ಸ್ಯಾಂಡಲ್ವುಡ್ ಸ್ಟಾರ್ ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿ ಸಮುದ್ರ ತೀರದಲ್ಲಿ ಪತ್ನಿ ಜೊತೆಗೆ ರೊಮ್ಯಾನ್ಸ್ ಮಾಡಿದ್ದಾರೆ. ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ವಿವಾಹ ವಾರ್ಷಿಕೋತ್ಸವವನ್ನು ಇಬ್ಬರು ಮುದ್ದು ಮಕ್ಕಳ ಜೊತೆ ಸಮುದ್ರದ ದಡದಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ.
ಹಲವು ವರ್ಷಗಳ ಕಾಲ ಪ್ರೀತಿಸಿ 2017ರಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಪ್ರೀತಿಸಿ, ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕುಂದಾಪುರದಲ್ಲಿ ಪ್ರಗತಿ ಹಾಗೂ ರಿಷಬ್ ಅವರ ಮದುವೆ ಅದ್ಧೂರಿಯಾಗಿ ನಡೆದಿತ್ತು. ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.
ಇನ್ನು, ವಿವಾಹ ವಾರ್ಷಿಕೋತ್ಸದ ಅಂಗವಾಗಿ ಕಡಲ ತೀರದಲ್ಲಿ ಕೇಕ್ ಕಟ್ ಮಾಡಿ ಸಂಭ್ರಮಿಸಿದೆ. ಅಲ್ಲದೇ ಬ್ಯೂಟಿಫುಲ್ ಲೊಕೇಶನ್ ರಿಷಬ್ ದಂಪತಿ ಮಕ್ಕಳ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಸ್ಪೆಷಲ್ ಫೋಟೋದಲ್ಲಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಫೋಟೋದಲ್ಲಿ ಪ್ರಗತಿ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ಬಿಳಿ ಬಣ್ಣದ ಮೇಲೆ ಕೆಂಪು ಬಣ್ಣದ ಹಾರ್ಟ್ ಇರೋ ಕೇಕ್ ಕಟ್ ಮಾಡಿದ್ದಾರೆ. ಪ್ರಗತಿ ಮಗಳನ್ನು ಎತ್ತಿಕೊಂಡಿದ್ದರೆ ರಿಷಬ್ ಮಗನನ್ನು ಹಿಡಿದುಕೊಂಡಿದ್ದರು. ಎಲ್ಲರೂ ಗಾಗಲ್ಸ್ ಧರಿಸಿಕೊಂಡು ಕ್ಯೂಟ್ ಆಗಿ ಕಾಣಿಸಿದ್ದಾರೆ.
ರಿಷಬ್ ಶೆಟ್ಟಿ ಅವರು ಬ್ಲ್ಯಾಕ್ ಜೀನ್ಸ್ ಧರಿಸಿ ವೈಟ್ ಶರ್ಟ್ ಧರಿಸಿಕೊಂಡಿದ್ದರು. ಪ್ರಗತಿ ಶೆಟ್ಟಿ ಅವರು ಬ್ಲೂ ಫ್ರಾಕ್ ಧರಿಸಿದ್ದರು. ಅವರ ಮಗಳು ಚಂದದ ಫ್ರಾಕ್ ಧರಿಸಿದ್ದರೆ, ಮಗ ಬ್ಲೂ ಜೀನ್ಸ್ ಹಾಗೂ ವೈಟ್ ಶರ್ಟ್ ಧರಿಸಿದ್ದರು
ಕನಸುಗಳನ್ನು ಹಂಚಿಕೊಳ್ಳುವುದರಿಂದ ಹಿಡಿದು ಅವುಗಳನ್ನು ಒಟ್ಟಿಗೆ ರಚಿಸುವವರೆಗೆ- ಪ್ರತಿ ವರ್ಷ, ನಮ್ಮ ಪ್ರಯಾಣವು ಇನ್ನಷ್ಟು ಮಾಂತ್ರಿಕವಾಗಿರುತ್ತದೆ. ನಿಮ್ಮ ಅಚಲ ಬೆಂಬಲಕ್ಕಾಗಿ, ನನ್ನ ಶಕ್ತಿಯಾಗಿದ್ದಕ್ಕಾಗಿ ಮತ್ತು ಈ ಸುಂದರ ಜೀವನಕ್ಕಾಗಿ ನಾವು ಚಲನಚಿತ್ರಗಳಲ್ಲಿ ಮತ್ತು ಅದರಾಚೆಗೆ ಒಟ್ಟಿಗೆ ನಿರ್ಮಿಸುತ್ತಿದ್ದೇವೆ. ನಿಮ್ಮೊಂದಿಗೆ ಈ ವಿಶೇಷ ಕನಸಿನ ಜೀವನಕ್ಕಾಗಿ ದೇವರಿಗೆ ಧನ್ಯವಾದಗಳು. ಲವ್ ಯು ಫಾರೆವರ್ ವಾರ್ಷಿಕೋತ್ಸವದ ಶುಭಾಶಯಗಳು ಎಂದು ಪ್ರಗತಿ ಶೆಟ್ಟಿ ಬರೆದುಕೊಂಡಿದ್ದಾರೆ.
ನನ್ನ ಸಂಗಾತಿಯಾಗಿ ಹೃದಯಕ್ಕೆ ಒಲವನ್ನು, ಸಾಧನೆಗೆ ವಿಶ್ವಾಸವನ್ನು, ನಾಳೆಗೆ ಭರವಸೆಯನ್ನು ತಂದವಳು ನೀನು.ಈ ಸಂಸಾರವೆಂಬ ಸಾರ್ಥಕತೆಯಲ್ಲಿ ನನ್ನ ಸಹನೆ, ಶಕ್ತಿ, ಸರ್ವಸ್ವಗಳಾಗಿ ಸದಾ ಜೊತೆಗಿರು ಎಂದು ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ.
