ಬೆಂಗಳೂರು: ಜನಸಾಮಾನ್ಯರಿಗೆ ಮಾತ್ರವಲ್ಲ ಕೈಗಾರಿಕೆಗಳಿಗೂ ಕರೆಂಟ್ ಶಾಕ್ ವಿದ್ಯುತ್ ಬಿಲ್ ಗೆ ಬೆದರಿ ಬಳಲಿ ಬೆಂಡಾದ ಸಣ್ಣ ಕೈಗಾರಿಕೆಗಳು. ಕೈಗಾರಿಕೆ ಬೀಗ ಹಾಕಿ ಸರ್ಕಾರಕ್ಕೆ ನಡೆಸುವಂತೆ ಕೀ ಕೊಡಲು ಮುಂದಾದ ಪೀಣ್ಯ ಸಣ್ಣ ಕೈಗಾರಿಕೆಗಳು ಏಷ್ಯಾದಲ್ಲಿ ಸುಪ್ರಸಿದ್ದ ಬೆಂಗಳೂರಿನ ಪೀಣ್ಯ ಕೈಗಾರಿಕೆ ಮೆಕಾನಿಕಲ್, ಗಾರ್ಮೆಂಟ್ ಸಣ್ಣ ಕೈಗಾರಿಕೆಗೆ ಹೆಸರುವಾಸಿ
ಆದ್ರೆ ಕರೆಂಟ್ ಯೂನಿಟ್ ಬೆಲೆ ಹಾಗೂ ನಿಗದಿತ ಶುಲ್ಕ ಹೆಚ್ಚಳದಿಂದ ಕೈಗಾರಿಕೆ ನಡೆಸಲು ಹಿಂದೇಟು
ಪೀಣ್ಯ ಕೈಗಾರಿಕೆ ವಲಯದಲ್ಲಿವೆ 12 ಸಾವಿರ ಸಣ್ಣ ಕೈಗಾರಿಕೆಇದರಲ್ಲಿ ಬಿಡಿಭಾಗ ತಯಾರಿಸುವ 5 ಸಾವಿರ ಮೆಕಾನಿಕಲ್ ಸಣ್ಣ ಕೈಗಾರಿಕೆ ಇವೆಲ್ಲ ಕರೆಂಟ್ ಮೇಲೆ ಅವಲಂಬಿತ ಕೈಗಾರಿಕೆಗಳುಕಮರ್ಷಿಯಲ್ ಕರೆಂಟ್ ಬಿಲ್ ಶೇ.30ರಷ್ಟು ಹೆಚ್ಚಳ.
ಈ ಮೊದಲು ಪ್ರತಿ ಯೂನಿಟ್ ಗೆ 6.75 ರೂ ಇದೀಗ ಪ್ರತಿ ಯೂನಿಟ್ ಬೆಲೆ 8.50 ರೂ. ಹೆಚ್ಚಳ 0-1000 8.50 ರೂ. ಪ್ರತಿ ಯೂನಿಟ್ ನಿಗದಿತ ಶುಲ್ಕವೂ ಶೇ. 40-60ರಷ್ಟು ಹೆಚ್ಚಳ
ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ಕೊಡಿ ಅದು ಬಿಟ್ಟು ಈ ರೀತಿ ಕರೆಂಟ್ಶಾಕ್ ಕೊಡಬೇಡಿ 4 ಸಾವಿರಕ್ಕೂ ಹೆಚ್ಚು ಮೆಕಾನಿಕಲ್ ಸಣ್ಣ ಕೈಗಾರಿಕೆಗಳಿಗೆ ಸಂಕಷ್ಟ ಹೀಗೆ ಮುಂದುವರೆದ್ರೆ ಕೈಗಾರಿಕೆ ಬೀಗ ಹಾಕಿ ಅದರ ಕೀ ನಿಮಗೆ ಕೊಡ್ತೀವಿ, ನೀವೇ ನಡೆಸಿ ಎಂದು ಪೀಣ್ಯ ಕೈಗಾರಿಕೆ ಸಂಘದ ಅಧ್ಯಕ್ಷ ಮಂಜುನಾಥ್ ಸರ್ಕಾರಕ್ಕೆ ಎಚ್ಚರಿಕೆ