ಬೆಂಗಳೂರು: ರಾಜಧಾನಿಯಲ್ಲಿ ಶುರುವಾಯ್ತು ಕಾಲರಾ ರೋಗದ ಆತಂಕ ಮಲ್ಲೇಶ್ವರಂ ನ ನಿವಾಸಿ ಮಹಿಳೆಯರೊಬ್ಬರಿಗೆ ಕಾಲರ ಶಂಕೆ ತೀವ್ರ ವಾಂತಿ ಬೇದಿ ಹಿನ್ನೆಲೆ ರಕ್ತ ಪರೀಕ್ಷೆ ವೇಳೆ ಕಾಲರಾ ಪತ್ತೆ ಹೀಗಾಗಿ ನಗರದಲ್ಲಿ ಕಟ್ಟೆಚ್ಚರ ವಹಿಸಿದ ಬಿಬಿಎಂಪಿ ಆರೋಗ್ಯ ಇಲಾಖೆ
ಪ್ರತೀ ವಾರ್ಡ್ ಮಟ್ಟದಲ್ಲಿ ಕಾಲರ ರೋಗ ಹರಡದಂತೆ ಎಚ್ಚರಿಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಲರ ಕುರಿತು ಮುಂಜಾಗ್ರತಾ ಕ್ರಮ ಅತಿಸಾರಭೇದಿ ಮತ್ತು ವಾಂತಿ ಲಕ್ಷಣಗಳೊಂದಿಗೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿರುವ ವೈದ್ಯರು ಮಹಿಳೆಗೆ ಕಾಲರಾ ಲಕ್ಷಣದ ಬಗ್ಗೆ ಮಾಹಿತಿ
ಆರಂಭಿಕ ಹಂತದ ಪರೀಕ್ಷೆಗಳಲ್ಲಿ ಕಾಲರಾ ಇರುವ ಬಗ್ಗೆ ಪಾಸಿಟೀವ್ ವರದಿ ನಂತರ ಪ್ರಯೋಗಾಲಯದ ಪರೀಕ್ಷೆಯಲ್ಲಿ ಮಲ ಮಾದರಿಯಲ್ಲಿ ನಗೆಟೀವ್ ಹೀಗಾಗಿ ಮಹಿಳೆ ಪ್ರಯಾಣದ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಆರೋಗ್ಯ ಸಿಬ್ಬಂದಿ ಟ್ರಾವೆಲ್ ಹಿಸ್ಟರಿ ಪತ್ತೆ ಹಚ್ಚಿ ಜನರ ಸಂಪರ್ಕದ ಬಗ್ಗೆ ಮಾಹಿತಿ
ಕಾಲರ ಬಗ್ಗೆ ಪಾಲಿಕೆ ಕೈಗೊಂಡ ಕಣ್ಗಾವಲು ಚಟುವಟಿಕೆ ಶಂಕಿತ ಮಹಿಳೆಯು ವಾಸ ಸ್ಥಳದಿಂದ ಸುತ್ತಮುತ್ತಲಿನ 165 ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ರೋಗ ಹರಡುವ ವಿಧಾನಗಳು, ಶುದ್ಧ ನೀರಿನ ಬಳಕೆ, ಕೈಗಳನ್ನು ಸ್ವಚ್ಛಗೊಳಿಸುವ ಬಗ್ಗೆ ಅರಿವು 165 ಮನೆಗಳಲ್ಲಿ ಯಾವುದೇ ರೀತಿಯ ಕಾಲರಾರೋಗದ ಲಕ್ಷಣಗಳು ವರದಿಯಾಗಿರುವುದಿಲ್ಲ 10 ನೀರಿನ ಮಾದರಿಗಳನ್ನು ಸೋಂಕು ಶಂಕಿತ ಪ್ರದೇಶದಿಂದ ಸಂಗ್ರಹಿಸಿ ಪರೀಕ್ಷೆಗೆ ರವಾನೆ
ರೋಗ ಹರುಡದಂತೆ ಮುಂಜಾಗ್ರತಾ ಕ್ರಮಗಳು ನಗರದ ಎಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಆರೋಗ್ಯ ವೈದ್ಯಾಧಿಕಾರಿಗಳಿಗೆ ಸೂಚನೆ ಎಲ್ಲಾ ಹೋಟೆಲ್ಗಳು/ರೆಸ್ಟೋರೆಂಟ್ಗಳು/ಕೆಫೆಗಳಲ್ಲಿ ಗ್ರಾಹಕರಿಗೆ ಕುಡಿಯಲು ಬಿಸಿ ನೀರನ್ನು ವಿತರಿಸಲು ಸಲಹೆ ಎಲ್ಲಾ ಖಾಸಗಿ ಆಸ್ಪತ್ರೆ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಐ.ಹೆಚ್.ಐ.ಪಿ ತಂತ್ರಾಶದಲ್ಲಿ ಕಡ್ಡಾಯವಾಗಿ ವರದಿ ಮಾಡುವಂತೆ ಸೂಚನೆ