ಕಿರಣ್ ರಾವ್ ನಿರ್ದೇಶನದ ‘ಲಾಪತಾ ಲೇಡಿಸ್’ ಸಿನಿಮಾ ಆಸ್ಕರ್ ಗೆ ಎಂಟ್ರಿಕೊಟ್ಟಿದೆ. ಈ ಬೆನ್ನಲ್ಲೇ ಬಾಲಿವುಡ್ ನಟ ರಣ್ದೀಪ್ ಹೂಡಾ ನಟಿಸಿ, ನಿರ್ದೇಶಿಸಿರುವ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಚಿತ್ರವು ಅಧಿಕೃತವಾಗಿ 2025ರ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.
‘ಸ್ವಾತಂತ್ರ್ಯ ವೀರ್ ಸಾವರ್ಕರ್’ಚಿತ್ರವು ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಅವರ ಜೀವನಗಾಥೆಯನ್ನು ಹೊಂದಿದೆ. ಈ ಸಿನಿಮಾದಲ್ಲಿ ರಣ್ದೀಪ್ ಹೂಡಾ ಜೊತೆ ಬಾಲಿವುಡ್ ನಟಿ ಅಂಕಿತಾ ಲೋಖಂಡೆ ನಟಿಸಿದ್ದರು. ಈ ಚಿತ್ರ ಕಳೆದ ವರ್ಷ 2024ರಲ್ಲಿ ತೆರೆಕಂಡಿತ್ತು.
ಆಸ್ಕರ್ಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರು ಚಿತ್ರದ ನಿರ್ಮಾಪಕ ಸಂದೀಪ್ ಈ ಖುಷಿಯ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಂತಸದ ಜೊತೆ ಹೆಮ್ಮೆ ಹಾಗೂ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಗೌರವ ಹಾಗೂ ವಿನಮ್ರತೆ, ನಮ್ಮ ಸಿನಿಮಾ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಅಧಿಕೃತವಾಗಿ ಆಸ್ಕರ್ಗೆ ಆಯ್ಕೆಯಾಗಿದೆ. ಈ ಚಿತ್ರವನ್ನು ಗುರುತಿಸಿದ ‘Film Federation Of India’ ತಂಡಕ್ಕೆ ಧನ್ಯವಾದಗಳು. ನಮ್ಮನ್ನು ಬೆಂಬಲಿಸಿದವರಿಗೂ ಧನ್ಯವಾದಗಳು ಎಂದಿದ್ದಾರೆ.