ಬೆಂಗಳೂರು: ಬಿಹಾರದಲ್ಲಿ ಜಾತಿಗಣತಿ ವರದಿ ಬಿಡುಗಡೆ ಆದ್ಮೇಮೆ ರಾಜ್ಯದಲ್ಲಿ ಯಾವಾಗ ಅನ್ನೋ ಮಾತುಗಳು ಜಾರಾಗ್ತಿದ್ವು. ಸಿಎಂ ಸಿದ್ದರಾಮಯ್ಯ 2015 ರಲ್ಲಿ ಮಾಡಿಸಿದ ಗಣತಿ ವರದಿ ದೂಳು ಹಿಡಿಯುತ್ತಿದೆ ಅನ್ನೋ ಮಧ್ಯೆಯೇ ಸಿಎಂ ಸಿದ್ದು ನವೆಂಬರ್- ಡಿಸೆಂಬರ್ ನಲ್ಲಿ ಗಣತಿ ವರದಿ ಬಿಡುಗಡೆ ಮಾಡ್ತೀವಿ ಅನ್ನೋ ಮುಹೂರ್ತ ಫಿಕ್ಸ್ ಮಾಡಿದ್ದಾರೆ. ಜಾತಿ ಅನ್ನೋ ಜೇನುಗೂಡಿಗೆ ಕೈ ಹಾಕಿರೋ ಸಿದ್ದು ಪ್ಲಾನ್ ಹಿಂದೆ ಹಲವು ರಾಜಕೀಯ ಅಜೆಂಡಾಗಳಿದ್ದು ಜೇನು ಹುಳಗಳ ಯಾರನ್ನ ಕಚ್ಚುತ್ವೆ ಅನ್ನೋ ಚರ್ಚೆ ಜೋರಾಗ್ತಿದೆ..
ಇದೇ ತಿಂಗಳ ಮೊದಲ ವಾರದಲ್ಲಿ ದೇಶದ ಮೊದಲ ರಾಜ್ಯ ಬಿಹಾರ ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಿ ದೇಶದಲ್ಲೇ ಇತಿಹಾಸ ಸೃಷ್ಟಿಸಿ ಜಾತಿ ಎಂಬ ಜೇನುಗೂಡಿಗೆ ಕೈ ಹಾಕಿ ಸಿಎಂ ನಿತೀಶ್ ಕುಮಾರ್ ತುಪ್ಪ ತಿಂದಿದ್ರು. ಇದಾದ್ಮೇಲೆ ನಮ್ಮ ರಾಜ್ಯದಲ್ಲೂ ಸಹ ಜಾತಿಗಣತಿ ವರದಿ ಜಾರಿಗೆ ಒತ್ತಡ ಕೇಳಿಬಂದಿತ್ತು. ಅಂದಹಾಗಿ ಈ ಹಿಂದೆ ಮೊದಲ ಬಾರಿಗೆ ಸಿಎಂ ಆಗಿದ್ದ ಸಿದ್ದರಾಮಯ್ಯ 2015 ರಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜ್ ಅವರ ನೇತೃತ್ವದಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕ ಗಣತಿ ವರದಿಯನ್ನು ತಯಾರು ಮಾಡಿಸಿದ್ರು, ಇದೇ ವೇಳೆ ಜಾತಿಗಳ ಬಗ್ಗೆ ಮಾಹಿತಿಯನ್ನು ಕಲೆಹಾಕಲಾಗಿತ್ತು ಇದೀಗ ಅದೇ ವರದಿಯನ್ನು ಅಪ್ಡೇಟ್ ಮಾಡಿ ಜಾತಿಗಣತಿ ವರದಿ ಬಿಡುಗಡೆ ಮಾಡಲು ಸಿಎಂ ಸಿದ್ದರಾಮಯ್ಯ ಸಿದ್ದತೆ ಮಾಡಿಕೊಂಡು ಮುಹೂರ್ತ ಫಿಕ್ಸ್ ಮಾಡಿದ್ದಾರೆ…
ಜಾತಿಗಣತಿ ವರದಿ ಬಿಡುಗಡೆ ಮಾತನಾಡಡಿದ ಸಿಎಂ ಸಿದ್ದರಾಮಯ್ಯ ತಾವು ಕಾಂತರಾಜ್ ಅವರ ನೇತೃತ್ವದಲ್ಲಿ ಸರ್ವೇ ಮಾಡಿಸಿದ್ದು ವರದಿ ಸಿದ್ದವಾಗಿದೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ
ಕಾಂತರಾಜ್ ರಿಪೋರ್ಟ್ ಕೊಡೋಕೆ ಹೋದಾಗ ಅವರು ತೆಗೆದುಕೊಂಡಿಲ್ಲ, ಯಡಿಯೂರಪ್ಪ, ಬೊಮ್ಮಾಯಿ ಬಂದ್ರು ತೆಗೆದುಕೊಂಡಿಲ್ಲ. ಈಗ ನವೆಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ವರದಿ ಕೊಡ್ತೀನಿ ಅಂದಿದ್ದಾರೆ, ಆಗ ನಾವು ಜಾತಿಗಣತಿ ವರದಿ ಸ್ವೀಕಾರ ಮಾಡಿಕೊಳ್ತೀವಿ. ವರದಿ ಬಂದಮೇಲೆ ಕ್ಯಾಬಿನೆಟ್ ಗೆ ಹೋಗುತ್ರೆ, ಅಲ್ಲಿ ಚರ್ಚೆ ಆದ್ಮೇಲೆ ರಿಲೀಸ್ ಮಾಡ್ತೀವಿ ಅಂತ ಸಿಎಂ ಗಣತಿ ವರದಿ ಘೋಷಣೆಯ ಮುಹೂರ್ತ ಫಿಕ್ಸ್ ಮಾಡಿದ್ದಾರೆ….
ಇನ್ನು ಕಾಂತರಾಜ್ ಅವರ ಸಮಿತಿ ತಯಾರು ಮಾಡಿರೋ ಜಾತಿಗಣತಿ ವರದಿ ರಾಜ್ಯದ ಜಾತಿ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡುವಂತಿದೆ. ಲೀಕ್ ಆಗಿರೋ ವರದಿಯ ಪ್ರಕಾರ ರಾಜ್ಯದ ಪ್ರಬಲ ಸಮುದಾಯಗಳು ಅಂತ ಕರೆಸಿಕೊಳ್ಳುವ ಲಿಂಗಾಯತ, ಒಕ್ಕಲಿಗ ಜಾತಿಗಳು 4-5 ನೇ ಸ್ಥಾನಕ್ಕೆ ತಳ್ಳಲ್ಪಟ್ಟಿವೆ….
…ಲೀಕ್ ಆಗಿರೋ ರಾಜ್ಯದಲ್ಲಿ ಜಾತಿಗಣತಿ ವರದಿ ನೋಡೋದಾದ್ರೆ..?
1- ದಲಿತ ಸಮುದಾಯ- 1.08ಕೋಟಿ
2- ಪರಿಶಿಷ್ಟ ಪಂಗಡಗಳು- 80 ಲಕ್ಷ
3- ಮುಸ್ಲಿಂ ಸಮುದಾಯ- 70 ಲಕ್ಷ
4- ವೀರಶೈವ- ಲಿಂಗಾಯತರು- 65 ಲಕ್ಷ
5- ಒಕ್ಕಲಿಗರು- 60 ಲಕ್ಷ
6- ಕುರುಬರು – 45 ಲಕ್ಷ
7- ಈಡಿಗ( ಒಬಿಸಿ) – 15ಲಕ್ಷ
8- ವಿಶ್ವಕರ್ಮ- 15 ಲಕ್ಷ
9- ಬೆಸ್ತರು- 15 ಲಕ್ಷ
10- ಬ್ರಾಹ್ಮಣರು- 10 ಲಕ್ಷ
11- ಯಾದವ ಸಮುದಾಯ-10 ಲಕ್ಷ
12- ಮಡಿವಾಳ ಸಮಾಜ- 6 ಲಕ್ಷ
13- ಅರೆ ಅಲೆಮಾರಿ – 6 ಲಕ್ಷ
14- ಕುಂಬಾರ – 5 ಲಕ್ಷ
15- ಸವಿತಾ ಸಮಾಜ – 5ಲಕ್ಷ
ಈ ಹಿಂದೆ ಲಿಂಗಾಯತ, ಒಕ್ಕಲಿಗ ಮೀಸಲಾತಿ ಹೋರಾಟ ಶುರುವಾದಾಗ ಅಂದಿನ ಬೊಮ್ಮಾಯಿ ಸರ್ಕಾರ ಅವರನ್ನ 2c, 2D ಗೆ ಸೇರಿಸಿ ಕೈತೊಳೆದುಕೊಂಡಿತ್ತು ಇದೇ ನಿರ್ಧಾರ ಬಿಜೆಪಿಗೆ ಚುನಾವಣೆಯಲ್ಲಿ ಮುಳುವಾಗಿತ್ತು. ಸದ್ಯ ಲೀಕ್ ಆಗಿರೋ ಕಾಂತರಾಜ್ ವರದಿ ಪ್ರಕಾರ SC-ST ಹಾಗೂ ಮುಸ್ಲಿಂ ಸಮುದಾಯ ಟಾಪ್ 3 ಅಲ್ಲಿದ್ದು ಪ್ರಬಲ ಸಮುದಾಯ ಅಂತ ಕರೆಸಿಕೊಳ್ಳೋ ಲಿಂಗಾಯತರು ಹಾಗೂ ಒಕ್ಕಲಿಗರು 4-5 ಸ್ಥಾನಕ್ಕೆ ತಳ್ಳಲ್ಪಡುತ್ತಾರೆ. ಆಗ ಈ ವರದಿಯ ಬಗ್ಗೆಯೇ ಅಪಸ್ವರಗಳು ಕೇಳಿಬರುತ್ತವೆ, ಓಲೈಕೆ ರಾಜಕಾರಣ ಅನ್ನೋ ಆರೋಪಗಳು ಜೋರಾಗ್ತವೆ ಸಿದ್ದರಾಮಯ್ಯ ನವರ ಸರ್ಕಾರಕ್ಕೆ ತಲೆನೋವಾದ್ರು ಆಗಬಹುದು…
ಒಟ್ನಲ್ಲಿ ರಾಜ್ಯದ ಜಾತಿಗಣತಿ ವರದಿ ನವೆಂಬರ್ ಕೊನೆಯ ವಾರ ಇಲ್ಲ ಡಿಸೆಂಬರ್ ಮೊದಲ ವಾರದಲ್ಲಿ ಸಿದ್ದರಾಮಯ್ಯ ಕೈ ಸೇರುತ್ತೆ. ಜಾತಿ ಎಂಬ ಜೇನುಗೂಡಿಗೆ ಕೈ ಹಾಕಿರೋ ಸಿಎಂ ಜಾತಿವರದಿಯನ್ನ ಲೋಕಸಮರಕ್ಕೂ ಮುನ್ನವೇ ಬಿಡುಗಡೆ ಮಾಡ್ತಾರಾ ಇಲ್ಲ ವರದಿ ಪಡೆದು ವಿರೋಧಿಗಳನ್ನು ಹೆಣೆಯಲು ಪ್ಲಾನ್ ರೂಪಿಸ್ತಾರಾ. ವರದಿ ಬಿಡುಗಡೆ ಮಾಡಿ ಜೇನು ಗೂಡನ್ನು ಕಿತ್ತು ಯಾರಿಗೆ ತುಪ್ಪ ನಿನ್ನಿಸ್ತಾರೆ ಎಂಬ ರಾಜಕೀಯ ಲೆಕ್ಕಾಚಾರಗಳು ಗರಿಗೆದರಿವೆ…..