ಬೆಂಗಳೂರು: ಕನ್ನಡ ನಾಮಫಲಕ ಅಳವಡಿಕೆಗೆ ಪಾಲಿಕೆ ನೀಡಿದ ಡೆಡ್ ಲೈನ್ ಇಂದಿಗೆ ಅಂತ್ಯವಾಗಿದ್ದು ಶೇ.60 ರಷ್ಟು ಕನ್ನಡ ಭಾಷೆಯುಳ್ಳ ನಾಮಫಲಕ ಅಳವಾಡಿಕೆಗೆ ಪಾಲಿಕೆ ಡೆಡ್ ಲೈನ್ ಕೊಟ್ಟಿತ್ತು. ನಗರದಲ್ಲಿ ಬಹುತೇಕ ಅಂಗಡಿಗಳ ಮೇಲೆ ಇನ್ನೂ ಅನ್ಯ ಭಾಷೆಯ ನಾಮಫಲಕವಿದ್ದು ಕೆಲವು ಕಡೆ ಬಿಬಿಎಂಪಿ ನೋಟೀಸ್ ನೀಡಿ ತೆರವು ಮಾಡಿದ್ದೆ ಆದ್ರೂ ನಗರದ ಹಲವು ಪ್ರದೇಶಗಳಲ್ಲಿ ಇನ್ನೂ ಅನ್ಯ ಭಾಷೆ ನಾಮಫಲಕವಿದ್ದು ಈಗಾಗಲೇ ಪಾಲಿಕೆಯಿಂದ 50.216 ಮಳಿಗೆಗಳಿಗೆ ನೋಟೀಸ್ ನೀಡಲಾಗಿದೆ.
ಈ ಪೈಕಿ ಈಗಾಗಲೇ 46,600 ವ್ಯಾಪಾರಿಗಳಿಂದ ಕನ್ನಡ ನಾಮ ಫಲಕ ಅಳವಡಿಕೆ ಇನ್ನೂ 3,616 ವ್ಯಾಪಾರಿಗಳು ಕನ್ನಡ ನಾಮ ಫಲಕ ಅಳವಡಿಕೆ ಬಾಕಿ ಬಿಬಿಎಂಪಿ ಆರೋಗ್ಯಾಧಿಕಾರಿಯಿಂದ ಮಾಹಿತಿ ಸಿಕ್ಕಿದೆ.
ನ್ನಡ ನಾಮಫಲಕ ವಲಯವಾರು ನೋಟಿಸ್ ವಿವರಗಳನ್ನು ನೋಡೋದದ್ರೆ ಹೀಗಿದೆ.
• ಬೆಂಗಳೂರು ದಕ್ಷಿಣ ವಲಯ ..
– ನೋಟೀಸ್ ಸಂಖ್ಯೆ- 5982.
– ನಾಮಫಲಕ ಬದಲಾವಣೆ –
5605.
– ನಾಮಫಲಕ ಬದಲಾವಣೆ ಬಾಕಿ – 377.
• ಬೆಂಗಳೂರು ಪೂರ್ವ ವಲಯ-
– ನೋಟೀಸ್ ಸಂಖ್ಯೆ- 8634.
– ನಾಮಫಲಕ ಬದಲಾವಣೆ – 8634.
– ನಾಮಫಲಕ ಬದಲಾವಣೆ ಬಾಕಿ – 0000
• ಬೊಮ್ಮನಹಳ್ಳಿ ವಲಯ –
– ನೋಟೀಸ್ ಸಂಖ್ಯೆ- 8413.
– ನಾಮಫಲಕ ಬದಲಾವಣೆ – 7730.
– ನಾಮಫಲಕ ಬದಲಾವಣೆ ಬಾಕಿ -693.
• ಮಹಾದೇವಪುರ ವಲಯ
– ನೋಟೀಸ್ ಸಂಖ್ಯೆ- 5960.
– ನಾಮಫಲಕ ಬದಲಾವಣೆ – 5730.
– ನಾಮಫಲಕ ಬದಲಾವಣೆ ಬಾಕಿ – 230.
• ಪಶ್ಚಿಮ ವಲಯ
– ನೋಟೀಸ್ ಸಂಖ್ಯೆ- 7113.
– ನಾಮಫಲಕ ಬದಲಾವಣೆ – 6544.
– ನಾಮಫಲಕ ಬದಲಾವಣೆ ಬಾಕಿ – 569.
• ಯಲಹಂಕ ವಲಯ
– ನೋಟೀಸ್ ಸಂಖ್ಯೆ- 6165.
– ನಾಮಫಲಕ ಬದಲಾವಣೆ – 5405.
– ನಾಮಫಲಕ ಬದಲಾವಣೆ ಬಾಕಿ-760.
• ಅರ್ .ಅರ್ ನಗರ ವಲಯ
– ನೋಟೀಸ್ ಸಂಖ್ಯೆ- 6401.
– ನಾಮಫಲಕ ಬದಲಾವಣೆ – 5563.
– ನಾಮಫಲಕ ಬಾಕಿ-838..
• ದಾಸರಹಳ್ಳಿ ವಲಯ
– ನೋಟೀಸ್ ಸಂಖ್ಯೆ – 1548.
– ನಾಮಫಲಕ ಬದಲಾವಣೆ – 1399.
– ನಾಮಫಲಕ ಬದಲಾವಣೆ ಬಾಕಿ – 149.
•ಒಟ್ಟು 50,216 – 46,600 -3,616.
ಇದಿಷ್ಟು ಪಾಲಿಕೆಯಿಂದ ಉದ್ದಿಮೆ ಪರವಾನಗಿ ಪಡೆವರಿಗೆ ಮಾತ್ರ ನೀಡಿರು ನೋಟಿಸ್
ಉಳಿದಂತೆ ಪರವಾನಗಿ ಪಡೆಯದ ವ್ಯಾಪಾರ ನಡೆಸಲಾಗುತ್ತಿರೋ ವಾಣಿಜ್ಯ ಮಳಿಗೆಗಳ ಮೇಲೆ ಅನ್ಯ ಭಾಷೆಯ ನಾಮಫಲಕ ಇಂದಿಗೂ ಇವೆ.
ಅವುಗಳ ಮೇಲೆ ಕ್ರಮ ಕೈಗೋಳೋದಾಗಿ ಪಾಲಿಕೆ ಆರೋಗ್ಯಧಿಕಾರಿ ತಿಳಿಸಿದ್ದಾರೆ.