ಬೆಂಗಳೂರು: ಇನ್ನೇನು ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಶುರುವಾಗ್ತಾಯಿದೆ ..ವಿದ್ಯಾರ್ಥಿಗಳು ತಾವು ಪರೀಕ್ಷೆಯಲ್ಲಿ ಪಾಸ್ ಆಗ್ಬೇಕು ಅಂತ ಶತಾಯಗತಾಯ ಹರಸಾಹಸ ಪಡ್ತಾ ಇದ್ದಾರೆ . ಇದರ ನಡುವೆ ವಿಧ್ಯಾರ್ಥಿಗಳೇ ಒಂದು ಶಾಕ್ ಕಾದಿದೆ.ಅದೇನು ಅಂತೀರಾ ಆಗುತ್ತೆ ಈ ಸ್ಟೋರಿ ನೋಡಿ.. 2023 24ನೇ ಸಾಲಿನ ಪರೀಕ್ಷೆಗೆ ಎಲ್ಲ ಶಾಲಾ ಕಾಲೇಜುಗಳು ಸಿದ್ಧಗೊಳ್ಳುತ್ತಿದೆ..ಆದರೆ ಕೆಲವೊಂದು ಶಾಲೆಗಳು ತಮ್ಮ ಮಾನ್ಯತೆ ನವೀಕರಣ ಮಾಡಿಸಿಕೊಂಡಿಲ್ಲ ..ಅನಧಿಕೃತವಾಗಿ ಶಾಲೆ ನಡೆಸುತ್ತಿರುವ ಕಾರಣ ಮಂಡಳಿಯಿಂದ ಎಚ್ಚರಿಕೆ ನೀಡಿದ್ದಾರೆ .. ಈ ಕೂಡಲೇ ಪರೀಕ್ಷೆಯ ಮುನ್ನವೇ ಮಾನ್ಯತೆಯನ್ನು ನವೀಕರಣಗೊಳಿಸಬೇಕು ಎಂದು ಖಡಕ್ ಸೂಚನೆ ಕೊಟ್ಟಿದ್ದಾರೆ ..
ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ ಮಾನ್ಯತೆ ನವೀಕರಣ ಮಾಡಿಕೊಳ್ಳದೇ ಇರುವ 129 ಖಾಸಗಿ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಕರಡು ಪ್ರವೇಶ ಪತ್ರವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಡೆಹಿಡಿದಿದೆ.ಇದರಿಂದ ಇವು ಅನಧಿಕೃತ ಎಂಬುದನ್ನು ಮಂಡಳಿ ಸ್ಪಷ್ಟಪಡಿಸಿದ್ದು, ಅಂತಿಮ ಪ್ರವೇಶ ಪತ್ರ ವಿತರಿಸುವುದಕ್ಕೆ 15 ದಿನಗಳ ಮುಂಚಿತವಾಗಿ ಸಲ್ಲಿಕೆಯಾದಲ್ಲಿ ಆ ಶಾಲೆಗಳ ಕರಡು ಪ್ರವೇಶ ಪತ್ರಗಳನ್ನು ಪರಿಶೀಲನೆಗೆ ಬಿಡುಗಡೆ ಮಾಡಲಾಗುವುದು ಎಂದು ಶಾಲೆಗಳಿಗೆ ಮಂಡಳಿಯ ನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಮಾನ್ಯತೆ ನವೀಕರಿಸಿಕೊಂಡಿರುವ ಶಾಲೆಗಳ ಪಟ್ಟಿಯನ್ನು ಜಿಲ್ಲಾ ಉಪನಿರ್ದೇಶಕರು ಮಂಡಳಿಗೆ ಕಳುಹಿಸಿಕೊಟ್ಟಿದ್ದಾರೆ. ಇದನ್ನು ಪರಿಶೀಲಿಸಿದಾಗ 129 ಶಾಲೆಗಳು ಮಾನ್ಯತೆ ನವೀಕರಿಸಿದೇ ಇರುವುದು ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಈ 129 ಶಾಲೆಗಳ ಪೈಕಿ ಯಾವುದೇ ಶಾಲೆಗಳು ಮಾನ್ಯತೆ ನವೀಕರಿಸಿಕೊಂಡು ಅದರ ಮಾಹಿತಿಯನ್ನು ಮಂಡಳಿಗೆ ಕಳುಹಿಸಿದಲ್ಲಿ, ಅಂತಹ ಶಾಲೆಗಳ ಕರಡು ಪ್ರವೇಶ ಪತ್ರವನ್ನು ಪರಿಶೀಲನೆಗೆ ಬಿಡುಗಡೆ ಮಾಡುವುದಾಗಿ ಮಂಡಳಿಯು ಶಾಲೆಗಳಿಗೆ ಎಚ್ಚರಿಕೆಯನ್ನು ನೀಡಿದೆ.
129 ಶಾಲೆಗಳ ಪಟ್ಟಿ ಪರಿಶೀಲಿಸಿದಾಗ 36 ಶಾಲೆಗಳು ಬೆಂಗಳೂರು ದಕ್ಷಿಣ ವಿಭಾಗದಲ್ಲಿವೆ. ಬೆಂ.ಉತ್ತರ, ತುಮಕೂರು, ಶಿವಮೊಗ್ಗದ ಜಿಲ್ಲೆಗಳಲ್ಲೂ ಶಾಲೆಗಳಿವೆ. ಮಾನ್ಯತೆ ಪಡೆದುಕೊಳ್ಳದೇ ಇರುವ ಶಾಲೆಗಳು ಅನಧಿಕೃತವಾಗಲಿದ್ದು, ಇಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಸಹ ಅನಧಿಕೃತರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಕರಡು ಪ್ರತಿ ಬಿಡುಗಡೆ ವೇಳೆಯಲ್ಲೇ ಇಂತಹ ಶಾಲೆಗಳಿಗೆ ಮಂಡಳಿಯು ಎಚ್ಚರಿಕೆಯನ್ನು ನೀಡಿದೆ. ಒಟ್ಟಾರೆ, ಶಾಲೆ ಮಕ್ಕಳಿಗೆ ಇದನ್ನು ಕೇಳಿ ಆತಂಕ ಗೊಳ್ಳುವ ಅವಶ್ಯಕತೆ ಇಲ್ಲ ..ಯಾಕಂದ್ರೆ ಮಕ್ಕಳಿಗೆ ಯಾವುದೇ ರೀತಿಯಾದಂತಹ ಪ್ರಭಾವ ಬೀರಬಾರ್ದೆಂದು ಕಾಲಾವಕಾಶ ಕೊಟ್ಟಿದ್ದಾರೆ..ಇದರಿಂದ ಮಕ್ಕಳ ಪರೀಕ್ಷೆಗೆ ಯಾವುದೇ ರೀತಿಯಾದಂತ ತೊಂದರೆ ಉಂಟಾಗುವುದಿಲ್ಲ.