ಹೈದರಾಬಾದ್: ನಿಶ್ಚಿತಾರ್ಥ ಸಮಾರಂಭದಲ್ಲಿ ಚಿಕನ್ ಕರ್ರಿಗಾಗಿ ನಡೆದ ಕಲಹದಿಂದ ವ್ಯಕ್ತಿಯೊಬ್ಬನ ಕೊಲೆಯಾಗಿರುವ ಘಟನೆ ನಗರದಲ್ಲಿ ನಡೆದಿದೆ. ಈ ಘಟನೆ ಸೋಮವಾರ ಮಧ್ಯಾಹ್ನ ಸುಮಾರು 1.30 ಗಂಟೆಗೆ ಚಾರ್ಮಿನಾರ್ ಸಮೀಪದ ಹುಸೇನಿ ಅಲಂ ಎಂಬಲ್ಲಿರುವ ಕಲ್ಯಾಣ ಮಂಟಪದಲ್ಲಿ ನಡೆದಿದೆ. ನಿಶ್ಚಿತಾರ್ಥಕ್ಕೆ ಬಂದ ಅತಿಥಿಗಳ ಎರಡು ಗುಂಪು ನಿಶ್ಚಿತಾರ್ಥ ಮುಗಿದ ನಂತರ ಊಟಕ್ಕೆ ಕುಳಿತ್ತಿದ್ದರು. ಈ ವೇಳೆ ಅತಿಥಿಗಳಿಗೆ ಚಿಕನ್ ಕರ್ರಿ ಬೇಕಾಗಿತ್ತು. ಸರ್ವ್ ಮಾಡಲು ತಡವಾಗಿದ್ದಕ್ಕೆ ಕೆರಳಿದ ಗುಂಪು ನಡೆವೆ ಜಗಳ ಶುರವಾಗಿದೆ.
ಬಡಿಸಲು ತಡ ಮಾಡಿದ್ದರಿಂದ ತಮಗೆ ಅವಮಾನವಾಗಿದೆ ಅಂತಾ ಹೇಳಿದ್ದಾರೆ. ಊಟ ಮುಗಿಸಿಕೊಂಡು ಹೋಗಿ ಚಾಕು ತೆಗೆದುಕೊಂಡು 15 ಅತಿಥಿಗಳು ವಾಪಸ್ ಬಂದಿದ್ದಾರೆ. ಎದುರಿಗೆ ಸಿಕ್ಕ ಸಿಕ್ಕವರಿಗೆಲ್ಲ ಚಾಕುವಿನಿಂದ ಇರಿದಿದ್ದಾರೆ. ಇದರಿಂದ ಓರ್ವ ಯುವಕ ಮೃತಪಟ್ಟಿದ್ದು, ಇನ್ನೊಬ್ಬನ ಸ್ಥಿತಿ ಚಿಂತಾಜನಕವಾಗಿದೆ. ಅಷ್ಟೇ ಅಲ್ಲದೇ ಮಹಿಳೆಯರ ಕೋಣೆಗೂ ತೆರಳಿದ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ. ಈ ಘಟನೆ ಸಂಬಂಧ ಪೊಲೀಸರು ಮೂವರನ್ನು ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದು, ಉಳಿದವರಿಗಾಗಿ ಶೋಧಕಾರ್ಯ ನಡೆಸಿದ್ದಾರೆ.