ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿನ ಭಿನ್ನಮತ ಸ್ಫೋಟಕ್ಕೆ ಅಂಕುಶ ಹಾಕುವ ಕೆಲಸ ನಡೆದಿದೆ. ಸ್ವಪಕ್ಷೀಯ ನಾಯಕರ ವಿರುದ್ಧವೇ ಸಮರ ಸಾರಿದ್ದವರನ್ನ ಸುಮ್ಮನಿರಿಸುವ ಪ್ರಯತ್ನ ಮುಂದುವರಿದಿದೆ.ಪಕ್ಷಕ್ಕೆ ಮುಜುಗರ ತಂದವರಿಗೆ ನೊಟೀಸ್ ಕೊಟ್ಟು ಎಚ್ಚರಿಕೆ ನೀಡಲಾಗಿದ್ದು, ಕೆಲವರು ಹಿರಿಯರ ಮುಂದೆ ವಿವರಣೆ ಕೊಟ್ರೆ, ರೇಣುಕಾಚಾರ್ಯ ಮಾತ್ರ ಡೋಂಟ್ ಕೇರ್ ಎಂದಿದ್ದಾರೆ..
ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಬಿಜೆಪಿ ಪಕ್ಷದಲ್ಲಿ ಆಂತರಿಕ ಯುದ್ದ ಶುರುವಾಗಿದೆ. ಪಕ್ಷದ ಮುಖಂಡರ ನಡವಳಿಕೆ ಬಗ್ಗೆ ಅನೇಕರು ಬಹಿರಂಗ ಅಸಮಾಧಾನಹೊರಹಾಕಿದ್ದರು. ತಮ್ಮದೇ ನಾಯಕರ ವಿರುದ್ಧ ತಮ್ಮದೇ ಪಕ್ಷದವರ ಸ್ಟೇಟ್ ಮೆಂಟ್ ಗಳಿಂದ ಪಕ್ಷಕ್ಕೆ ಸಾಕಷ್ಟು ಮುಜುಗರ ಎದುರಾಗಿತ್ತು. ಬಿಎಸ್ ವೈ ಹಾಗೂ ಸಂತೋಷ್ ತಂಡಗಳ ಬಣ ರಾಜಕೀಯಕ್ಕೂ ಇದು ವೇದಿಕೆ ಮಾಡಿಕೊಟ್ಟಿತ್ತು. ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಇದು ಹೆಚ್ಚಾದ್ರೆ ಆಪತ್ತು ಕಟ್ಟಿಟ್ಟ ಬುತ್ತಿ ಎಂಬ ಮನವರಿಕೆ ಹಿರಿಯರಿಗೆ ತಟ್ಟಿದೆ.ಹಾಗಾಗಿ ಬಹಿರಂಗ ಹೇಳಿಕೆ ನೀಡ್ತಿದ್ದವರನ್ನ ಕರೆಸಿ ಬುದ್ಧಿವಾದ ಹೇಳುವ ಕೆಲಸ ಮಾಡಲಾಗಿದೆ..
ವಿವಾದಾತ್ಮಕ ಹೇಳಿಕೆಕೊಟ್ಡವರ ಜೊತೆ ಇಂದು ಹಿರಿಯ ನಾಯಕರು ಸಭೆ ನಡೆಸಿದ್ರು..16 ಮಂದಿ ಪ್ರಮುಖರ ಜೊತೆ ಮಾತುಕತೆ ನಡೆಸಲಾಯ್ತು.ಇಂದು 11 ಮಂದಿಗೆ ಸಭೆಗೆ ಬರುವಂತೆ ಸೂಚಿಸಲಾಗಿತ್ತು. ಯತ್ನಾಳ್,ತಮ್ಮೇಶ್ ಗೌಡ,ವೀರಣ್ಣ ಚರಂತಿಮಠ, ಪ್ರತಾಪ್ ಸಿಂಹ, ಸಿ.ಟಿ.ರವಿ, ನಡಹಳ್ಳಿ ಭಾಗವಹಿಸಿದ್ರು. ಸಭೆಯಲ್ಲಿ ಎಲ್ಲರಿಗೂ ವಾರ್ನಿಂಗ್ ಮಾಡಿದ ಮುಖಂಡರು ಬಹಿರಂಗವಾಗಿ ಮಾತನಾಡದಂತೆ ಎಚ್ಚರಿಕೆ ನೀಡಿದರು. ವಿಶೇಷವಾಗಿ ಹೊಂದಾಣಿಕೆ ಬಗ್ಗೆ ಮಾತನಾಡಿದ್ದ ಸಂಸದ ಪ್ರತಾಪ್ ಸಿಂಹಗೆ ಮುಖಂಡರು ಸಖತ್ ಕ್ಲಾಸ್ ತೆಗೆದುಕೊಂಡ್ರು. ಇನ್ನು ಸಭೆಯ ಬಳಿಕ ಮಾತನಾಡಿದ ಕಟೀಲ್ 11ಜನರಿಗೆ ನೋಟಿಸ್ ನೀಡಲಾಗಿದೆ ಎಂದ್ರು.ಇದೇ ವೇಳೆ ಮಾತನಾಡಿದ ಬಿಎಸ್ ವೈ ಪಕ್ಷಕ್ಕೆ ಮುಜುಗರ ಆಗುವ ಹೇಳಿಕೆ ಯಾರೂ ನೀಡಬಾರದು ಅಂತ ಎಚ್ಚರಿಕೆ ರವಾನಿಸಿದ್ರು..
ಜನರಿಗೆ ಯಾರಿಗೆ ನೋಟಿಸ್ ಅಂತಾ ಬಹಿರಂಗ ಪಡಿಸಲು ಕಟೀಲ್ ನಿರಾಕರಿಸಿದರು. ಇನ್ನೂ ಗೈರಾದವರನ್ನು ಬಿಎಸ್ ವೈ ಕರೆದು ಮಾತನಾಡುವುದಾಗಿ ಹೇಳಿದ್ದಾರೆ. 11ಜನರ ನೋಟಿಸ್ ಪೈಕಿ 10 ಮಂದಿಗೆ ಕೇಂದ್ರ ಶಿಸ್ತು ಸಮಿತಿಯಿಂದ ನೋಟಿಸ್ ನೀಡಲಾಗಿದ್ಯಾ ಎಂಬ ಪ್ರಶ್ನೆ ಕಾಡ್ತಿದೆ. ಯಾಕೆಂದರೆ ಸದ್ಯ ರೇಣುಕಾಚಾರ್ಯ ಗೆ ಬಿಟ್ಟರೆ ಬೇರೆ ಯಾರಿಗೂ ನೋಟಿಸ್ ನೀಡಿಲ್ಲ. ಮಿಕ್ಕವರಿಗೆ ದೂರವಾಣಿ ಮೂಲಕ ಸಭೆಗೆ ಬರಲು ಹೇಳಿದ್ವಿ ಎಂದು ಶಿಸ್ತು ಸಮಿತಿ ಮುಖ್ಯಸ್ಥ ಲಿಂಗರಾಜು ಹೇಳಿದ್ರು…
ಇನ್ನು ನೊಟೀಸ್ ಜಾರಿ ಮಾಡಿದ್ರು ರೇಣುಕಾಚಾರ್ಯ ತಲೆಕೆಡಿಸಿಕೊಂಡಂತೆ ಕಾಣ್ತಿಲ್ಲ. ಇವತ್ತಿನ ಸಭೆಗೂ ಬಂದಿಲ್ಲ ಕಟೀಲರ ರಾಜೀನಾಮೆಗೆ ನೇರವಾಗಿ ಆಗ್ರಹಿಸಿದ್ದ ರೇಣುಕಾಚಾರ್ಯ ಇಂದು ಮತ್ತೊಮ್ಮೆ ಸಂತೋಷ್ ಆಂಡ್ ಟೀಂ ವಿರುದ್ಧ ಗುರ್ರ್ ಎಂದಿದ್ದಾರೆ. ನನಗೆ ಮಾತ್ರ ನೊಟೀಸ್ ಕೊಡ್ತಾರೆ ನಾಲ್ಕು ವರ್ಷದಿಂದ ಯಡಿಯೂರಪ್ಪನವರ ಬಗ್ಗೆ ಮಾತನಾಡೋರಿಗೆ ಮಾತ್ರ ನೊಟೀಸ್ ಕೊಡ್ತಿಲ್ಲ ಅಂತ ಕಿಡಿಕಾರಿದ್ದಾರೆ..
ಒಟ್ನಲ್ಲಿ ಬಿಜೆಪಿಯಲ್ಲಿ ದಿನದಂದ ದಿನಕ್ಕೆ ಅಸಮಾಧಾನದ ಗಲಾಟೆ ಜಾಸ್ತಿಯಾಗ್ತಿದೆ. ಆದ್ರೆ ಬಿಜೆಪಿ ನಾಯಕರು ವಾರ್ನಿಂಗ್ ಮಾಡೋದ್ರಲ್ಲೇ ಮುಗಿಸಿದ್ದಾರೆ. ಯಾವುದೇ ಕಠಿಣ ಕ್ರಮದ ಎಚ್ಚರಿಕೆ ರವಾನಿಸಿಲ್ಲ. ಹೀಗಾಗಿ ಗರಂ ಆದವ್ರು ಇದಕ್ಕೆ ತಲೆ ಕೆಡಿಸಿಕೊಳ್ತಾರಾ ಅನ್ನೋದೇ ಮುಂದಿರುವ ಯಕ್ಷ ಪ್ರಶ್ನೆಯಾಗಿದೆ..