ ಬೇಡವೇ ಎಂಬ ಬಗ್ಗೆ ಗೊಂದಲ ಮೂಡಿದೆ’ ಎಂದು ಬರೆದುಕೊಂಡಿದ್ದಾರೆ. ವೈರಲ್ ಆಗಿರೋ ಪೋಸ್ಟ್ಗೆ ನಾಲ್ಕು ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. 138ಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದಾರೆ.