ಬಿಗ್ ಬಾಸ್ ಮನೆಗೆ ಹೋಗಿ ಬಂದ ಬಳಿಕ ಡ್ರೋನ್ ಪ್ರತಾಪ್ ಮೇಲಿನ ಅಭಿಪ್ರಾಯವೇ ಬದಲಾಗಿದೆ. ಈ ಹಿಂದೆ ಆತನನ್ನು ಆಡಿಕೊಂಡ ನಕ್ಕವರು ಬಳಿಕ ಆತನ ವರ್ತನೆ ನೋಡಿ ಶಹಭಾಷ್ ಎಂದಿದ್ದರು. ಬಿಗ್ ಬಾಸ್ ಮನೆಯಲ್ಲಿ ತನಗೆ ಸಿಕ್ಕ ಬಹುಮಾನವನ್ನು ದಾನ ಮಾಡಿ ನೋಡುಗರ ಕಣ್ಣಲ್ಲಿ ಹೀರೋ ಆಗಿದ್ದ. ಇದೀಗ ಪ್ರತಾಪ್ ಆಡಿಕೊಂಡವರ ಬಾಯಿ ಮುಚ್ಚಿಸಿದ್ದಾರೆ.ಕೊನೆಗೂ ಡ್ರೋನ್ ಹಾರಿಸಿ ಸೈ ಎನಿಸಿಕೊಂಡಿದ್ದಾರೆ.
ಇಂಥಾ ಡ್ರೋನ್ ಪ್ರತಾಪ್ ಕಳೆದ ವರ್ಷ ಇದೇ ಸಮಯದಲ್ಲಿ ಬಿಗ್ ಬಾಸ್ ಮನೆಗೆ ತೆರಳಿದ್ದರು. ಆಗ ಡ್ರೋನ್ ಪ್ರತಾಪ್ ಅವರನ್ನು ತುಕಾಲಿ ಸಂತೋಷ್, ವರ್ತೂರ್ ಪ್ರಕಾಶ್ ಸೇರಿ ಅನೇಕರು ಗೇಲಿ ಮಾಡಿದ್ದರು. ಡ್ರೋನ್ ಹೆಸರಿನಲ್ಲಿ ಎಲ್ಲರ ಕಣ್ಣಿಗೆ ಮಣ್ಣೆರಚಿದ್ದೇ ನಿನ್ನ ಬದುಕಿನ ಸಾಧನೆ ಎಂಬಂರ್ಥದಲ್ಲಿ ಕಾಲೆಳೆದಿದ್ದರು. ಡ್ರೋನ್ ಪ್ರತಾಪ ಅವರ ಮನಸನ್ನು ನೋಯಿಸಿದ್ದರು. ಈಗ ಒಂದು ವರ್ಷದ ಬಳಿಕ ತನ್ನನ್ನೂ ಆಡಿಕೊಂಡವರಿಗೆ ಡ್ರೋನ್ ಪ್ರತಾಪ್ ತಮ್ಮ ಕೆಲಸದ ಮೂಲಕ ಉತ್ತರ ನೀಡಿದ್ದಾರೆ.
ಹೌದು, ಅಸಲಿಗೆ ಬಿಗ್ ಬಾಸ್ ಮನೆಯಲ್ಲಿದ್ದಾಗ ಡ್ರೋನ್ ಪ್ರತಾಪ್ ತಾವು ಡ್ರೋನ್ ತಯಾರಿಸುತ್ತಿರುವುದಾಗಿ ಹೇಳಿದ್ದರು. ಕೃಷಿ ಸಂಬಂಧಿತ ಚಟುವಟಿಕೆಗಳಿಗೆ, ಅಡಿಕೆ ಮರಗಳಿಗೆ ನಾನು ತಯಾರಿಸಲಿರುವ ಡ್ರೋನ್ದಿಂದ ತುಂಬಾ ಪ್ರಯೋಜನವಾಗುತ್ತೆ ಎಂದು ಹೇಳುತ್ತಿದ್ದರು. ನಾನು ತಯಾರಿಸುತ್ತಿರುವ ಡ್ರೋನ್ ತುಂಬಾ ಎತ್ತರದ ಮರಳಿಗೆ ಕೂಡ ಔಷಧಿಯನ್ನು ಸಿಂಪಡನೆ ಮಾಡುತ್ತೆ ಎಂದು ಹೇಳುತ್ತಿದ್ದರು. ಆದರೆ, ಡ್ರೋನ್ ಅವರ ಈ ಮಾತನ್ನು ಬಿಗ್ ಬಾಸ್ನಲ್ಲಿ ಯಾರೆಂದರೆ ಯಾರು ನಂಬಿರಲಿಲ್ಲ. ಬದಲಿಗೆ ಇವನದ್ದು ಅದೇ ರಾಗ ಅದೇ ಹಾಡು ಎಂದಿದ್ದರು. ಆದರೆ ಈಗ ಡ್ರೋನ್ ಪ್ರತಾಪ್ ತಾವು ಹೇಳಿದಂತೆ ಡ್ರೋನ್ ಹಾರಿಸಿದ್ದಾರೆ. ಡ್ರೋನ್ ಮೂಲಕ ಎತ್ತರದ ಮರಗಳಿಗೆ ಔಷಧಿಯನ್ನು ಕೂಡ ಸಿಂಪಡಿಸಿ ಸೈ ಎನಿಸಿಕೊಂಡಿದ್ದಾರೆ.