ಬೆಂಗಳೂರು:- ಬೆಂಗಳೂರಿನ ರೈಲಿನ ಮೂಲಸೌಕರ್ಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರೈಲ್ವೇ ಇಲಾಖೆ ಬೆಂಗಳೂರಿನ ಆರು ಪ್ರಮುಖ ಮಾರ್ಗಗಳಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ಅಳವಡಿಕೆಗೆ ಮುಂದಾಗಿದೆ.
ರೈಲು ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಂಗಳೂರಿನ ಆರು ಪ್ರಮುಖ ಮಾರ್ಗಗಳಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ಸಿಸ್ಟಮ್ ಅಳವಡಿಸಲು ರೈಲ್ವೆ ಇಲಾಖೆ ಮುಂದಾಗಿದೆ. ಒಟ್ಟು 639 ಕಿ.ಮೀ ದೂರದಲ್ಲಿ ಇದಕ್ಕೆ ಅನುಮತಿ ಸಿಕ್ಕಿದ್ದು, ಸುಮಾರು 874 ಕೋಟಿ ರೂಪಾಯಿ ವೆಚ್ಚ ತಗುಲಲಿದೆ.
ಆಟೋಮೆಟಿಕ್ ಸಿಗ್ನಲಿಂಗ್ ಸಿಸ್ಟಂ ಎಲ್ಲೆಲ್ಲಿ?
* ಕೆಎಸ್ಆರ್ ಬೆಂಗಳೂರು ಸಿಟಿ- ಯಶವಂತಪುರ- ಯಲಹಂಕ
* ಯಶವಂತಪುರ To ಅರಸೀಕೆರೆ
* ಲೊಟ್ಟೆಗೊಲ್ಲಹಳ್ಳಿ To ಹೊಸೂರು
* ವೈಟ್ಫೀಲ್ಡ್ To ಜೋಲಾರಪೇಟೆ
* ಬೈಯಪ್ಪನಹಳ್ಳಿ To ಪೆನುಕೊಂಡ- ಚನ್ನಸಂದ್ರ
* ಬೆಂಗಳೂರು ನಗರ To ಮೈಸೂರು
ಪ್ರಸ್ತುತ ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗದಲ್ಲಿ ಕೆಎಸ್ಆರ್ ಬೆಂಗಳೂರು ನಗರ-ವೈಟ್ಫೀಲ್ಡ್ ವಿಭಾಗದಲ್ಲಿ ಆಟೋಮೆಟಿಕ್ ಸಿಗ್ನಲ್ ಅಳವಡಿಸಲಾಗಿದೆ. ಇದುವರೆಗೂ ರೈಲ್ವೆಯ ರಿಲೇರೂಮ್ನಲ್ಲಿ ಸಿಗ್ನಲ್ಗಳನ್ನು ಸಿಬ್ಬಂದಿ ಕಂಟ್ರೋಲ್ ಮಾಡ್ತಿದ್ದಾರೆ. ಈಗ ರಿಲೇರೂಮ್ನಲ್ಲಿ ಆಟೋಮೆಟಿಕ್ ಆಗಿ ಆನ್ ಆಂಡ್ ಆಫ್ ಆಗಲಿವೆ. ಇದರಿಂದಾಗಿ ಒಂದು ಸಮಯದಲ್ಲಿ ಒಂದು ರೈಲಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಜೊತೆಗೆ ಫ್ಲಾಟ್ ಫಾರಂನಲ್ಲಿ ಪ್ರಯಾಣಿಕರು ಹೋಗಲು ಹಾಗೂ ಬರಲು ಅನುಕೂಲವಾಗಲಿದೆ. ಇದರಿಂದ ರೈಲುಗಳ ದಕ್ಷತೆ ಹೆಚ್ಚಾಗಲಿದೆ. ಒಟ್ಟಿನಲ್ಲಿ ರೈಲ್ವೆ ಇಲಾಖೆಯ ಈ ಕ್ರಮ ಪ್ರಯಾಣಿಕರಲ್ಲಿ ಸಂತಸ ತರಿಸಿದೆ.